Advertisement
ಪಲ್ಲಕ್ಕಿ ಉತ್ಸವದೊಂದಿಗೆ ಆಗಮಿಸಿದ ಹಿರೇಮಠದ ಶ್ರೀ ರೇಣುಕ ಗಂಗಾಧರ ಸ್ವಾಮೀಜಿ ಅವರನ್ನು ಭಕ್ತರು ವಾದ್ಯವೃಂದದೊಂದಿಗೆ ರಥದತ್ತ ಕರೆತಂದರು. ರಥದ ಮುಂಭಾಗದ ಮಂಟಪದಲ್ಲಿ ಬೈವೇದ್ಯಕ್ಕಾಗಿ ಇಡಲಾದ ಎಳ್ಳಿನ ಹೋಳಿಗೆ, ಜೋಳದ ಅನ್ನ ಮೊದಲಾದವುಗಳ ಮೇಲೆ ಹಾಯ್ದು ಸ್ವಾಮೀಜಿ ರಥದಲ್ಲಿ ಆಸೀನರಾಗುತ್ತಿದ್ದ ಹಾಗೆ ಭಕ್ತರಿಂದ ಶ್ರೀ ವೀರಭದ್ರೇಶ್ವರ ಮಹಾಜರಾಕೀ ಜೈ ಎಂಬ ಘೋಷಣೆ ಮುಗಿಲುಮುಟ್ಟಿತು. ಬಳಿಕ ಕಲಬುರಗಿ ಜಿಲ್ಲೆಯ ಶರಣಬಸಪ್ಪ ಕಲ್ಯಾಣಿ ಅವರು ರಥ ಹತ್ತಿದ್ದಾಗ ಭಕ್ತರಿಂದ ಕರತಾಡನ ಕೇಳಿಸುತಿದ್ದಂತೆ ರಥೋತ್ಸವ ಆರಂಭಗೊಂಡಿತು.
Related Articles
Advertisement
ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ದೇವಸ್ಥಾನ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ, ತಹಶೀಲ್ದಾರ್ ದೇವೇಂದ್ರ ಪಾಣಿ, ಪಿಕೆಪಿಎಸ್ ಅಧ್ಯಕ್ಷ ಶರಣಪಗೌಡ ಪಾಟೀಲ, ಜಿಲ್ಲಾ ಸಹಕಾರ ಬ್ಯಾಂಕ್ ಉಪಧ್ಯಕ್ಷ ಭೀಮರಾವ ಪಾಟೀಲ, ಅಗ್ನಿಕುಂಡ ಸಮಿತಿ ಅಧ್ಯಕ್ಷ ಡಿ.ಆರ್. ಚಿದ್ರಿ, ಪಲ್ಲಕ್ಕಿ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಳಶಟ್ಟಿ ಇದ್ದರು. ಇದೇ ವೇಳೆ ಜಾತ್ರಾ ಉತ್ಸವ ಯಶಸ್ಸಿಗೆ ಶ್ರಮಿಸಿದವರನ್ನು ಸಚಿವ ರಾಜಶೇಖರ ಪಾಟೀಲ ಸನ್ಮಾನಿಸಿದರು.