Advertisement

ಬೀಜಿಂಗ್‌ನಲ್ಲಿ ಕಂಡ ವೈರಸ್‌ ಆ. ಏಷ್ಯಾದ್ದು

10:10 AM Jul 03, 2020 | mahesh |

ಶಾಂಘೈ: ಜೂನ್‌ ಮೊದಲ ವಾರದಲ್ಲಿ ಬೀಜಿಂಗ್‌ನ ಹಲವೆಡೆಗಳಲ್ಲಿ ಕೋವಿಡ್‌ ವೈರಸ್‌ ಕಂಡುಬಂದಿದ್ದು 300ಕ್ಕೂ ಹೆಚ್ಚು ಮಂದಿ ಸೋಂಕಿಗೊಳಗಾಗಿದ್ದರು. ಆದರೆ ಈ ವೈರಸ್‌ ಚೀನದಲ್ಲಿ ಉತ್ಪತ್ತಿಯಾದ್ದಲ್ಲ, ಬದಲಿಗೆ ಆಗ್ನೇಯ ಏಷ್ಯಾದಿಂದ ಬಂದ ತಳಿ ಎಂದು ಚೀನದ ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ತಡೆ ಇಲಾಖೆ ಹೇಳಿದೆ.

Advertisement

ಇದೇ ಸಂದರ್ಭ ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರೂ ವೈರಸ್‌ ಬಗ್ಗೆ ಸಂಶೋಧನೆ ಮಾಡಿ ವರದಿ ನೀಡಿದ್ದು ಎರಡನೇ ಬಾರಿ ಬೀಜಿಂಗ್‌ನಲ್ಲಿ ಕಂಡ ವೈರಸ್‌ ಬೇರೆಯ ತಳಿಯಾಗಿದೆ. ಇದು ದಕ್ಷಿಣ ಅಥವಾ ಆಗ್ನೇಯ ಏಷ್ಯಾದಿಂದ ಬಂದಿದ್ದಾಗಿರಬಹುದು ಎಂದು ಹೇಳಿದೆ.

ಈ ಕುರಿತ ವರದಿಯನ್ನು ಸಂಶೋಧನ ವೆಬ್‌ಸೈಟ್‌ ಒಂದರಲ್ಲಿ ಪ್ರಕಟಿಸಲಾಗಿದೆ. ಬೀಜಿಂಗ್‌ನಲ್ಲಿ ಕೋವಿಡ್‌ ಸೋಂಕಿತರಿಂದ ಪಡೆದ ಮಾದರಿಗಳನ್ನು ವಿಶ್ವದ ಇತರೆಡೆಗಳಲ್ಲಿ ಕಂಡುಬಂದ 7643 ಮಾದರಿಗಳೊಂದಿಗೆ ಸಮೀಕರಿಸಿ ನೋಡಲಾಗಿದ್ದು, ಕೆಲವೊಂದು ಅಂಶಗಳಿಗೆ ಸಾಮ್ಯತೆ ಕಂಡುಬಂದಿದೆ.
ಯುರೋಪ್‌ನಲ್ಲಿ ಫೆಬ್ರವರಿ, ಮೇಯಲ್ಲಿ ಕಂಡುಬಂದ ವೈರಸ್‌ ರೀತಿ ಕೆಲವು ಕಂಡುಬಂದಿದ್ದರೆ, ಇನ್ನು ಕೆಲವು ಮೇ ಮತ್ತು ಜೂನ್‌ನಲ್ಲಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಕಂಡುಬಂದ ರೀತಿಯದ್ದಾಗಿದೆ ಎಂದು ಗುರುತಿಸಲಾಗಿದೆ.

ಮಾರ್ಚ್‌ ವೇಳೆ ಬೀಜಿಂಗ್‌ನಲ್ಲಿ ಎರಡನೇ ಬಾರಿಗೆ ಕೆಲವು ಜನರಿಗೆ ಸಣ್ಣ ಮಟ್ಟಿನ ರೋಗ ಲಕ್ಷಣಗಳು ಕಂಡುಬಂದಿತ್ತು. ಆಗ ಬಂದಿದ್ದ ವೈರಸ್‌ ಮತ್ತೆ ಮೂರು ತಿಂಗಳ ಬಳಿಕ ಬೇರೆ ದೇಶಗಳಿಗೂ ಹರಡಿದ್ದಿರಬಹುದು ಎಂದೂ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next