Advertisement
ಗ್ರಾಮದ ಅನಂತರಾಮು ಮನೆಯ ಶೌಚಾಲಯದ ಪಿಟ್ ಒಳಗಿದ್ದ ಮಲ ಗಟ್ಟಿಯಾಗಿದ್ದ ಕಾರಣ ಯಂತ್ರದ ಸಹಾಯದಿಂದ ತೆಗೆಯಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಪೌರ ಕಾರ್ಮಿಕರನ್ನು ಬಳಸಿಕೊಂಡು ಅದನ್ನು ತೆಗೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೇಕೆನ್ನುವುದು ನಿಯಮ. ಆದರೂ ಪೌರ ಕಾರ್ಮಿಕರಿಗೆ 2 ಸಾವಿರ ರೂ. ಹಣ ಕೊಟ್ಟು ಬರಿಗೈನಿಂದಲೇ ಮಲವನ್ನು ಹೊರತೆಗೆಸಿರುವುದು ವಿವಾದಕ್ಕೆ ಕಾರಣವಾಗಿದೆ.
Related Articles
ವೊಂದರಲ್ಲಿ ತುಂಬಿಕೊಡುತ್ತಿದ್ದರೆ ಅದನ್ನು ಹೊತ್ತ ಮಹಿಳೆಯೊಬ್ಬರು ಟ್ರ್ಯಾಕ್ಟರ್‌ನಲ್ಲಿ ಸುರಿಯುತ್ತಿದ್ದುದು ಕಂಡು ಬಂದಿದೆ. ಪೌರ ಕಾರ್ಮಿಕರು ಸೇರಿದಂತೆ ಖಾಸಗಿ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ಮಲ ಹೊರುವಂತಹ ಅನಿಷ್ಠ ಪದ್ಧತಿಗೆ ಬಳಸಿಕೊಳ್ಳಬಾರದು ಎಂಬ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದ್ದರೂ ಅದಾವುದನ್ನೂ ಲೆಕ್ಕಿಸದೆ ಗ್ರಾಪಂ ಅಧಿಕಾರಿಗಳೇ ಮಲಹೊರುವ ಪದ್ಧತಿಯನ್ನು ಪೋಷಿಸುತ್ತಿರುವುದಕ್ಕೆ ಕೆರಮೇಗಳದೊಡ್ಡಿ ಪ್ರಕರಣ ಸಾಕ್ಷೀಭೂತ ವಾಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Advertisement
ಗ್ಲೌಸ್, ಶೂಗಳನ್ನೂ ಕೊಟ್ಟಿಲ್ಲ: ಸಕ್ಕಿಂಗ್ ಯಂತ್ರ ತಂದು ನೀರಿನ ರೂಪದಲ್ಲಿದ್ದ ತ್ಯಾಜ್ಯವನ್ನು ತುಂಬಿಸಿಕೊಂಡಿತು. ಆದರೆ, ಗಟ್ಟಿಯಾಗಿ ಉಳಿದಿದ್ದನ್ನು ತೆಗೆಯಲು ಸಾಧ್ಯವಾಗಲಿಲ್ಲ. ನಮಗೆ 2 ಸಾವಿರ ರೂ. ನೀಡಿ ಅದನ್ನು ತೆಗೆದುಬಿಡಿ. ಇಲ್ಲದಿದ್ದರೆ ಹೆಗ್ಗಣಗಳು ಗುಂಡಿ ತೋಡಿ ಇನ್ನಷ್ಟು ಅದ್ವಾನ ಎಬ್ಬಿಸುತ್ತವೆ ಎಂದದ್ದಕ್ಕೆ ಕೆಳಭಾಗದ ಮಣ್ಣಿನಲ್ಲಿಸೇರಿಕೊಂಡಿದ್ದ ಘನರೂಪದ ಮಲವನ್ನು ಹೊರತೆಗೆದಿದ್ದೇವೆ. ಬೆಸಗರಹಳ್ಳಿ ಗ್ರಾಪಂ ಪೌರ ಕಾರ್ಮಿಕ ನಟರಾಜು ತಿಳಿಸಿದ್ದಾರೆ. ನಮಗೆ ಇದುವರೆಗೂ ನಾವು ಕೆಲಸ ಮಾಡುವ ಸಮಯದಲ್ಲಿ ಸುರಕ್ಷಾ ಸಾಧನಗಳನ್ನು ನೀಡಿಲ್ಲ. ಪಂಚಾಯಿತಿಯಿಂದ ಇದುವರೆಗೂ ಯಾರೊಬ್ಬರಿಗೂ ಒಂದು ದಿನವೂ ಗ್ಲೌಸ್, ಶೂಗಳನ್ನೂ ಕೊಟ್ಟಿಲ್ಲ. ಪಿಡಿಒಗಳನ್ನು ಕೇಳ್ಳೋಣವೆಂದರೆ ದಿನಕ್ಕೊಬ್ಬರು ಪಿಡಿಒ ಬರುತ್ತಾರೆ. ನಾವು ಯಾರನ್ನಾ ಅಂತ ಕೇಳುವುದು. ಯುಗಾದಿಗೋ, ಸಂಕ್ರಾಂತಿಗೋ ಒಂದು ಪ್ಯಾಂಟು, ಅಂಗಿ ಕೊಡ್ತಾರೆ. ಆಮೇಲೆ ಏನನ್ನೂ ಕೊಡುವುದಿಲ್ಲ ಎಂದರು. ಕೆರಮೇಗಳದೊಡ್ಡಿಯಲ್ಲಿ ಮಲ ಹೊರುವ ಪದ್ಧತಿ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ತಾಪಂ ಇಒಗೆ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚಿಸಿದ್ದೆ. ಪಂಚಾಯಿತಿ ಪೌರಕಾರ್ಮಿಕರಲ್ಲ ಎಂದು ವರದಿ ನೀಡಿದ್ದರು. ಆದರೂ ಪಂಚಾಯಿತಿ ಪೌರಕಾರ್ಮಿಕರೆಲ್ಲರ ಭಾವಚಿತ್ರ ಸಹಿತ ವರದಿ ಕಳುಹಿಸುವಂತೆ ಸೂಚಿಸಿದ್ದೇನೆ. ಯಾರೇ ಆದರೂ ಮಲ
ಹೊರಿಸಿರುವುದು ಕಾನೂನು ರೀತಿ ಅಪರಾಧ. ಬರಿಗೈಲಿ ಮಲ ಎತ್ತಿ ಹಾಕಿಸಿರುವ ಮಾಲಿಕನ ವಿರುದ್ಧವೂ
ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ.
ಶರತ್, ಸಿಇಒ, ಜಿಪಂ