Advertisement

ನಗರದ ಖಾಲಿ ಸ್ಥಳಗಳು ಆಕರ್ಷಕ ಪಾರ್ಕಿಂಗ್‌ ತಾಣವಾಗಲಿ

04:26 PM Jun 10, 2018 | Team Udayavani |

ಮಂಗಳೂರು ನಗರ ದಿನೇ ದಿನೇ ಅಭಿವೃದ್ಧಿ ವಿಚಾರದಲ್ಲಿ ದಾಪುಗಾಲು ಇಡುತ್ತಿದ್ದು, ಸಮಸ್ಯೆಗಳೂ ಹೆಚ್ಚುತ್ತಿದೆ. ವಾಹನ ಸಂಖ್ಯೆ ಏರಿಕೆಯ ಪರಿಣಾಮ ಪಾರ್ಕಿಂಗ್‌ ಸ್ಥಳವಿಲ್ಲದೆ ರಸ್ತೆ ಬದಿಗಳಲ್ಲೇ ವಾಹನ ನಿಲ್ಲಿಸಬೇಕಾದ ಸ್ಥಿತಿ ಇದೆ. ಆದರೆ
ಇದು ಹೀಗೆ ಮುಂದುವರಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಅಪಾಯವಿದೆ.

Advertisement

ಹೀಗಾಗಿ ಸ್ಥಳೀಯಾಡಳಿತ ಸಂಸ್ಥೆಯೇ ಖಾಸಗಿ ಸಹಭಾಗಿತ್ವ ಪಡೆದು ನಗರದ ಪ್ರಮುಖ ಖಾಲಿ ಸ್ಥಳಗಳನ್ನು ಗುರುತಿಸಿ
ಆಕರ್ಷಣೀಯವಾಗಿ ಪೇ ಪಾರ್ಕಿಂಗ್‌ ಸ್ಥಳವಾಗಿ ರೂಪಿಸಿದಾಗ ನಗರದ ಸಮಸ್ಯೆಗೆ ಒಂದಷ್ಟು ಬ್ರೇಕ್‌ ಬಿದ್ದಂತಾಗುತ್ತದೆ. ಸಾಮಾನ್ಯ ಪಾರ್ಕಿಂಗ್‌ ಸ್ಥಳಕ್ಕಿಂತ ಭಿನ್ನವಾಗಿ ಆಕರ್ಷಕ ರೂಪ ಪಡೆದು ಕೊಂಡರೆ ಜನರು ವಾಹನ ನಿಲ್ಲಿಸುವುದಕ್ಕೂ ಮುಂದೆ ಬರುತ್ತಾರೆ.

ಜತೆಗೆ ಇಲ್ಲಿ ವಾಹನ ನಿಲ್ಲಿಸಿ ಸಾರ್ವಜನಿಕ ವಾಹನಗಳನ್ನು ಉಪಯೋಗಿಸುವಂತೆ ಪ್ರೇರಣೆ ನೀಡಿದಾಗ ಜನರು ತಮ್ಮ ವಾಹನವನ್ನು ಒಂದು ಕಡೆ ನಿಲ್ಲಿಸಲು ಮುಂದೆ ಬರುತ್ತಾರೆ. ಪ್ರಸ್ತುತ ಮಂಗಳೂರು ನಗರದಲ್ಲಿಯೂ ಸಾಕಷ್ಟು ಖಾಸಗಿ
ಖಾಲಿ ಸ್ಥಳಗಳು ಪಾಳು ಬಿದ್ದು ಕೊಂಡಿದೆ. ಇದರಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಸ್ಥಳವನ್ನು ಉಪಯೋಗಿಸುವುದು ಮತ್ತು ಸೌಂದರ್ಯ ಹೆಚ್ಚಿಸುವ ಎರಡು ಉದ್ದೇಶಗಳಿಂದ ಖಾಲಿ ಸ್ಥಳವನ್ನು ಬಳಸಿಕೊಳ್ಳಬೇಕಿದೆ.

ಈ ಕುರಿತು ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸುವ ಕಾರ್ಯವನ್ನೂ ಮಾಡಬೇಕು. ಜತೆಗೆ ವಾಹನವನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಿದರೆ ನಿಮಗೆ ಯಾವ ಸ್ಥಳಗಳಿಗೆ ತೆರಳಬಹುದು ಎಂಬ ಮಾಹಿತಿ ನೀಡುವ ಕಾರ್ಯವಾಗಬೇಕಿದೆ. ಜತೆಗೆ ರಸ್ತೆ ಬದಿ ನಿಲ್ಲಿಸಿರುವ ವಾಹನಗಳನ್ನು ಇಂತಹ ಪಾರ್ಕಿಂಗ್‌ ತಾಣಗಳಿಗೆ ಕಳುಹಿಸುವ ಕಾರ್ಯ ಮಾಡಬೇಕಿದೆ.

ಆಗ ನಗರದ ರಸ್ತೆಗಳು ಸಂಚಾರಕ್ಕೆ ಅನುಕೂಲವಾಗುವ ಜತೆಗೆ ಪಾದಚಾರಿಗಳಿಗೂ ನೆರವಾಗುತ್ತವೆ. ಖಾಲಿ ಸ್ಥಳಗಳ ಅಭಿವೃದ್ಧಿಗೆ ಸ್ಥಳೀಯ ಕಟ್ಟಡಗಳು, ವಾಣಿಜ್ಯ ಉದ್ಯಮಗಳ ಸಹಕಾರವನ್ನೂ ಪಡೆಯಬಹುದಾಗಿದೆ. ತಮ್ಮ ಗ್ರಾಹಕರು ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಾರೆ. ಇಂತಹ ಖಾಲಿ ಸ್ಥಳದ ಅಭಿವೃದ್ಧಿಗೆ ತಾವು ಸಹಕಾರ ನೀಡಿದರೆ ತಮಗೆ ಗ್ರಾಹಕರೂ ಹೆಚ್ಚಾಗಬಹುದು ಎಂದು ಮನವಿಯನ್ನೂ ಮಾಡಬಹುದಾಗಿದೆ. 

Advertisement

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next