Advertisement

ನೋಟುಗಳ ಬಳಕೆ ಶೇ.17ರಷ್ಟು ಹೆಚ್ಚಳ

12:45 AM Aug 30, 2019 | Team Udayavani |

ಮುಂಬೈ: ನಗದು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಡಿಜಿಟಲ್ ಪಾವತಿ ಸಂಸ್ಕೃತಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ, ನೋಟುಗಳ ಚಲಾವಣೆಯ ಪ್ರಮಾಣ ಹಿಂದಿಗಿಂತ ಶೇ. 17ರಷ್ಟು ವೃದ್ಧಿಯಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.

Advertisement

ತಾನು ಸಿದ್ಧಪಡಿಸಿರುವ 2019ರ ವಾರ್ಷಿಕ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖೀಸಿರುವ ಆರ್‌ಬಿಐ, 2016ರಲ್ಲಿ ಕೈಗೊಳ್ಳಲಾಗಿದ್ದ ನೋಟು ಅಮಾನ್ಯ ನಿರ್ಧಾರದ ನಂತರ 2,000 ರೂ. ಹಾಗೂ 500 ರೂ. ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು. ಇವುಗಳಲ್ಲಿ 500 ರೂ. ನೋಟುಗಳ ಚಲಾವಣೆಯು ದೇಶದ ಒಟ್ಟಾರೆ ನಗದು ಚಲಾವಣೆಯಲ್ಲಿ ಶೇ. 51ರಷ್ಟು ಪಾಲು ಹೊಂದಿದೆ. ಚಲಾವಣೆಯಲ್ಲಿರುವ ಒಟ್ಟು ನೋಟುಗಳಲ್ಲಿ 500 ರೂ. ಮೌಲ್ಯದ ನೋಟುಗಳ ಸಂಖ್ಯೆ 10,800 ಕೋಟಿಯಷ್ಟು ಇದೆ” ಎಂದು ಸಂಸ್ಥೆ ವಿವರಿಸಿದೆ.

ಗಣನೀಯ ಹೆಚ್ಚಳ: ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯ ವಿರುದ್ಧದ ಮೋಸದ ಜಾಲವು ಶೇ. 74ರಷ್ಟು ಹೆಚ್ಚಾಗಿದ್ದು, 2018-19ನೇ ವರ್ಷದಲ್ಲಿ 71,543 ಕೋಟಿ ರೂ.ಗಳಷ್ಟು ಅವ್ಯವಹಾರಗಳು ನಡೆದಿವೆ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ತನ್ನ ವಾರ್ಷಿಕ ವರದಿಯಲ್ಲಿ ಈ ವಿಚಾರ ಉಲ್ಲೇಖೀಸಿರುವ ಸಂಸ್ಥೆ, ಅವ್ಯವಹಾರ ನಡೆದ ನಂತರ ಸರಾಸರಿ 22 ತಿಂಗಳುಗಳಾದ ಮೇಲೆ ಅವು ಬೆಳಕಿಗೆ ಬರುತ್ತಿದೆ. 2018-19 ಅವಧಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲೇ ಅತಿ ಹೆಚ್ಚು ಮೋಸದ ಪ್ರಕರಣಗಳು ನಡೆದಿದ್ದು, ಆನಂತರದ ಸ್ಥಾನಗಳಲ್ಲಿ ಖಾಸಗಿ ಬ್ಯಾಂಕುಗಳು ಹಾಗೂ ವಿದೇಶಿ ಬ್ಯಾಂಕುಗಳಿವೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next