Advertisement
ಅವರು ಶುಕ್ರವಾರ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಚಾರ ಪ್ರಸ್ತಾಪಿಸಿದರು. ಇತ್ತೀಚೆಗೆ ಕೊಡಗಿನಲ್ಲಿ ದೈವದ ಜತೆ ಜನರು ಕುಣಿದಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಅದಕ್ಕೆ ಮಂಗಳೂರು ಭಾಗದಲ್ಲಿ ನಡೆದ ಚರ್ಚೆಯಲ್ಲಿ ವಿಚಾರ ಪ್ರಸ್ತಾಪಗೊಂಡು ಕುಣಿದಿರುವುದು ತಪ್ಪು ಎಂಬ ಕಲ್ಪನೆಯಲ್ಲಿ ಮಾತನಾಡಲಾಗಿದೆ ಎಂದು ತಿಳಿಸಿದ ಅವರು ದೈವದ ಜತೆ ಕುಣಿಯುವುದು ಕೊಡಗಿನಲ್ಲಿ ಕಟ್ಟುಕಟ್ಟಲೆಯಾಗಿದ್ದು, ಜನರು ತಮ್ಮ ಸಂತೋಷದ ಸಮಯದಲ್ಲಿ, ಹರಕೆ ರೂಪದಲ್ಲಿ ಅಥವಾ ಈ ಹಿಂದೆ ನಡೆದುಕೊಂಡು ಬಂದ ಪದ್ಧತಿಯಂತೆ ದೈವದ ಜತೆ ಕುಣಿಯುತ್ತಾರೆ. ಆ ಪದ್ಧತಿ ಈ ಭಾಗದಲ್ಲಿ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ನಡೆದ ಚರ್ಚೆಯಲ್ಲಿ ಈ ಭಾಗದ ದೈವ ನರ್ತಕರ ಅಥವಾ ದೈವರಾಧಕರ ಯಾವುದೇ ಹೇಳಿಕೆ, ಮಾಹಿತಿ ಪಡೆಯದೇ ತಪ್ಪು ಎಂಬಂತೆ ಬಿಂಬಿಸಿರುವುದು ಸರಿಯಲ್ಲ ಎಂದು ಅಜಿತ್ ಐವರ್ನಾಡು ತಿಳಿಸಿದರು.
Related Articles
Advertisement
ಏನಿದು ಘಟನೆ ?ಕೊಡಗಿನ ಮಾರ್ನಾಡು ಎಂಬಲ್ಲಿ ನಡೆದ ಶಿರಾಡಿ ದೈವದ ನೇಮದಲ್ಲಿ ದೈವದ ಜತೆ ಮಹಿಳೆಯರು, ಮಕ್ಕಳು ಕುಣಿಯುವ ವಿಡಿಯೋವೊಂದು ವೈರಲ್ ಆಗಿತ್ತು. ಇದಕ್ಕೆ ಮಂಗಳೂರು ಭಾಗದಲ್ಲಿ ವಿರೋಧದ ಮಾತು ಕೇಳಿ ಬಂದಿತ್ತು ಎನ್ನಲಾಗಿದೆ. ಅಲ್ಲದೆ ಚಾನೆಲ್ ವೊಂದರಲ್ಲಿ ನಡೆದ ಚರ್ಚಾಕೂಟದಲ್ಲಿಯೂ ಕುಣಿದಿರುವುದು ತಪ್ಪು ಎಂದು ಬಿಂಬಿಸಲಾಗಿದೆ. ವೈರಲ್ ವಿಡಿಯೋದಲ್ಲಿ ನರ್ತನ ಸೇವೆ ಮಾಡಿರುವ ವ್ಯಕ್ತಿ ಈ ಭಾಗದವರಾಗಿದ್ದರು. ಕೊಡಗಿನ ಸಂಪ್ರದಾಯದಂತೆ ದೈವದ ಜತೆ ಅಲ್ಲಿನ ಜನ ಕುಣಿದಿದ್ದಾರೆ ಎಂದು ಅಜಿತ್ ಐವರ್ನಾಡು ತಿಳಿಸಿದರು. ದೈವನರ್ತಕರಾದ ಕುಂಞ ಅಜಲ ಬೊಳಿಯಮಜಲು, ಮೋನಪ್ಪ ಅಜಲ ಮಾಡವು, ಶ್ರೀಧರ ಅಜಲ ಮೈತಡ್ಕ, ಉಮೆಶ್ ಬೊಳಿಯಮಜಲು, ಅಜಿತ್ ಐವರ್ನಾಡು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.