Advertisement
ಸಮರ್ಪಕ ನಿರ್ವಹಣೆ ಇಲ್ಲದೇ ದೇಗುಲ ಕುಸಿಯುವ ಹಂತ ತಲುಪಿದೆ. ಮಳೆಗಾಲದಲ್ಲಿ ದೇಗುಲದೊಳಗೆ ನೀರು ಸೋರಿದರೆ, ಬಿಸಿಲುಗಾಲದಲ್ಲಿ ಪ್ರಖರ ಬೆಳಕು ದೇಗುಲದ ಒಳಗೆ ನುಸುಳುತ್ತಿದೆ.
Related Articles
Advertisement
ಕಾಯಕಲ್ಪ ಬೇಕಿದೆ: ಜಿಲ್ಲೆಯಲ್ಲಿರುವ ಬೆರಳೆಣಿ ಕೆಯ ವೇಣುಗೋಪಾಲಸ್ವಾಮಿ ದೇವಾಲಯ ದಲ್ಲಿ ಇದು ಅಪರೂಪದ ಸುಂದರ ದೇಗುಲವಾಗಿದೆ. ಉಳಿವಿಗಾಗಿ ಸಾಕಷ್ಟು ಮನವಿ ಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ದೇಗುಲ ಜೀಣೊìದ್ಧಾರವಾದರೆ ರಾಜ್ಯದಲ್ಲಿಯೇ ಉತ್ತಮ ಪ್ರವಾಸಿ ಕೇಂದ್ರ ನಮ್ಮ ಗ್ರಾಮವಾಗಲಿದೆ ಎನ್ನುವುದು ನ್ಯಾಯಬೆಲೆ ಸೋಮಣ್ಣ ಅವರ ನುಡಿಯಾಗಿದೆ.
ಕನಸಿನ ಮಾತಾದ ಜೀರ್ಣೋದ್ಧಾರ
ದೇಗುಲದ ಒಳಾಂಗಣದಲ್ಲಿನ ಗರ್ಭಗುಡಿ, ನವರಂಗದಲ್ಲಿನ ಚಿತ್ತಾರ ಮೋಹಕವಾಗಿದ್ದು ಹಾಳಾಗದೆ ಉಳಿದಿದೆ. ನೋಡುಗರ ಮನಸ್ಸಿಗೆ ಶಿಲ್ಪಕಲೆಯ ಸಣ್ಣ ಕುಸುರಿ ಕೆಲಸ ಬೆರಗುಗೊಳಿಸುವಂತಿದೆ. ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಪೂಜಾ ಕೈಂಕರ್ಯ ಮಾತ್ರ ನಡೆಯುತ್ತಿದ್ದು, ಜೀರ್ಣೋದ್ಧಾರ ಕನಸಿನ ಮಾತಾಗಿದೆ ಎನ್ನುವುದು ಗ್ರಾಮದ ಜನತೆ ನಿವೇದನೆಯಾಗಿದೆ.
ತುರ್ತು ದೇಗುಲ ಉಳಿವಿಗೆ ರಾಜ್ಯ, ಕೇಂದ್ರ ಪುರಾತತ್ವ ಇಲಾಖೆ ಮುಂದಾಗಬೇಕಿದೆ. ಇಲ್ಲವಾದರೆ ದೇಗುಲವನ್ನು ಮುಂದಿನ ದಿನಗಳಲ್ಲಿ ಚಿತ್ರಪಟದಲ್ಲಿ ನೋಡಬೇಕಾದ ಸಂದಿಗ್ಧತೆ ಕಾಣಬೇಕಾಗಬಹುದು ಎಂಬುದು ಸ್ಥಳೀಕರ ಮೌನ ವೇದನೆಯಾಗಿದೆ.