Advertisement

ವಾರಸುದಾರರ ಕೈಸೇರಿದ ಕೋಟಿ ಮೌಲ್ಯದ ಕಳವು ವಸ್ತು

12:55 PM Apr 01, 2018 | |

ಮಹದೇವಪುರ: ವೈಟ್‌ಫೀಲ್ಡ್‌ ಉಪವಿಭಾಗದ 8 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ವಾಹನ ಮತ್ತು ಆಭರಣ ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಈ ಸಂಬಂಧ 49 ಆರೋಪಿಗಳನ್ನು ಬಂಧಿಸಿ, ಇವರಿಂದ ವಶಕ್ಕೆ ಪಡೆದಿದ್ದ 1.6 ಕೋಟಿ ವîೌಲ್ಯದ ವಸ್ತುಗಳನ್ನು ಶನಿವಾರ ವಾರಸುದಾರರಿಗೆ ಒಪ್ಪಿಸಿದ್ದಾರೆ.

Advertisement

ಸಮೀಪದ ಕಾಡುಗೋಡಿ ಪೋಲಿಸ್‌ ಠಾಣೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ನಗರ ಪೋಲಿಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌, ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿದರು. ಕೆ.ಆರ್‌.ಪುರ, ಕಾಡುಗುಡಿ, ಮಾರತ್ತಹಳ್ಳಿ, ಮಹದೇವಪುರ, ಎಚ್‌ಎಎಲ್‌, ವರ್ತೂರು, ಬೆಳ್ಳಂದೂರು, ವೈಟ್‌ಫೀಲ್ಡ್‌ ಠಾಣೆಗಳ ಪೊಲೀಸರು ಸರಗಳವು, ಬೈಕ್‌, ಕಾರು ಕಳವು ಪ್ರಕರಣಗಳನ್ನು ಭೇದಿಸಿ,

140 ಬೈಕ್‌, 1 ಕೆ.ಜಿ ಚಿನ್ನಾಭರಣ, ಲ್ಯಾಪ್‌ ಟಾಪ್‌, ಮೊಬೈಲ್‌, ಒಂದು ಕಾರು, ಟೆಂಪೋ ಸೇರಿ ಒಂದು ಕೋಟಿಗೂ ಅಧಿಕ ವîೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಇದರೊಂದಿಗೆ ಎಟಿಎಂಗೆ ಜಮಾ ಮಾಡಬೇಕಿದ್ದ 52 ಲಕ್ಷ ರೂ. ದೋಚಿದ್ದ ಆರೋಪಿ ಪರಮೇಶ ಎಂಬಾತನನ್ನು ಬಂಧಿಸಿದ ಮಾರತ್ತಹಳ್ಳಿ ಪೋಲಿಸರು, ಆತನಿಂದ ವಶಕ್ಕೆ ಪಡೆದ 51.50 ಲಕ್ಷ ರೂ. ನಗದನ್ನು ಈ ವೇಳೆ ಪ್ರದರ್ಶಿಸಲಾಯಿತು.

ಚುನಾವಣೆ ಭದ್ರತೆ: “ವಿಧಾನಸಭೆ ಚುನಾವಣೆ ಹಿನ್ನೆಲೆ ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಈಗಾಗಲೇ ನಗರದಲ್ಲಿ ಪರವಾನಗಿ ಪಡೆದಿರುವ ಬಂದೂಕು ಮತ್ತಿತರ ಆಯುಧಗಳನ್ನು ತಮ್ಮ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ಠೇವಣಿ ಇರಿಸುವಂತೆ ಸೂಚಿಸಿದ್ದು, ಈವರೆಗೆ 8000 ಸಾವಿರ ಬಂದೂಕುಗಳನ್ನು ಠೇವಣಿ ಪಡೆಯಲಾಗಿದೆ.

ಉಳಿದವರು ಆಯಾ ಠಾಣೆ ವ್ಯಾಪ್ತಿಯಲ್ಲಿ ಆಯುಧಗಳನ್ನು ಠೇವಣಿ ಇರಿಸಲು ಸೂಚಿಸಲಾಗಿದೆ,’ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಮಾಹಿತಿ ನೀಡಿದರು. ಕೆಲ ತಿಂಗಳ ಹಿಂದೆ ಮಾರತ್ತಹಳ್ಳಿಯ ಅಶ್ವತ್ಥ ನಗರದಲ್ಲಿ ವೃದ್ಧ ದಂಪತಿಯನ್ನು ಅವರ ಮೊಮ್ಮಗನೇ ಕೊಂದು ಚಿನ್ನಾಭರಣ ದೋಚಿದ್ದ. ಪ್ರಕರಣದ ಆರೋಪಿ ಹಾಗೂ ಆತನಿಗೆ ನೆರವಾದ ಸ್ನೇಹಿತರನ್ನು

Advertisement

ಬಂಧಿಸಿದ ಪೊಲೀಸರು ಅವರಿಂದ ವಶಕ್ಕೆ ಪಡೆದ ಆಭರಣಗಳನ್ನು, ಮೃತ ವೃದ್ಧ ದಂಪತಿಯ ಮಗಳು (ಬಂಧಿತನ ತಾಯಿ) ಹೇಮಾ ಅವರಿಗೆ ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ಹೇಮಾ, “ನನ್ನ ಅಪ್ಪ, ಅಮ್ಮನನ್ನು ನನ್ನ ಮಗನೇ ಹತ್ಯೆ ಮಾಡುತ್ತಾನೆ ಎಂಬುದನ್ನು ಕನಸಲ್ಲೂ ಊಹಿಸಿರಲಿಲ್ಲ. ಅದೊಂದು ಕೆಟ್ಟ ಘಳಿಗೆ. ಈಗ ಆಭರಣ ಸಿಕ್ಕಿವೆ, ಆದರೆ ಹೋದ ಅಪ್ಪ, ಅಮ್ಮ ಸಿಗುವುದಿಲ್ಲ,’ ಎನ್ನುತ್ತಾ ಭಾವುಕರಾದರು.

Advertisement

Udayavani is now on Telegram. Click here to join our channel and stay updated with the latest news.

Next