Advertisement

ರೈತರ ಸಾಲಮನ್ನಾ ಮಾಡಲು ತೆರಾಲು ಗ್ರಾಮಸ್ಥರು ಆಗ್ರಹ

06:50 AM Sep 01, 2018 | |

ಮಡಿಕೇರಿ: ಅತಿವೃಷ್ಟಿಯಿಂದ ನಿರಾಶ್ರಿತರಾಗಿರುವ ಕೊಡಗಿನ ನೈಜ ಸಂತ್ರಸ್ತರನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವುದರೊಂದಿಗೆ ಬೆಳೆ ನಾಶವಾಗಿ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ರೈತರ ಸಾಲ ಮನ್ನಾ ಮಾಡಬೇಕೆಂದು ದಕ್ಷಿಣ ಕೊಡಗಿನ ಗಡಿ ಗ್ರಾಮವಾದ ತೆರಾಲುವಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುನಾಣಿ ಗ್ರಾಮ ಪಂಚಾಯತ್‌ ಸದಸ್ಯ ಬಿ.ಎಂ.ಗಿರೀಶ್‌ ಪೆಮ್ಮಯ್ಯ, ಕೇರಳದ ವಯನಾಡು ಜಿಲ್ಲೆಯ ಗಡಿಯಲ್ಲಿ, ಬೆಟ್ಟ ಗುಡ್ಡಗಳಿಂದ ಆವೃತ್ತವಾದ ಪ್ರದೇಶದಲ್ಲಿರುವ ತೆರಾಲು ಗ್ರಾಮದಲ್ಲಿ ಈ ಬಾರಿ 350 ಇಂಚಿಗೂ ಅಧಿಕ ಮಳೆಯಾಗಿ ಕೃಷಿ ಫ‌ಸಲು ಮತ್ತು ಕಾಫಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಹೆಚ್ಚುವರಿ ಅಕ್ಕಿ, ಸೀಮೆಎಣ್ಣೆಗೆ ಕುಡಿಯ ಜನಾಂಗ ಬೇಡಿಕೆ
ಮಡಿಕೇರಿ
: ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ಬೆಟ್ಟದ ತಪ್ಪಲಲ್ಲಿ ವಾಸಿಸುವ ಕುಡಿಯ ಜನಾಂಗದವರು ಕಳೆದ ಎರಡು ತಿಂಗಳಿಂದ ಕೂಲಿ ಕೆಲಸವಿಲ್ಲದೆ, ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಅತಿವೃಷ್ಟಿಯಿಂದ ಮುಂದಿನ ಎರಡು ತಿಂಗಳು ಕೂಲಿ ಕೆಲಸ ದೊರೆಯುವುದು ಕಷ್ಟವಾಗಿದೆ. 

ಹೀಗಾಗಿ, ಸರಕಾರ ಕುಡಿಯ ಜನಾಂಗದ ಕುಟುಂಬಗಳಿಗೆ ಮಾಸಿಕ 25 ಕೆ.ಜಿ.ಅಕ್ಕಿ ಹಾಗೂ 5 ಲೀಟರ್‌ ಸೀಮೆ
ಎಣ್ಣೆಯನ್ನು ಒದಗಿಸಬೇಕು ಎಂದು ಬುಡಕಟ್ಟು ಕೃಷಿಕರ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಕುಡಿಯರ ಎ.ಮುತ್ತಪ್ಪ ಒತ್ತಾಯಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದಾಗಿ ಕೊಡಗಿನ ಬೆಳೆಗಾರರು ಸೇರಿದಂತೆ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಹಕಾರ ಸಂಸ್ಥೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಎಲ್ಲ ವಿಧದ ಸಾಲಗಳನ್ನು ಸರಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next