Advertisement

ಹಡಪದ-ಶ್ವೇತಾ ಪ್ರಭು ಹಾಡುಗಾರಿಕೆಗೆ ತಲೆದೂಗಿದ ಪ್ರೇಕ್ಷಕರು

10:22 AM Dec 01, 2017 | |

ಶಹಾಬಾದ: ಸಮೀಪದ ಭಂಕೂರ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವಲಯದ ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತ ಆಯೋಜಿಸಲಾದ ಸಂಗೀತ ಸುಧೆ ಕಾರ್ಯಕ್ರಮದಲ್ಲಿ ರಾಮಚಂದ್ರ ಹಡಪದ ನೇತೃತ್ವದಲ್ಲಿ ಮೂಡಿಬಂದ ಜನಪದ ಹಾಡುಗಳ ಹಾಡುಗಾರಿಕೆ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು.

Advertisement

ಚಳಿಗಾಲದ ಚಳಿ ನಡುವೆ ಆಸೀನರಾಗಿದ್ದ ಕಲಾಸಕ್ತ ಪ್ರೇಕ್ಷಕರು ಅವರ ಹಾಡಿನ ಮೋಡಿಗೆ ತಲೆದೂಗಿದರು. ಇನ್ನೊಮ್ಮೆ, ಮತ್ತೂಮ್ಮೆ, ಮಗದೊಮ್ಮೆ ಹಾಡು ಹಾಡಬೇಕೆಂಬ ಪ್ರೀತಿಯ ಒತ್ತಾಯವನ್ನು ಪ್ರೇಕ್ಷಕರು ಮಾಡಿದರು.

ಶಿಶುನಾಳ ಶರೀಫರ ಕೊಡಗನ ಕೋಳಿ ನುಂಗಿತ್ತಾ, ಸೋರುತಿಹುದು ಮನೆಯ ಮಾಳಿಗಿ, ಎಲ್ಲಿ ನೋಡಿದರಲ್ಲಿ ರಾಮ.. ಜೈಜೈ ರಾಮ, ರಾಷ್ಟ್ರ ಕವಿ ಜಿ.ಎಸ್‌. ಶಿವರುದ್ರಪ್ಪ ಅವರ ಕಾಣದ ಕಡಲಿಗೆ ಹಂಬಲಿಸಿದೆ ಹಾಡನ್ನು ಹಾಡುವ
ಮೂಲಕ ರಾಷ್ಟ್ರ ಕವಿಗೆ ಗೀತ ನಮನ ಸಲ್ಲಿಸಿದರು.

ದ.ರಾ. ಬೇಂದ್ರೆ ಅವರ ಶ್ರಾವಣ ಬಂತು, ಶ್ರಾವಣ ಬಂತು, ಶ್ರಾವಣ, ಕುರುಬರೋ ನಾವು ಕುರುಬರೋ ಮೊದಲಾದ ಹಾಡುಗಳನ್ನು ರಾಮಚಂದ್ರ ಹಡಪದ ಹಾಡಿದರು.

ಗಾಯಕಿ ಶ್ವೇತಾ ಪ್ರಭು ಅವರಿಂದ ಮೂಡಿಬಂದ ಕುವೆಂಪು ಅವರ ಇಳಿದು ಬಾ ತಾಯೆ..ಇಳಿದು ಬಾ, ಕೆ.ಎಸ್‌
.ನರಸಿಂಹಸ್ವಾಮಿ ಅವರ ದೀಪವು ನಿನ್ನದೇ ಗಾಳಿಯು ನಿನ್ನದೇ, ಆರದಿರಲಿ ಬೆಳಕು, ಎಂಥ ಮೋಜಿನ ಕುದುರಿ,
ಹತ್ತಿದಾಗ ತಿರುಗಿದಾಗ ಹನ್ನೊಂದು ಕೆರಿ, ಅಮ್ಮ ನಾನು ದೇವರಾಣೆ ಬೆಣ್ಣೆ ಕದಿಲಮ್ಮ ಹಾಡಿಗೆ ಪ್ರೇಕ್ಷಕರು ತಲೆತೂಗಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next