Advertisement

ಸಮರ್ಪಕ ವಿದ್ಯುತ್‌ ಪೂರೈಕೆಗೆ ಗ್ರಾಮಸ್ಥರ ಆಗ್ರಹ

11:48 AM May 25, 2019 | Team Udayavani |

ಬೈಲಹೊಂಗಲ: ಸಮರ್ಪಕ ವಿದ್ಯುತ್‌ ಸರಬರಾಜು ಮಾಡುವಂತೆ ಒತ್ತಾಯಿಸಿ ತಾಲೂಕಿನ ವಕ್ಕುಂದ ಗ್ರಾಮದ ನೇಕಾರ ಸಮಾಜ ಬಾಂಧವರು ಪಟ್ಟಣದ ಕೆಪಿಟಿಸಿಎಲ್ ಕಚೇರಿ ಎದುರು ಗ್ಯಾಸ್‌, ಸಿಲಿಂಡರ್‌ ಇಟ್ಟು ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯಲ್ಲಿ ನೇಕಾರ ಸಮಾಜ ಬಾಂಧವರು ಮಾತನಾಡಿ, ನೇಕಾರ ಸಮಾಜ ಬಾಂಧವರು ವಿದ್ಯುತ್‌ ಮಗ್ಗಗಳನ್ನು ಹೊಂದಿದ್ದು, ನಮ್ಮ ಜೀವನವೆಲ್ಲಾ ಸಂಪೂರ್ಣವಾಗಿ ವಿದ್ಯುತ್‌ನ್ನೆ ಅವಲಂಭಿಸಿದೆ. ಪ್ರಸ್ತುತ 2ತಿಂಗಳಿನಿಂದ ಸಮರ್ಪಕ ವಿದ್ಯುತ್‌ ಸರಬರಾಜು ಇಲ್ಲದೇ ನಾವು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ನಮಗೆ ಬರುತ್ತಿರುವ ವಿದ್ಯುತ್‌ನ್ನು ಕೆಪಿಟಿಸಿಎಲ್ ಅಧಿಕಾರಿ ಆಚಾರ್ಯ ಅವರು ಬೇರೆಯವರಿಗೆ ಕೊಟ್ಟು ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಕ್ಕುಂದ ಗ್ರಾಮದಲ್ಲಿ ಒಟ್ಟು 200 ನೇಕಾರ ಕುಟುಂಬಗಳಿದ್ದು, ನಾವು ನೇಕಾರಿಕೆಯನ್ನೆ ಅವಲಂಭಿಸಿದ್ದೇವೆ. ಒಂದು ವೇಳೆ ವಿದ್ಯುತ್‌ ಇಲ್ಲದಿದ್ದಲ್ಲಿ ನಮ್ಮ ಉದ್ಯೋಗವೇ ನಿಂತು ಹೋಗುತ್ತದೆ. ವಿದ್ಯುತ್‌ ಕಳ್ಳರು ವಿದ್ಯುತ್‌ ಲೈನ್‌ಗಳಿಗೆ ಹುಕ್‌ಗಳನ್ನು ಹಾಕಿ ಲೈನ್‌ ಟ್ರಿಪ್‌ ಮಾಡುತ್ತಿದ್ದಾರೆ. ಶೀಘ್ರವೇ ವಿದ್ಯುತ್‌ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ನೇಕಾರ ಸಮಾಜದ ಮಹಿಳೆ ತುಳಸವ್ವ ಭಂಡಾರಿ ಮಾತನಾಡಿ, ವಕ್ಕುಂದ ಗ್ರಾಮದ ವ್ಯಾಪ್ತಿಗೆ ಬರುವ ಕೆಪಿಟಿಸಿಎಲ್ ಅಧಿಕಾರಿ ಆಚಾರ್ಯ ರೈತರಿಂದ, ನೇಕಾರ ಸಮಾಜ ಬಾಂಧವರಿಂದ ಲಂಚ ಪಡೆಯುತ್ತಿದ್ದಾರೆ. 1 ಮೋಟಾರ್‌ಗೆ 500 ರೂ.ರಂತೆ ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಲಂಚದ ಹಣ ಸಂಗ್ರಹವಾಗುತ್ತಿದೆ. ವಿದ್ಯುತ್‌ನ್ನು ಸರಿಯಾಗಿ ಸರಬರಾಜು ಮಾಡದೇ ನೇಕಾರ ಸಮಾಜದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆಚಾರ್ಯ ಅವರ ಮೇಲೆ ಮೇಲಧಿಕಾರಿಗಳು ಕ್ರಮ ಜರುಗಿಸದಿದ್ದರೆ ನಾವೇ ಕಠಿಣ ಕ್ರಮ ಕೈಗೊಳ್ಳುತ್ತವೆ ಎಂದು ಎಚ್ಚರಿಕೆ ನೀಡಿದರು.

ರೇಖಾ ಢವಳೆ ಮಾತನಾಡಿ, ಕೆಪಿಟಿಸಿಎಲ್ನವರು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿಲ್ಲ. ವಿದ್ಯುತ್‌ ಕಳ್ಳರ ಮೇಲೆ ಕೆಪಿಟಿಸಿಎಲ್ ಅಧಿಕಾರಿಗಳು ಕ್ರಮ ಜರುಗಿಸಲು ನಿಷ್ಕಾಳಜಿ ತೋರುತ್ತಿದ್ದಾರೆ. ವಿದ್ಯುತ್‌ ಕಳ್ಳರ, ಅನ್ಯಾಯ ಮಾಡುವವರ ಮೇಲೆ ಕ್ರಮ ಜರುಗಿಸಲು ಕೆಪಿಟಿಸಿಎಲ್ ಅಧಿಕಾರಿಗಳು ಮುಂದಾಗಬೇಕು ಎಂದರು.

Advertisement

ನೇಕಾರ ಸಮಾಜದ ಮುಖಂಡ ಮಲ್ಲಿಕಾರ್ಜುನ ಢವಳೆ ಮಾತನಾಡಿ, ಸಮರ್ಪಕವಾಗಿ ವಿದ್ಯುತ್‌ನ್ನು ಸರಬರಾಜು ಮಾಡದಿದ್ದರೆ ಪ್ರತಿಭಟನೆ, ಧರಣಿ ಸತ್ಯಾಗ್ರಹ ಮುಂದುವರೆಯಲಿದೆ. ಕೆಪಿಟಿಸಿಎಲ್ ಕಚೇರಿ ಎದುರೇ ಅಡುಗೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ಮಲ್ಲಪ್ಪ ಢವಳೆ, ಶಂಕರ ಢವಳೆ, ಫಕ್ಕೀರ ಕಾಂಬಳೆ, ರಾಜು ಬುಚಡಿ, ಶಿವಪ್ಪಾ ಢವಳೆ, ಶಹಜಾನ ಹುಡೇದ, ಅರುಣ ಢವಳೆ, ಪ್ರಕಾಶ ಸಂಭೋಜಿ, ಉಮೇಶ ಬುಚಡಿ, ಪ್ರಕಾಶ ಲೋಕರಿ, ಮಹೇಂದ್ರ ಢವಳೆ, ಮಾಲಾ ಢವಳೆ, ಗಂಗವ್ವ ಭಂಡಾರಿ, ಕಮಲವ್ವ ಢವಳೆ, ಗೌರವ್ವಾ ಬುಚಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next