Advertisement
ಲಂಡನ್ ಮೂಲದ ಪರಿಸರಾತ್ಮಕ ತನಿಖಾ ಸಂಸ್ಥೆ (ಇಐಎ) ಈ ಬಗ್ಗೆ ತನಿಖೆ ನಡೆಸಿದ್ದು, ವರದಿಯೊಂದನ್ನು ಬಿಡುಗಡೆ ಮಾಡಿದೆ. ಚೀನದ ಒಟ್ಟು 72 ಕಂಪೆನಿಗಳು 88 ವಿವಿಧ ಔಷಧಿಗಳನ್ನು ತಯಾರು ಮಾಡಿವೆ. ಈ ಕಂಪೆನಿಗಳಿಗೆ ಚೀನದ ರಾಷ್ಟ್ರೀಯ ವೈದ್ಯಕೀಯ ವಸ್ತುಗಳ ಸಂಸ್ಥೆ(ಎನ್‌ಎಂಪಿಎ) ಪರವಾನಿಗೆ ನೀಡಿದೆ. ಈ ಔಷಧಗಳಲ್ಲಿ ಹುಲಿ, ಚಿರತೆ ಮತ್ತು ಘೇಂಡಾ ಮೃಗಗಳ ಅಂಗಾಂಶಗಳನ್ನು ಬಳಕೆ ಮಾಡಲಾಗಿದೆ ಎಂದು ಇಐಎ ತಿಳಿಸಿದೆ.
Related Articles
Advertisement
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿಗಳ ಕಳ್ಳಸಾಗಣೆ
2000ರಿಂದ 2023ರವರೆಗೆ ಜಗತ್ತಿನಾದ್ಯಂತ 6,585 ಚಿರತೆಗಳ ದೇಹದ ಅಂಗಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿರತೆಗಳ ಪೈಕಿ 6,428 ಏಷ್ಯಾದ ಬಿಗ್ ಕ್ಯಾಟ್ ರೇಂಜ್ ದೇಶಗಳಿಗೆ ಸೇರಿದವುಗಳಾಗಿವೆ. ಇದೇ ಅವಧಿಯಲ್ಲಿ 416 ಟನ್ ಪಾಂಗೋಲಿನ್‌ನ ಚಿಪ್ಪುಗಳು ಮತ್ತು 10 ಟನ್ ಘೇಂಡಾಮೃಗಗಳ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ. 2000ರಿಂದ 2023ರ ವರೆಗೆ 3,377 ಹುಲಿಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗಿದೆ. 2016ರಿಂದ 2019ರ ವರೆಗೆ 6 ಲಕ್ಷ ಪಾಂಗೋಲಿನ್‌ಗಳನ್ನು ಸಾಗಾಟ ಮಾಡಲಾಗಿತ್ತು.