Advertisement

2002ರಲ್ಲೇ ಮೈಕ್‌ ಬಳಕೆ ಬಗ್ಗೆ ಕೋರ್ಟ್‌ ಹೇಳಿದೆ: ಸಚಿವೆ ಶಶಿಕಲಾ ಜೊಲ್ಲೆ

12:33 PM May 12, 2022 | Team Udayavani |

ಬೆಂಗಳೂರು: ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಅಳವಡಿಕೆ ವಿಚಾರ ಕುರಿತು ರಾಜ್ಯಾದ್ಯಂತ ವಿವಾದ ಭುಗೆಲೆದ್ದಿದ್ದು, ಈ ಬಗ್ಗೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿ, 2002 ರಲ್ಲೇ ಧಾರ್ಮಿಕ ಕ್ಷೇತ್ರಗಳಲ್ಲಿ ಎಷ್ಟು ಡೆಸಿಬಲ್ ಮೈಕ್ ಹಾಕಬೇಕು ಅಂತ ಕೋರ್ಟ್ ಹೇಳಿದೆ ಎಂದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್‌ ಸುತ್ತೊಲೆ ಹೊರಡಿಸಿರುವುದು ನಮಗೆ ಅನ್ವಯ ಆಗುತ್ತದೆ. ತೀರ್ಪನ್ನು ಎಲ್ಲರೂ ಪಾಲಿಸಬೇಕು.  ಪೊಲೀಸ್ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ ಕ್ರಮಕೈಗೊಳ್ಳುತ್ತದೆ. ಈ ತೀರ್ಪು ಕೇವಲ ಮಸೀದಿ ಮಾತ್ರವಲ್ಲ, ನಮ್ಮ ದೇವಸ್ಥಾನಕ್ಕೂ ಅನ್ವಯ ಆಗುತ್ತದೆ ಎಂದರು.

ಇದನ್ನೂ ಓದಿ:ಸಂಪುಟ ವಿಚಾರ: ಕೇಂದ್ರ ನಾಯಕರು ಶೀಘ್ರವೇ ತೀರ್ಮಾನ ಪ್ರಕಟಿಸಲಿದ್ದಾರೆ: ಬಿಎಸ್‌ವೈ

ದೇವಾಲಯಗಳಲ್ಲಿ ಬೆಳಿಗ್ಗೆ ಸುಪ್ರಭಾತ, ಮಸೀದಿಗಳಲ್ಲಿ ಅಜಾನ್ ನಡೆಯುತ್ತದೆ. ಅದಕ್ಕೆ ನಿಗದಿತ ಸಮಯ ಇರುತ್ತದೆ. ಅದರಂತೆ ಪಾಲನೆ ಮಾಡುತ್ತಾರೆ. ರಾತ್ರಿ, ಹಗಲು‌ ಧ್ವನಿವರ್ಧಕ ಹಾಕುವುದು ತಪ್ಪಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next