ಮುಂಬಯಿ, ನ. 23: ವಸಾಯಿಯಶ್ರೀ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ಇದರ 3ನೇವಾರ್ಷಿಕೋತ್ಸವ ಸಮಾರಂಭವು ನ. 16ರಂದು ರಾತ್ರಿ ವಸಾಯಿ ಸಾಯಿನಗರದ ರಂಗ ಮಂಟಪದ ವಿನೀತ್ ಕೆಮಿಕಲ್ಸ್ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಪಾಂಡು ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ದಿ| ಕರ್ನಿರೆ ಶ್ರೀಧರ ಶೆಟ್ಟಿ ಸಂಸ್ಮರಣಾರ್ಥ ನೀಡುವ ಯಕ್ಷಕಲಾ ಪೋಷಕ ಪ್ರಶಸ್ತಿಯನ್ನು ಪ್ರವೀಣ್ ಶೆಟ್ಟಿ ಪುತ್ತೂರು ಹಾಗೂ ಯಕ್ಷಕಲಾ ರತ್ನ ಪ್ರಶಸ್ತಿಯನ್ನು ಕಟೀಲು ಮೇಳದ ಪ್ರಧಾನ ಭಾಗವತ ಶ್ರೀನಿವಾಸ ಗೌಡ ಬಳ್ಳಮಂಜರಿಗೆ ಪ್ರದಾನಿಸಲಾಯಿತು. ಯಕ್ಷಕಲಾ ಗೌರವ ಪುರಸ್ಕಾರವನ್ನು ಪೂರ್ಣಿಮಾ ಅನೂಪ್ ಶೆಟ್ಟಿ ದಂಪತಿ, ಆಶಾ ಪ್ರಸಾದ್ ಶೆಟ್ಟಿ ದಂಪತಿ, ಗೀತಾ ಸಂತೋಷ್ ಶೆಟ್ಟಿ ಇವರಿಗೆ ಪ್ರದಾನಿಸಲಾಯಿತು.
ಯಕ್ಷಕಲಾ ಪ್ರತಿಭಾ ಪುರಸ್ಕಾರವನ್ನು ದೀಕ್ಷಾ ಶೆಟ್ಟಿ, ಲಕ್ಷೀತಾ ಎ. ಶೆಟ್ಟಿ, ಸಾಕ್ಷಿ ಆರ್. ಶೆಟ್ಟಿ ಅವರಿಗೆ ನೀಡಲಾಯಿತು. ದ. ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ ಪಡೆದ ಭಕ್ತಿ ಡಿ. ಬುನ್ನನ್, ಸಮೀಕ್ಷಾ ಎಸ್. ಶೆಟ್ಟಿ, ಶ್ರೀನಿಧಿ ಡಿ. ರೈ, ಪ್ರಥಮ್ ಎಸ್. ಶೆಟ್ಟಿ ಅವರನ್ನು ಗಣ್ಯರು ಗೌರವಿಸಿದರು. ಯಕ್ಷಗುರು ಕಟೀಲು ಸದಾನಂದ ಶೆಟ್ಟಿ ಹಾಗೂ ಕನ್ನಡ ಕಲಿಕಾ ವರ್ಗದ ಗುರು ಸುರೇಖಾ ಹರಿಪ್ರಸಾದ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ದಾನಿಗಳನ್ನು, ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ವಿಶೇಷವಾಗಿ ಗೌರವಿಸಲಾಯಿತು.
ಅತಿಥಿಗಳಾಗಿ ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ,ವಸಾಯಿ-ವಿರಾರ್ ಮಹಾನಗರ ಪಾಲಿಕೆಯ ನೂತನ ಮಹಾಪೌರ ಪ್ರವೀಣ್ ಶೆಟ್ಟಿ, ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ನಿತಿನ್ ರಾವುತ್, ಉದ್ಯಮಿ, ಸಮಾಜ ಸೇವಕ ಕಡಂದಲೆ ಸುರೇಶ್ ಭಂಡಾರಿ, ಸಿಎ ವಿಜಯ ಕುಂದರ್, ಕರುಣಾಕರ ಅಮೀನ್, ಪ್ರಭಾಕರ ಶೆಟ್ಟಿ ಮುದ್ರಾಡಿ, ಸುಧಾಕರ ಪೂಜಾರಿ, ಪ್ರವೀಣ್ ಶೆಟ್ಟಿ ಪುತ್ತೂರು, ವಿಶ್ವನಾಥ್ ಪಿ. ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ವಿಜಯ ಎಂ. ಶೆಟ್ಟಿ, ಯಶೋದಾ ಕೋಟ್ಯಾನ್, ಓ. ಪಿ. ಪೂಜಾರಿ, ದೇವೇಂದ್ರ ಬುನ್ನನ್, ಕರ್ನೂರು ಶಂಕರ ಆಳ್ವ, ಅನಿತಾ ಬುನ್ನನ್, ಉಷಾ ಶೆಟ್ಟಿ, ಮೋಹಿನಿ ಮಲ್ಪೆ, ಭಾರತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಿಜಯ ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮ ನಿರ್ವಹಿಸಿದರು. ದೇವೇಂದ್ರ ಬುನ್ನನ್ ವಂದಿಸಿದರು.