Advertisement
ರಾಜ್ಯ, ದೇಶ, ವಿದೇಶ ಹೀಗೆ ಜಗತ್ತಿನ ಮೂಲೆ ಮೂಲೆಗಳಲ್ಲಿ ದಿನನಿತ್ಯ ನಡೆಯುವ ಅನೇಕ ಆಶ್ಚರ್ಯಕರ ಹಾಗೂ ನಮ್ಮ ಜ್ಞಾನ ಹೆಚ್ಚಿಸುವಂಥ ಸುದ್ದಿಗಳನ್ನು ನಮಗೆ ಒದಗಿಸುವಲ್ಲಿ ಸುದ್ದಿ ಪತ್ರಿಕೆಗಳ ಪಾತ್ರ ಬಹು ದೊಡ್ಡದು. ಅನೇಕರಿಗೆ ದಿನ ಪತ್ರಿಕೆ ಒಂದುವುದು ಪ್ರಮುಖ ಹವ್ಯಾಸ. ಡಿಜಿಟಲ್ ಕ್ರಾಂತಿಯಿಂದಾಗಿ ಇಂದು ನಾವಿದ್ದಲ್ಲೇ ಎಲ್ಲ ಸುದ್ದಿಗಳನ್ನು ಮೊಬೈಲ್, ಕಂಪ್ಯೂಟರ್ ಇತ್ಯಾದಿಗಳ ಮೂಲಕ ಓದಬಹುದಾಗಿದೆ. ಆದರೆ ಇನ್ನೂ ಕೂಡ ಅನೇಕರಿಗೆ ಸುದ್ದಿ ಪತ್ರಿಕೆಗಳನ್ನು ಓದಿದಾಗಲೇ ಸಮಾಧಾನ. ಇದರಿಂದ ಇಂದಿಗೂ ಸುದ್ದಿ ಪತ್ರಿಕೆಗಳೂ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿವೆ. ವಿದ್ಯಾರ್ಥಿಗಳು ತಪ್ಪದೇ ಸುದ್ದಿ ಪತ್ರಿಕೆ ಓದುವುದರಿಂದ ಅನೇಕ ಲಾಭಗಳಿವೆ. ಅವರ ಓದಿಗೆ ಬೇಕಾದಂತ, ಸ್ಫೂರ್ತಿ ನೀಡುವಂತಹ ಅನೇಕ ಮಾಹಿತಿಗಳನ್ನು ಸುದ್ದಿ ಪತ್ರಿಕೆ ದಿನವೂ ಹೊತ್ತು ತರುತ್ತದೆ. ದಿನಕ್ಕೆ ಕನಿಷ್ಠ 1ರಿಂದ 2 ಗಂಟೆ ಇದಕ್ಕಾಗಿ ಮೀಸಲಿಟ್ಟರೆ ಸಾಕು. ಇದು ದಿನವಿಡೀ ನೀವು ಚಟುವಟಿಕೆಯಿಂದ ಇರಲು ಪ್ರೇರೇಪಿಸುತ್ತದೆ.
ಇದರಿಂದ ಸರಾಗವಾಗಿ ಯಾವುದೇ ಪುಸ್ತಕವನ್ನು ಓದುವ ಸಾಮರ್ಥ್ಯ ನಿಮಗೆ ಬರುತ್ತದೆ ಮತ್ತು ನಿಮ್ಮ ಬರವಣಿಗೆ ಕೌಶಲವನ್ನು ಸುಧಾರಿಸಿಕೊಳ್ಳಬಹುದು. ಜತೆಗೆ ಇದು ನಿಮ್ಮ ಟೈಮ್ ಪಾಸ್‌ಗೆ ಸಹಾಯ ಮಾಡುತ್ತದೆ. ಸಾಮಾನ್ಯ ಜ್ಞಾನ
ಸುದ್ದಿ ಪತ್ರಿಕೆಗಳು ಒಂದು ರೀತಿ ಸಾಮಾನ್ಯ ಜ್ಞಾನದ ಆಗರ. ಅಲ್ಲದೇ ಇಂದು ಕೇಂದ್ರ ಮತ್ತು ರಾಜ್ಯ ಸರಕಾರದ ಹುದ್ದೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರುವ ಅನೇಕ ಪ್ರಶ್ನೆಗಳಿಗೆ ಉತ್ತರಗಳು ಸುದ್ದಿ ಪತ್ರಿಕೆಯಲ್ಲಿರುತ್ತವೆ. ವಿದ್ಯಾರ್ಥಿಗಳಿಗೆ ಬೇಕಾದ ವಿವಿಧ ರೀತಿಯ ಕೋರ್ಸ್‌ಗಳು ಮತ್ತು ಅದಕ್ಕಿರುವ ಪ್ರಾಧಾನ್ಯತೆ ಬೆಯು ಮಾಹಿತಿ ಒದಗಿಸುತ್ತದೆ.
