Advertisement
ಕೇವಲ 20 ರೂ.ಗೆ ಒಂದು ಪ್ಲೇಟ್ ಸೂಸಲಾ ಮಾರಾಟ ಮಾಡುತ್ತಾರೆ. ತುಂಬಿದ ಕಡಾಯಿ 10ನೇ ನಿಮಿಷದಲ್ಲಿ ಖಾಲಿ ಆಗುತ್ತದೆ. ಈ ರೀತಿಯ ವ್ಯಾಪಾರ ಕೂಡಿಸಿ ಕೊಂಡಿದ್ದು ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ನಾಗರಾಜ ಕಾಳಗಿ. ರಾವೂರಿನ ಪ್ರಮುಖ ವೃತ್ತದಲ್ಲಿ ಭುವನ್ ಎಂಬ ಹೋಟೆಲ್ ಇಟ್ಟುಕೊಂಡು ನವೋದ್ಯಮ ಸ್ಥಾಪಿಸಿದ ಮಾದರಿ ಇದು.
ನಾಗರಾಜ ಕಾಳಗಿ ಸೂಸಲಾ ಮಾಡುವ ವಿಡಿಯೋ ಯುಟ್ಯೂಬ್‌ನಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿ ಬಂದು ಸೂಸಲಾ ತಿಂದವರೆಲ್ಲ ಸೈ ಎಂದಿದ್ದಾರೆ. ಟೇಸ್ಟ್ ಡಿಫರೆಂಟ್ ಇದೆ. ಪುಟಾಣಿ(ಹುರಿಗಡಲೆ ಹಿಟ್ಟು)ಹಾಗೂ ಹಾಲಿನ ಬಳಕೆ ಮಾಡುವುದರಿಂದ ರುಚಿ ಗ್ರಾಹಕರಿಗೆ ಹಿಡಿಸುತ್ತಿದೆ.
Related Articles
Advertisement
ನಾವು ಈ ಕಡೆಯಿಂದ ಹೋಗುತ್ತಿದ್ದರೆ ರಾವೂರ್‌ದಲ್ಲಿ ಇಳಿದು ಸೂಸಲಾ ತಿಂದು ಹೋಗುವುದು ಪಕ್ಕಾ. ಇವರ ಕೈ ರುಚಿಯೇ ಬೇರೆ. ಒಳ್ಳೆಯ ಎಣ್ಣಿ, ಚುರುಮುರಿ, ಮಸಾಲೆ ಬಳಕೆ ಮಾಡ್ತಾರೆ. ಎಷ್ಟು ತಿಂದರೂ ಸಾಲದು. ಅದರಲ್ಲೂ 20ರೂ.ಗೆ ಮಾರಾಟ ಮಾಡುವುದು ಗ್ರಾಮೀಣ ಭಾಗದಲ್ಲಿ ಎಲ್ಲರಿಗೂ ಖುಷಿ ಇದೆ.ರಾಯಪ್ಪ, ಸೂಸಲಾ ಪ್ರಿಯ ನಾನು ತುಂಬಾ ಪರಿಶ್ರಮದಿಂದ ಸೂಸಲಾ ಮಾಡ್ತೀನಿ. ಶುದ್ಧವಾಗಿ ತಯಾರಿಸಿ ಜನರಿಗೆ ಕೊಡುವುದೇ ನನ್ನ ಧ್ಯೇಯ. ದೇವರ ಇಚ್ಚೆ ಅದೆಷ್ಟೋ ಜನರಿಗೆ ನನ್ನ ಕೈಯಿಂದ ರುಚಿಯಾದ ಅಡುಗೆ ಮಾಡಿ ಕೊಡ್ತೀನಿ. 20ರಿಂದ 25ಚೀಲ ಚುರುಮುರಿ ಖರ್ಚಾಗುತ್ತದೆ. ಬೆಳಗ್ಗೆ 6ರಿಂದ 11ಗಂಟೆವರೆಗಷ್ಟೇ ಮಾರಾಟ ಮಾಡ್ತೀವಿ. ಎಂಪಿ, ಎಂಎಲ್‌ಎ ಅವರೆಲ್ಲ ಸೂಸಲಾ ತಿಂದು ಹೋಗ್ತಾರ.ಭಾಳ್ ಖುಷಿ ಇದೆ.
ನಾಗರಾಜ ಕಾಳಗಿ, ಸೂಸಲಾ ತಯಾರಕ ಸೂರ್ಯಕಾಂತ ಎಂ.ಜಮಾದಾರ