Advertisement

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್‌ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

04:16 PM Sep 28, 2023 | Team Udayavani |

ಮುಂಬಯಿ: ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ʼದಿ ವ್ಯಾಕ್ಸಿನ್‌ ವಾರ್ʼ  ಸಿನಿಮಾ ಗುರುವಾರ (ಸೆ.28 ರಂದು) ರಿಲೀಸ್‌ ಆಗಿದೆ. ಸಿನಿಮಾಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ಕೇಳಿ ಬರುತ್ತಿದ್ದು, ʼಕಾಶ್ಮೀರ್‌ ಫೈಲ್ಸ್‌ʼ ಬಳಿಕ ಮತ್ತೊಂದು ಹಿಟ್‌ ಸಿಗುವ ನಿರೀಕ್ಷೆಯಲ್ಲಿ ವಿವೇಕ್‌ ಅಗ್ನಿಹೋತ್ರಿ ಇದ್ದಾರೆ.

Advertisement

ಕೋವಿಡ್‌ ಸಮಯದಲ್ಲಿ ಭಾರತದ ವಿಜ್ಞಾನಿಗಳ ಲಸಿಕೆ ತಯಾರಿಕೆಯ ಸವಾಲು – ಸಂಕಷ್ಟಗಳ ಕಥೆಯನ್ನೊಳಗೊಂಡಿರುವ ʼವ್ಯಾಕ್ಸಿನ್‌ ವಾರ್‌ʼ ಥಿಯೇಟರ್‌ ರಿಲೀಸ್‌ ಆಗಿದೆ. ಆದರೆ ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಆನ್ಲೈನ್‌ ನಲ್ಲಿ ಲೀಕ್‌ ಆಗಿದೆ ಎಂದು ಕೆಲ ವರದಿಗಳು ತಿಳಿಸಿದೆ.

ವರದಿಯ ಪ್ರಕಾರ, ವ್ಯಾಕ್ಸಿನ್‌ ವಾರ್‌ ಫಿಲ್ಮಿಜಿಲ್ಲಾ, 123 ಮೂವೀಸ್‌,ಫಿಲ್ಮ್‌ ವೆಪ್‌, ಆನ್ಲೈನ್‌ ಮೂವಿ ವಚಸ್‌,  ತಮಿಳು ರಾಕರ್ಸ್‌ ಸೇರಿದಂತೆ ಟೆಲಿಗ್ರಾಮ್‌ ನಲ್ಲಿ ಸಿನಿಮಾದ ಹೈ ಕ್ವಾಲಿಟಿ ಕಾಪಿ ಲೀಕ್‌ ಆಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Animal teaser ರಿಲೀಸ್: ʼಡಾರ್ಲಿಂಗ್‌ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

ಜನರು ಚಲನಚಿತ್ರದ ಉಚಿತ ಡೌನ್‌ಲೋಡ್‌ಗಾಗಿ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕುತ್ತಿದ್ದಾರೆ. ʼವ್ಯಾಕ್ಸಿನ್ ವಾರ್ʼ ಫ್ರೀ ಡೌನ್‌ಲೋಡ್, ʼದಿ ವ್ಯಾಕ್ಸಿನ್ ವಾರ್ʼ MP4 HD ಡೌನ್‌ಲೋಡ್, ʼದಿ ವ್ಯಾಕ್ಸಿನ್ ವಾರ್ʼ ತಮಿಳು ರಾಕರ್ಸ್, ʼದಿ ವ್ಯಾಕ್ಸಿನ್ ವಾರ್ʼ ಟೆಲಿಗ್ರಾಮ್ ಲಿಂಕ್‌ಗಳು, ʼದಿ ವ್ಯಾಕ್ಸಿನ್ ವಾರ್ ಮೂವೀ ಫ್ರೀ ಎಚ್‌ಡಿ ಡೌನ್‌ಲೋಡ್ ಹೀಗೆ ನಾನಾ ಕೀವರ್ಡ್‌ ಬಳಸಿಕೊಂಡು ಸಿನಿಮಾವನ್ನು ಹುಡುಕುತ್ತಿದ್ದಾರೆ ಎಂದು ʼಟೈಮ್ಸ್ ನೌʼ ವರದಿ ತಿಳಿಸಿದೆ.

Advertisement

ಇತ್ತೀಚಿನ ದಿನದಲ್ಲಿ ಸಿನಿಮಾವೊಂದರ ಹೆಚ್‌ ಡಿ ಕಾಪಿ ಅಥವಾ ಎಂಪಿ 4 ಕಾಪಿ ಆನ್ಲೈನ್‌ ನಲ್ಲಿ ಲಿಂಕ್‌ ಆಗುವುದು ಹೊಸತಲ್ಲ. ಶಾರುಖ್‌ ಖಾನ್‌ ಅವರ ʼಜವಾನ್‌ʼ, ವಿಕ್ಕಿ ಕೌಶಲ್‌ ಅವರ ʼದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿʼ,ಸಲ್ಮಾನ್‌ ಖಾನ್‌ ಅವರ ʼ ‘ಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಸೇರಿದಂತೆ ಇತರೆ ಸಿನಿಮಾಗಳು ರಿಲೀಸ್‌ ಆದ ಕೆಲವೇ ದಿನಗಳಲ್ಲಿ ಆನ್ಲೈನ್‌ ನಲ್ಲಿ ಲೀಕ್‌ ಆಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next