Advertisement

ಬಡ್ತಿ ಮೀಸಲಾತಿ ತೀರ್ಪು ಅನುಷ್ಠಾನಗೊಳಿಸಿ

04:40 PM Mar 22, 2017 | Team Udayavani |

ಕಲಬುರಗಿ: ರಾಜ್ಯ ಸರ್ಕಾರಿ ನೌಕರರ ಬಡ್ತಿ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರಿಗೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಬಡ್ತಿಯಲ್ಲಿ ಮೀಸಲಾತಿ ದೊರೆತಿರುವುದನ್ನು ಹಿಂದಕ್ಕೆ ಪಡೆದು ಇತರೆ ವರ್ಗದ ಅರ್ಹರಿಗೆ ನೀಡಬೇಕೆಂದು ನೀಡಿದ ತೀರ್ಪನ್ನು ಅನುಷ್ಠಾನಗೊಳಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಹಿಂಸಾ ಒಕ್ಕೂಟ ನೇತೃತ್ವದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು. 

Advertisement

ದೇಶದ ಸರ್ವೋಚ್ಚ ನ್ಯಾಯಾಲಯವು ಫೆಬ್ರುವರಿ 9ರಂದು ನೀಡಿರುವ ತೀರ್ಪನ್ನು ಕಾರ್ಯಾನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಹಾಲಿ ಹಾಗೂ ನಿವೃತ್ತ ಸರ್ಕಾರಿ, ಅರೆ ಸರ್ಕಾರಿ ನೌಕರರ ಹಿತರಕ್ಷಣಾ (ಅಹಿಂಸಾ) ಒಕ್ಕೂಟ ಪದಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ಹೋರಾಟಗಾರರು ನಗರದ ವೀರಶೈವ ಕಲ್ಯಾಣ ಮಂಟಪದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್‌ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ಬೀದರ ಜಿಲ್ಲೆಯಿಂದ ಸಾವಿರಾರು ನೌಕರರು ಪಾಲ್ಗೊಂಡಿದ್ದ ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ನೌಕರರು ಭಾಗವಹಿಸಿ, ರಾಜ್ಯ ಸರ್ಕಾರದ ಕೆಲವು ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ. 15ರ ಬದಲು 45ರಿಂದ 78 ಪ್ರತಿಶತವರೆಗೆ ಬಡ್ತಿ ಸಿಕ್ಕಿದೆ.

ಅದೇ ರೀತಿ ಪರಿಶಿಷ್ಟ ಪಂಗಡದವರಿಗೆ ಶೇ. 3ರ ಬದಲು 14ರಿಂದ 23 ಪ್ರತಿಶತ ಮೀಸಲಾತಿ ದೊರೆತಿದೆ. ಇದನ್ನು ಸರಿಪಡಿಸಲು ನ್ಯಾಯಾಲಯ ಆದೇಶವಿತ್ತಿದೆ. ಇದಕ್ಕೆ ಸರ್ಕಾರ ಸ್ಪಷ್ಠಿಕರಣ ನೀಡದೇ ಮೌನವಾಗಿ ಕುಳಿತಿದೆ. ಹೀಗಾಗಿ ಹೋರಾಟಕ್ಕೆ ಮುಂದಾಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮೆರವಣಿಗೆ: ನಗರವಲ್ಲದೇ ವಿವಿಧ ತಾಲೂಕುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಹಿಳಾ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೃಹತ್‌ ಪ್ರತಿಭಟನೆಯಿಂದ ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಎಸ್ಪಿ ಎನ್‌. ಶಶಿಕುಮಾರ ಸೇರಿದಂತೆ ಇತರ ಅಧಿಕಾರಿಗಳು ಬಂದೋಬಸ್ತ್ ನಿರ್ವಹಿಸಿದರು. 

Advertisement

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಅರುಣಕುಮಾರ ಪಾಟೀಲ, ರವಿ ಬಿರಾದಾರ, ಸಂಗಮೇಶ ನಾಗನಹಳ್ಳಿ, ಶರಣು ಸಲಗರ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಹಾಲಿ ಹಾಗೂ ನಿವೃತ್ತ ಸರ್ಕಾರಿ, ಅರೆ ಸರ್ಕಾರಿ ನೌಕರರ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಸೂರ್ಯಕಾಂತ ಕದಂ,

ರಾಜು ಲೇಂಗಟಿ, ರವೀಂದ್ರ ಶಾಬಾದಿ, ಖಜಾಂಚಿ ಜಂಬನಗೌಡ ಶೀಲವಂತರ, ನಿಸಾರ ಅಹ್ಮದ, ಮಲ್ಲಯ್ಯ ಗುತ್ತೇದಾರ, ಕೃಷ್ಣ ಅಗ್ನಿಹೋತ್ರಿ, ಮಲ್ಲಣ್ಣ ಮಡಿವಾಳ, ಮುರುಗೇಂದ್ರ ವೀರಶೆಟ್ಟಿ, ಜಿ.ಡಿ.ನಂದಿಕೂರ, ಸಿದ್ದು ಗುಣಾರಿ, ಸೂರ್ಯಕಾಂತ ಪುಲಾರಿ, ಚಂದ್ರಕಾಂತ ಏರಿ ಹಾಗೂ ಮುಂತಾದವರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next