Advertisement

ಮಹಾಪುರುಷರ ಬದುಕಿನ ಮೌಲ್ಯ ನಮಗೆ ದಾರಿದೀಪ

01:02 PM Oct 14, 2019 | Team Udayavani |

ಹಿರೇಕೆರೂರ: ರಾಮಾಯಣವು ಸರ್ವಕಾಲಕ್ಕೂ ಪ್ರಸ್ತುತವಾದ ಮಹಾಗ್ರಂಥ ವಾಗಿದ್ದು, ನಮ್ಮ ಬದುಕು ತಿದ್ದಿಕೊಳ್ಳುವ ಸರಳ ಹಾಗೂ ಸುಂದರ ಸಾಧನವಾಗಿದೆ. ನಾವು ಮಹಾಪುರುಷರ ಮೌಲ್ಯಗಳನ್ನು ಅರಿತು ನಡೆದಾಗ ಮಾತ್ರ ಪುನೀತರಾಗುತ್ತೇವೆ ಎಂದು ಮುಖ್ಯ ಶಿಕ್ಷಕ ಚಂದ್ರಶೇಖರ ಅಂಗಡಿ ಹೇಳಿದರು.

Advertisement

ರಟ್ಟಿಹಳ್ಳಿ ತಾಲೂಕಿನ ಕವಳಿಕುಪ್ಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಸಂಸ್ಕಾರ, ಒಳ್ಳೆಯ ಪರಿಸರ, ವಿದ್ಯೆ, ಉತ್ತಮ ಮಾರ್ಗದರ್ಶನಗಳಿಂದ ಮಹಾ ಪುರುಷರಾಗಲು ಸಾಧ್ಯ ಹಾಗೂ ಸಜ್ಜನರ ಸಹವಾಸದಿಂದ, ಸಾಧನೆಯ ಬಲದಿಂದ ಮಾತ್ರ ಶ್ರೇಷ್ಠತೆ ಬರುತ್ತದೆ ವಿನಃ ಹುಟ್ಟಿನಿಂದಲ್ಲ ಎಂಬುದು ವಾಲ್ಮೀಕಿಯವರ ಜೀವನ ಚರಿತ್ರೆ ಯಿಂದ ತಿಳಿಯುತ್ತದೆ. ಆದಿಕವಿ ವಾಲ್ಮೀಕಿಯವರು ವೇದೋಪನಿಷತ್ತು ಪುರಾಣಗಳಲ್ಲಿ ಕುಶಲಿಗಳಾಗಿದ್ದರು ಮತ್ತು ಮಹಾತಪಸ್ವಿಗಳಾಗಿದ್ದರು. 24 ಸಹಸ್ರ ಶ್ಲೋಕಗಳನ್ನೊಳಗೊಂಡ ರಾಮಾಯಣ ಎಂಬ ಮಹಾಕಾವ್ಯ ರಚಿಸಿದ್ದಾರೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ರಾಜಶೇಖರ ಹುಲಗಿನಕಟ್ಟಿ, ಉಪಾಧ್ಯಕ್ಷೆ ಲತಾ ಹಿರೇಮಠ, ಶಶಿಕಲಾ ಕಂಬಾಳಿಮಠ, ರೇಣುಕಾರಾಧ್ಯ ಹಿರೇಮಠ, ಪ್ರೇಮಾ ಹಿರೇಮಠ, ಮುತ್ತುರಾಜ ಪವಾರ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next