Advertisement
ಕೆಕೆಆರ್ ಪಾಲಿಗೆ ಇದು ಮಹತ್ವದ ಪಂದ್ಯವಾಗಿದ್ದು, ಪ್ಲೇ ಆಫ್ಗೇರಲು ಮುಂಬೈ ವಿರುದ್ಧ ದೊಡ್ಡ ಮೊತ್ತದ ಗೆಲುವು ಅನಿವಾರ್ಯ. ಇತ್ತ ಮುಂಬೈಗೆ ತವರಿನ ಪಂದ್ಯವಾದರಿಂದ ಜಯಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಯೋಜನೆ ಹಾಕಿಕೊಂಡಿದೆ. ರಸೆಲ್ ಮತ್ತು ಹಾರ್ದಿಕ್ ಪಾಂಡ್ಯ ಈ ಪಂದ್ಯದ ಪ್ರಮುಖ ಆಕರ್ಷಣೆ. ಮೊದಲ ಮುಖಾಮುಖೀಯಲ್ಲಿ ಇವರಿಬ್ಬರು ಬಿರುಸಿನ ಬ್ಯಾಟಿಂಗ್ ನಡೆಸಿ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಿದ್ದರು. ಈ ಪಂದ್ಯದಲ್ಲೂ ಅವರಿಂದ ಬಿರುಸಿನ ಬ್ಯಾಟಿಂಗ್ ವೈಭವವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮುಂಬೈ ಬ್ಯಾಟಿಂಗ್ ಬಲ ಮಧ್ಯಮ ಕ್ರಮಾಂಕದಲ್ಲಿ ಅಡಗಿದೆ. ಆಲ್‌ರೌಂಡರ್ ಪಾಂಡ್ಯ ಬ್ರದರ್ಸ್ ಮತ್ತು ಪೊಲಾರ್ಡ್ ದೊಡ್ಡ ಮೊತ್ತ ಪೇರಿಸಲು ಸಮರ್ಥರು. ಇನ್ನು ಡಿ ಕಾಕ್, ನಾಯಕ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಮುಂಬೈ ಬೌಲಿಂಗ್ ತುಂಬಾ ಘಾತಕ. ಯಾರ್ಕರ್ ಸ್ಪೆಷಲಿಸ್ಟ್ ಲಸಿತ ಮಾಲಿಂಗ ಮತ್ತು ಜಸ್‌ಪ್ರೀತ್ ಬುಮ್ರಾ ಎಲ್ಲ ಪಂದ್ಯಗಳಲ್ಲಿ ಮಿಂಚುತ್ತಿದ್ದಾರೆ. ಉಳಿದಂತೆ ಪಾಂಡ್ಯ ಬ್ರದರ್, ರಾಹುಲ್ ಚಹರ್ ಉತ್ತಮ ಲಯದಲ್ಲಿದ್ದಾರೆ.
Related Articles
Advertisement