Related Articles
ಪತ್ರಿಕೆಗಳಿಂದ ಸಾಕಷ್ಟು ಮನರಂಜನೆ¿ಯೂ ಸಿಗುತ್ತದೆ. ನಿಮ್ಮ ಅಭಿರುಚಿಯ ಲೇಖನ, ಕ್ರೀಡಾ ಮಾಹಿತಿ, ಸಿನಿರಂಗ, ಗಾಸಿಪ್ ಹೀಗೆ ನಿಮಗೆ ವಿಭಿನ್ನ ರೀತಿಯಿಂದ ಮನರಂಜನೆಯನ್ನು ಪ್ರತಿಕೆ ಒದಗಿಸುತ್ತದೆ.
Advertisement
ಉತ್ತಮ ಮಾತುಗಾರಿಕೆinformation is wealth ಎನ್ನುವ ಹಾಗೆ ನಮ್ಮ ಮಾತುಗಳಲ್ಲಿ ಎಷ್ಟು ಮಾಹಿತಿ ಮತ್ತು ಆ ಮಾಹಿತಿ ಎಷ್ಟು ನಿಖರವಾಗಿರುತ್ತದೆ ಎನ್ನುವದರ ಆಧಾರದ ಮೇಲೆ ನಮ್ಮ ಮಾತುಗಾರಿಕೆ ತೀಕ್ಷ್ಣತೆಯನ್ನು ಹೊಂದಿರುತ್ತದೆ. ಉತ್ತಮ ಮಾತುಗಾರ ಅಗಬೇಕಿದ್ದರೆ ಅದಕ್ಕೆ ಸುದ್ದಿ ಓದುವುದು ತುಂಬಾ ಉಪಯುಕ್ತ. ಏಕೆಂದರೆ ವಿವಿಧ ವಿಷಯಗಳ ಬಗ್ಗೆ ಇಲ್ಲಿ ವಿಭಿನ್ನ ದೃಷ್ಟಿ ಕೋನದಲ್ಲಿ ಚರ್ಚೆಗಳು ನಡೆಯುತ್ತವೆ. ಇದನ್ನು ಓದುವುದರಿಂದ ಒಂದು ಸುದ್ದಿಯನ್ನು ಹೇಗೇ ವಿಭಿನ್ನ ರೀತಿಯಲ್ಲಿ ನೋಡಬೇಕು ಎನ್ನುವ ಪರಿಕಲ್ಪನೆ ಬೆಳೆಯುತ್ತದೆ. ಶಬ್ದ ಭಂಡಾರ
ಸುದ್ದಿ ಪತ್ರಿಕೆ ಓದುವುದು ನಿಮ್ಮಲ್ಲಿರುವ ಶಬ್ದಬಂಡಾರವನ್ನು ವೃದ್ಧಿಸಲು ಸಹಕಾರಿ. ಪತ್ರಿಕೆಯಲ್ಲಿ ಬರುವ ಸುಡೋಕು, ಪದಬಂಧ, ಫಜಲ್ ಮುಂತಾದ ಚಟುವಟಿಕೆಗಳು ನಿಮ್ಮಲ್ಲಿನ ಶಬ್ದ ಸಂಪತ್ತನ್ನು ಇಮ್ಮಡಿಗೊಳಿಸುತ್ತವೆ. ಇದರಿಂದ ನಿಮಗೆ ಹೊಸ ಹೊಸ ಪದಗಳ ಪರಿಚಯವೂ ಆಗುತ್ತದೆ. ಶಿವಾನಂದ್ ಎಚ್.