Advertisement
ಬೆಳ್ಳಾರೆ ಪರಿಸರದ ನಿವಾಸಿ ಹಾಗೂ ಗ್ರಾ.ಪಂ. ಅಧ್ಯಕ್ಷ ನಝೀರ್, ಪುತ್ತೂರಿನ ಶೌಕತ್ ಅಲಿ ಹಾಗೂ ಜಾಬೀರ್ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 11ಕ್ಕೇರಿದೆ.
ಬುಧವಾರ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಮುರಳೀಧರ, ಚಂದ್ರಶೇಖರ ಮಯ್ಯ, ಶ್ರೇಯಾನ್ ಎಸ್., ಪೂವಪ್ಪ ಕೆ., ಪವನ್ ಕುಮಾರ್ ಡಿ., ಮೋಹಿತ್ ಪಿ. ಜಿ., ಧ್ಯಾನ್ ಎ. ಎನ್., ಅದ್ವಿತ್ ಕುಮಾರ್ ನಾಯ್ಕ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಪುತ್ತೂರಿನ ನ್ಯಾಯಾಲಯವು ಶನಿವಾರಕ್ಕೆ ಮುಂದೂಡಿದೆ. ಯುವತಿಯ ಅರೆನಗ್ನ ವೀಡಿಯೋ: ಕೇಸು ದಾಖಲು
ಪುತ್ತೂರು: ಹುಡುಗಿಯೊಬ್ಬಳು ತನ್ನ ಅರೆಬೆತ್ತಲೆ ಶರೀರವನ್ನು ಪ್ರದರ್ಶಿಸಿ ವೀಡಿಯೋ ಕಾಲ್ ಮಾಡುತ್ತಿರುವ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದು, ಈ ಸಂಬಂಧ ಪುತ್ತೂರು ನಗರ ಠಾಣಾ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹುಡುಗಿಯು ಮೊಬೈಲ್ ಮೂಲಕ ಯಾರಿಗೋ ವೀಡಿಯೋ ಕಾಲ್ ಮಾಡಿದ್ದು, ತನ್ನ ಅರೆನಗ್ನ ದೇಹವನ್ನು ಫೋನ್ ಸಂಪರ್ಕದಲ್ಲಿರುವ ವ್ಯಕ್ತಿಗೆ ಪ್ರದರ್ಶಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಇದು ಭಾರೀ ವೈರಲ್ ಆಗಿದ್ದು, ಇದರಿಂದ ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಭಂಗ ಉಂಟಾಗಿದೆ ಹಾಗೂ ಮಹಿಳೆಯರ ಗೌರವಕ್ಕೆ ಚ್ಯುತಿ ಉಂಟಾಗಿದೆ ಎಂದು ಆಪಾದಿಸಲಾಗಿದೆ. ಪೊಲೀಸರು ಹುಡುಗಿ ಹಾಗೂ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.