Advertisement

ಸೇನಾ ವಿಮಾನಗಳಲ್ಲಿ ಜೈವಿಕ-ಇಂಧನ ಬಳಕೆಗೆ ಅಸ್ತು

12:30 AM Jan 25, 2019 | Team Udayavani |

ಹೊಸದಿಲ್ಲಿ: ಹಲವು ತಿಂಗಳ ಪ್ರಾಯೋಗಿಕ ಪರೀಕ್ಷೆಗಳ ಬಳಿಕ ಸೇನಾ ವಿಮಾನಗಳಲ್ಲಿ ಸ್ವದೇಶಿ ನಿರ್ಮಿತ ಜೈವಿಕ-ಇಂಧನ ಬಳಕೆಗೆ ಹಸುರು ನಿಶಾನೆ ದೊರೆತಿದೆ. ಸೆಂಟರ್‌ ಫಾರ್‌ ಮಿಲಿಟರಿ ಏರ್‌ವರ್ದಿನೆಸ್‌ ಆ್ಯಂಡ್‌ ಸರ್ಟಿಫಿಕೇಷನ್‌ ಸಂಸ್ಥೆಯಿಂದ ಅನುಮತಿ ಸಿಕ್ಕಿರುವ ಕಾರಣ, ಸದ್ಯದಲ್ಲೇ ಭಾರತೀಯ ವಾಯುಪಡೆಯು ತನ್ನ ಸಾರಿಗೆ ವ್ಯವಸ್ಥೆ, ಹೆಲಿಕಾಪ್ಟರ್‌ಗಳಲ್ಲಿ ಜೈವಿಕ ಇಂಧನವನ್ನು ಬಳಸಿಕೊಳ್ಳಲಿದೆ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಚೊಚ್ಚಲ ಐಎಎಫ್ ಎಎನ್‌-32 ವಿಮಾನವನ್ನು ಇದೇ ಜೈವಿಕ-ವೈಮಾನಿಕ ಇಂಧನದ ಮೂಲಕ ಗಣರಾಜ್ಯ ದಿನದಂದು ಹಾರಿಸಲು ಕೂಡ ಇದರಿಂದ ಅನುಕೂಲವಾಗಿದೆ ಎಂದೂ ಅವರು ಹೇಳಿದ್ದಾರೆ. ಛತ್ತೀಸ್‌ಗಢದಿಂದ ತರಿಸಲಾದ ಜತ್ರೋಪಾ ಗಿಡಗಳ ಬೀಜಗಳು ಸೇರಿದಂತೆ ಅಸಾಂಪ್ರದಾಯಿಕ ಮೂಲಗಳನ್ನು ಬಳಸಿ ಈ ಜೈವಿಕ-ಇಂಧನವನ್ನು ತಯಾರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next