Advertisement

ರಸ್ತೆ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರ ಆಗ್ರಹ

11:54 AM Jun 26, 2019 | Team Udayavani |

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವಂದಿಗೆ ಗ್ರಾಪಂ ವ್ಯಾಪ್ತಿಯ, ಬೊಳೆ ಗ್ರಾಮ ಜಮಗೋಡದ ಮಲಗೇರಿ ರಸ್ತೆ ತೀವ್ರ ಹದಗೆಟ್ಟಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.

Advertisement

ರಸ್ತೆ ತೀವ್ರ ಹದಗೆಟ್ಟಿರುವ ಪರಿಣಾಮ ಇಲ್ಲಿ ವಾಸಿಸುವ 40ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಚಾರಕ್ಕೆ ಅಯೋಗ್ಯವಾಗಿ ಪ್ರತಿನಿತ್ಯ ಅಪಘಾತಕ್ಕೆ ದಾರಿ ಮಾಡಿಕೊಡುತ್ತಿದೆ. ಈ ರಸ್ತೆಯನ್ನೆ ಅವಲಂಬಿಸಿರುವ ವಿದ್ಯಾರ್ಥಿಗಳು, ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಗಿದೆ. ಗ್ರಾಪಂ ಸದಸ್ಯೆ ಸರೋಜಾ ನಾಯಕ ಗ್ರಾಮ ವಿಕಾಸ ಯೋಜನೆಯಡಿ ಈ ರಸ್ತೆಯ ಅಭಿವೃದ್ಧಿಗೆ ಈ ಹಿಂದೆ 15 ಲಕ್ಷ ರೂ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದರು. ಆದರೆ ಗ್ರಾಮ ವಿಕಾಸ ಯೋಜನೆಯಿಂದ ದೊರೆಕಿದ್ದು ಮಾತ್ರ 8 ಲಕ್ಷ ರೂ ಮಾತ್ರ. ಹೀಗಾಗಿ ಈ ಅನುದಾನ ರಸ್ತೆಯ ಅಭಿವೃದ್ಧಿಗೆ ಸಮರ್ಪಕವಾಗಿ ಸಾಕಾಗದೆ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಯಿತು.

ಇನ್ನು 500 ಮೀ ರಸ್ತೆ ಆದಲ್ಲಿ ಗ್ರಾಮಸ್ಥರ ರೋಧನೆ ನಿಲ್ಲಲಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಮಲಗೇರಿ ರಸ್ತೆ ಅಭಿವೃದ್ಧಿಗೆ ಆಡಳಿತ ವ್ಯವಸ್ಥೆ ಮುಂದಾಗುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next