Advertisement

ರಸ್ತೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ

04:10 PM Nov 30, 2019 | Suhan S |

ಹಳಿಯಾಳ: ರೈತರ ಜೀವನಾಡಿ ತಾಲೂಕಿನ ಕೇರವಾಡ ಗ್ರಾಮದ ಕೇರವಾಡ- ಮಾಗವಾಡ ರಸ್ತೆ ಬಗ್ಗೆ ರೈತನೊಬ್ಬ ಸಲ್ಲಿಸಿರುವ ದೂರನ್ನು ಇತ್ಯರ್ಥಪಡಿಸಿ, ಜಿಪಂದಿಂದ ಮಂಜೂರಿ ಆಗಿರುವ ಈ ರಸ್ತೆಯನ್ನು ಶೀಘ್ರವೇನಿರ್ಮಿಸಿಕೊಡುವಂತೆ ಕೇರವಾಡ ಗ್ರಾಮಸ್ಥರು ಶುಕ್ರವಾರ ತಹಶೀಲ್ದಾರ್‌ ಗೆ ಲಿಖೀತ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ.

Advertisement

ಮನವಿಯಲ್ಲಿ ಕೇರವಾಡ- ಮಾಗವಾಡ ರಸ್ತೆ ಜಿಪಂದಿಂದ ಮಂಜೂರಾಗಿ ಕಾಮಗಾರಿ ನಡೆದಿತ್ತು. ಆದರೆ ಈ ಮುಖ್ಯ ರಸ್ತೆ ನಿರ್ಮಾಣಕ್ಕೆ ರೈತ ವಿಠಲ ಈರಪ್ಪಾ ಗೌಡಾ ಎನ್ನುವವರು ತಕರಾರು ಸಲ್ಲಿಸಿ ತಮ್ಮ ಜಾಗೆ ಎಂದು ಹೇಳಿ ಕಾಮಗಾರಿಗೆ ಅಡ್ಡಿಪಡಿಸುತ್ತಿರುವುದು ಖಂಡನೀಯ. ಈ ರಸ್ತೆ ಅನೇಕ ದಶಕಗಳಿಂದ ಇದ್ದು ಇದರಿಂದ ಈ ಭಾಗದ ಭತ್ತ, ಕಬ್ಬು ಇತರ ಬೆಳೆಗಳನ್ನು ಸಾಗಿಸಲು ಅನುಕೂಲವಾಗುತ್ತದೆ ಎಂದಿದ್ದಾರೆ.

ಈ ವರ್ಷ ಭಾರಿ ಮಳೆಯಿಂದರಸ್ತೆ ಸಂಪೂರ್ಣ ಹಾಳಾಗಿದ್ದು ಸದ್ಯ ಮಂಜೂರಾದ ಈ ರಸ್ತೆಯನ್ನು ಶೀಘ್ರದಲ್ಲಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಮಾಡಬೇಕುಹಾಗೂ ಸಮಸ್ಯೆ ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜಿಪಂ ಮಾಜಿ ಸದಸ್ಯ ಕೈತಾನ ಬಾರಬೋಜಾ, ಪ್ರಮುಖ ರೈತರಾದಶಾಂತಾರಾಮ, ವಿಠಲ ಟೋಸುರ, ಹೊನ್ನಪ್ಪಾ ಗೌಡಾ, ಪರಶುರಾಮ ಮೇತ್ರಿ, ಶಂಬಾಜಿ ಗೌಡಾ, ನಾಗು ನಿಂಗನಗೌಡ, ಪಾಂಡು ಚಲವಾದಿ,ಮಾರುತಿ ಕಿತ್ತೂರಕರ, ಲಕ್ಷ್ಮಣ ವಡ್ಡರ, ಸುಭಾಷ ಗೌಡಾ, ನಾಗೇಂದ್ರ ಮಡಿವಾಳ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next