Advertisement

ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ “ದಿ ವಿಲನ್’ ಮೇಕಿಂಗ್ ಸಾಂಗ್ಸ್: Watch

04:26 PM Oct 09, 2018 | |

ಕರುನಾಡ ಚಕ್ರವರ್ತಿ ಶಿವರಾಜಕುಮಾರ್‌ ಮತ್ತು ಅಭಿನಯ ಚಕ್ರವರ್ತಿ ಸುದೀಪ್‌ ಅಭಿನಯದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ “ದಿ ವಿಲನ್’​ ಚಿತ್ರದ ಬಿಡುಗಡೆಗಾಗಿ ಇಡೀ ಚಿತ್ರರಂಗವೇ ಎದುರು ನೋಡುತ್ತಿದ್ದು, ಶಿವಣ್ಣ- ಸುದೀಪ್​ ನಟನೆಯನ್ನು ಅವರ ಅಭಿಮಾನಿಗಳು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಸಮಯದಲ್ಲಿ ಚಿತ್ರತಂಡ ಇತ್ತಿಚೆಗಷ್ಟೇ ಚಿತ್ರದ ವಿಡಿಯೋ ಟೀಸರ್​ ರಿಲೀಸ್ ಮಾಡಿತ್ತು.

Advertisement

ಅಲ್ಲದೇ ಟೀಸರ್ ವೀಕ್ಷಿಸಿದ ಅಭಿಮಾನಿಗಳು “ದಿ ವಿಲನ್‍’ಗೆ ಜೈಕಾರ ಕೂಡಾ ಹಾಕಿದರು. ಇದೀಗ ಚಿತ್ರತಂಡ ಚಿತ್ರದ ಹಾಡಿನ ಮೇಕಿಂಗ್ ಝಲಕ್ ವಿಡೀಯೋವನ್ನು ಬಿಡುಗಡೆ ಮಾಡಿದ್ದು, ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಅಲ್ಲದೇ ಹಾಡಿನ ಮೇಕಿಂಗ್ ವಿಡಿಯೋ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ತಿಂಗಳ 18ರಂದು ಆಯುಧ ಪೂಜೆ ದಿನ ಪ್ರಪಂಚದಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ.

ಹೀಗಾಗಿ, ನಿರ್ದೇಶಕ ಪ್ರೇಮ್​ ಸಾಂಗ್​ ಟೀಸರ್​ ಹರಿಬಿಟ್ಟಿದ್ದಾರೆ. “ದಿ ವಿಲನ್’ನಲ್ಲಿ ಒಟ್ಟು ಆರು ಹಾಡುಗಳಿದ್ದು, ಪ್ರತಿ ಹಾಡಿನಲ್ಲೂ ಹೊಸ ವಿಶೇಷತೆಗಳಿವೆ. ಅಲ್ಲದೇ ಶಿವಣ್ಣ- ಸುದೀಪ್​ ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನ ಗೆಟಪ್​ನಲ್ಲಿ ಮಿಂಚಿದ್ದಾರೆ. “ಐ ಆ್ಯಮ್​ ವಿಲನ್’​, “ಟಿಕ್ ಟಿಕ್​ ಟಿಕ್​’, “ಲವ್​ ಆಗೋಯ್ತೆ ನಿನ್​ ಮೇಲೆ’….. ಹೀಗೆ ಪ್ರತಿ ಹಾಡಿನಲ್ಲೂ ಬೇರೆ ಲೋಕವನ್ನೇ ಜೋಗಿ ಪ್ರೇಮ್​ ಸೃಷ್ಟಿಸಿದ್ದಾರೆ. 

ಇನ್ನು ಚಿತ್ರವನ್ನು ಸಿ.ಆರ್‌. ಮನೋಹರ್‌ ತಮ್ಮ ತನ್ವಿ ಫಿಲಂಸ್‌ ಲಾಂಛನದಲ್ಲಿ ನಿರ್ಮಿಸುತ್ತಿದ್ದು, ಗಿರೀಶ್‌ ಗೌಡ ಅವರ ಛಾಯಾಗ್ರಹಣ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಚಿತ್ರದಲ್ಲಿ ಶಿವರಾಜಕುಮಾರ್‌, ಸುದೀಪ್‌, ಶ್ರುತಿ ಹರಿಹರನ್‌, ಆ್ಯಮಿ ಜಾಕ್ಸನ್‌, ಮಿಥುನ್‌ ಚಕ್ರವರ್ತಿ, ಶ್ರೀಕಾಂತ್‌, ತಿಲಕ್‌ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರವು ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಅದ್ಧೂರಿಯಾಗಿ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next