Advertisement

ಜಿಪಂ ಕ್ಷೇತ್ರಕ್ಕಾಗಿ ರಸ್ತೆಗಿಳಿದ ಗ್ರಾಮಸ್ಥರು

06:51 PM Mar 09, 2021 | Team Udayavani |

ಸೇಡಂ: ಆಡಕಿ ಜಿಪಂ ಕ್ಷೇತ್ರ ಪುನರವಿಂಗಡಣೆ ವಿರೋಧಿಸಿ ಗ್ರಾಮಸ್ಥರು ರಾಜ್ಯ ಹೆದ್ದಾರಿ ತಡೆದು, ವಿಷ ಸೇವಿಸಲು ಯತ್ನಿಸಿದ ಘಟನೆ ತಾಲೂಕಿನ ಆಡಕಿ ಬಳಿಯ ವಾಗ್ಧಾರಿ ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯಲ್ಲಿ ಜರುಗಿದೆ. ಇತ್ತೀಚೆಗೆ ಸರ್ಕಾರ ಆಡಕಿ ಜಿಪಂ ಕ್ಷೇತ್ರವನ್ನು ಕೈಬಿಟ್ಟು, ಕುರಕುಂಟಾ ಗ್ರಾಮವನ್ನು ಜಿಪಂ ಕ್ಷೇತ್ರವನ್ನಾಗಿ ಘೋಷಿಸಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಆಡಕಿ ಜಿಪಂ ಕ್ಷೇತ್ರವನ್ನಾಗಿ ಮುಂದುವರೆಸಲು ಒತ್ತಾಯಿಸಿದ್ದರು.

Advertisement

ಸೋಮವಾರ ರಸ್ತೆಗಿಳಿದ ಗ್ರಾಮಸ್ಥರು, ಎರಡೂ¾ರು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ಅಲ್ಲದೆ ಪ್ರತಿಭಟನಾನಿರತ ಕೆಲವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಆಡಕಿ ಗ್ರಾಮವು ರಾಜ್ಯ ಹೆದ್ದಾರಿ 10ರ ಮುಖ್ಯರಸ್ತೆಯಲ್ಲಿದ್ದು, ಸುತ್ತ ಮುತ್ತಲಿನ 40 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ವ್ಯಾಪಾರ, ವಾಣಿಜ್ಯ, ರಾಜಕೀಯ ಚಟುವಟಿಕೆಯ ಪ್ರಮುಖ ತಾಣವಾಗಿದೆ. ಆಡಕಿ ಜಿಪಂ ಅಸ್ತಿತ್ವದಲ್ಲಿರುವುದು ಈ ಭಾಗದ ಎಲ್ಲಾ ಸಾರ್ವಜನಿಕರ ಒಕ್ಕೊರಲಿನ ಅಭಿಪ್ರಾಯವಾಗಿತ್ತು. ಆಡಕಿ ಜಿಪಂ ಎಲ್ಲಾ ಅಗತ್ಯ ಮೂಲ ಸೌಕರ್ಯಗಳಿಂದ ಕೂಡಿದೆ. ಉಪ ತಹಶೀಲ್ದಾರರ ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಸಂಘ ಸೇರಿದಂತೆ ಆಡಕಿ ಗ್ರಾಮವು ರಾಜ್ಯ ಹೆದ್ದಾರಿಯಲ್ಲಿರುತ್ತದೆ. ಹಾಲಿ ಚಾಲ್ತಿಯಲ್ಲಿರುವ ಆಡಕಿ ಜಿಪಂಅನ್ನು ಮುಂದುವರೆಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ನಂತರ ಸ್ಥಳಕ್ಕಾಗಮಿಸಿದ ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಅವರಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ಕೈಬಿಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಮನ್ನೆ, ಗೋವಿಂದ ಮುಡುಗುಲ್‌, ಶರಣಯ್ಯ ಕಲಾಲ್‌, ಸಾಯಿರೆಡ್ಡಿ ಮನ್ನೆ, ರಘುಪತಿರೆಡ್ಡಿ ಮನ್ನೆ, ವೆಂಕಟಪ್ಪ ನೀರೆಟಿ, ಶಾಮಪ್ಪ ಮಿಂದ, ಬಾಲರೆಡ್ಡಿ
ಗೊಲ್ಲಾ, ತಿರುಪತಿರೆಡ್ಡಿ ಯಲಗುಪಲ್ಲಿ, ಶ್ರೀನಿವಾಸ ಯಾದವ, ಭೀಮಯ್ಯ ಕಲಾಲ್‌, ಪ್ರಕಾಶ ಹೊಟ್ಟೆ, ಮೌನೇಶ ಬಡಿಗೇರ, ನರೇಂದ್ರರೆಡ್ಡಿ, ಪ್ರವೀಣ ದೇಶಪಾಂಡೆ, ಮಹಾದೇವಪ್ಪ ಕೋನಾಪುರ್‌, ನಾಗಪ್ಪ ಹುಂಡೇಕಾರ್‌, ವೆಂಕಟಪ್ಪ ಕೊತ್ತಾಪಲ್ಲಿ, ಚಂದ್ರಕಾಂತ ಪಾಟೀಲ, ಶ್ರೀಶೈಲರೆಡ್ಡಿ, ರಾಜೀವನ್‌ ರೆಡ್ಡಿ, ವೆಂಕಟೇಶ ಮುಡುಗುಲ್‌, ನವೀನರೆಡ್ಡಿ, ವಿಜಯಕುಮಾರ ಪಾಟೀಲ, ನವೀನಕುಮಾರ ರಾಜೋಳ್ಳ, ತಾಯಪ್ಪ ಭೋವಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next