Advertisement

“ಮೌಲ್ಯ ತಿಳಿಸಬೇಕಾದುದು ಶಾಲೆಯ ಕರ್ತವ್ಯ’

11:37 PM Jun 12, 2019 | Team Udayavani |

ಬಂಟ್ವಾಳ: ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸ ಬೇಕಾದುದು ಶಾಲೆಯ ಕರ್ತವ್ಯ. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರನ್ನು ಗುಲಾವ ುರಾಗಿಸುವ ಶಿಕ್ಷಣವನ್ನಷ್ಟೇ ನೀಡಲಾಗಿತ್ತು. ಭಾರತೀಯ ಮಣ್ಣಿನ ಅಂತಃಸತ್ವ ತಿಳಿಸುವ ನೈಜ ಶಿಕ್ಷಣವನ್ನು ಬದಲಾಯಿಸಿದರು. ಭಾರತೀಯ ಮೂಲ ತತ್ವ ಇತಿಹಾಸವನ್ನು ಕತ್ತಲೆಯಲ್ಲಿ ಇಡಲಾಯಿತು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದರು.

Advertisement

ಅವರು ಜೂ. 11ರಂದು ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ 2019-20ನೇ ಸಾಲಿ ನಲ್ಲಿ ಹೊಸದಾಗಿ ಶಾಲೆಗೆ ಸೇರಿದ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸರಕಾರವು ಸರಕಾರಿ ಶಾಲೆಯನ್ನು ಆಂಗ್ಲ ಮಾಧ್ಯಮವಾಗಿ ಮಾಡುವ ಮೂಲಕ ಕನ್ನಡವನ್ನು ಮೂಲೆ ಗುಂಪಾಗಿಸಿದೆ ಎಂದರು.

ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕರೆ ತರಲಾಯಿತು. ಅವರಿಗೆ ಅಧ್ಯಾಪಕ ವೃಂದದವರು ಆರತಿ, ಅಕ್ಷತೆ ತಿಲಕಧಾರಣೆ ಮಾಡಿ ಸಿಹಿ ನೀಡಿದರು. ಹೊಸದಾಗಿ ಸೇರಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಘೃತಾಹುತಿಯನ್ನು ಮಾಡಿ ದರು. ಅನಂತರ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ಆಶೀರ್ವಾದ ಪಡೆದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಓಂ ಸಾರಾ ಇನಾ ಕಂಪನಿಯ ಮಾಲಕ ಎಚ್‌.ಎನ್‌. ಚಂದ್ರಶೇಖರ್‌, ಕಾರ್ಕಳದ ಕಾರ‌್ಲ ಕನ್‌ಸ್ಟ್ರಕ್ಷನ್‌ ಕಂಪೆನಿಯ ಆಡಳಿತ ಪಾಲುದಾರ ಹಾಗೂ ದೇವದಾಸ್‌-ಸೌಮ್ಯಾ ಶೆಟ್ಟಿ ದಂಪತಿ, ಬಿ.ಎಸ್‌.ಎನ್‌.ಎಲ್‌ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಶ್ರೀಧರ್‌ ಭಟ್‌ ಗಿಲ್ಕಿಂಜ, ಮಂಡ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶನ್‌ ಗೌಡ, ಕರ್ನಾಟಕ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಮಂಗಳೂರಿನ ಅಸಿಸ್ಟೆಂಟ್‌ ಮ್ಯಾನೇಜರ್‌ ಚಂದ್ರಶೇಖರ್‌, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್‌, ಡಾ| ಕಮಲಾ ಪ್ರಭಾಕರ ಭಟ್‌, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಚೆನ್ನಪ್ಪ ಆರ್‌. ಕೋಟ್ಯಾನ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಸಾಲ್ಯಾನ್‌, ಮುಖ್ಯ ಶಿಕ್ಷಕ ರವಿರಾಜ್‌ ಕಣಂತೂರು, ಶಾಲಾಭಿವೃದ್ದಿ ಸಮಿತಿ ಹಾಗೂ ಮಾತೃ ಭಾರತೀ ಸಮಿತಿ ಸದಸ್ಯರು, ಹೆತ್ತವರು ಉಪಸ್ಥಿತರಿದ್ದರು.

ಮಾತಾಜಿಗಳಾದ ರೂಪಕಲಾ ಎಂ. ಸ್ವಾಗತಿಸಿ, ರೇಷ್ಮಾ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next