ವಿಜಯಪುರ: ಲೋಕೋಪಯೋಗಿ ಇಲಾಖೆ ಜಾಗದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಪೆಟ್ಟಿಗೆ ಅಂಗಡಿ ಗಳ ದಂಧೆ, ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದ್ದು, ಅಧಿಕಾರಿಗಳ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ತಾಲೂಕಿನಲ್ಲಿ ಪ್ರಭಾವಿಗಳು ಹಾಗೂ ಕೆಲವು ಹಣವುಳ್ಳ ವರು ರಸ್ತೆ ಬದಿಯಲ್ಲಿ ಖಾಲಿಯಿರುವ ಜಾಗವನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ಪೆಟ್ಟಿ ಅಂಗಡಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ.
ಬಳಿಕ ಅವುಗಳನ್ನು ಬೇರೆಯವರಿಗೆ ಬಾಡಿಗೆ ನೀಡುತ್ತಾರೆ. ಬಡವರು ಅವುಗಳನ್ನು ಬಾಡಿಗೆ ಪಡೆದು ಜೀವನ ನಡೆಸುತ್ತಾರೆ. ಆದರೆ ಪ್ರಭಾವಿ ಗಳು ತಮ್ಮದೇ ಜಾಗವೆಂದು ಹೇಳಿಕೊಂಡು ತರಕಾರಿ ಅಂಗಡಿ, ಹೋಟೆಲ್, ದ್ವಿಚಕ್ರ ವಾಹನಗಳ ಸರ್ವೀಸ್, ಕಾರ್ ಗ್ಯಾರೇಜ್, ಮರಗಳ ಬಾಡಿಗೆ ಅಂಗಡಿ, ಗುಜರಿ ಅಂಗಡಿ, ವುಡ್ ವರ್ಕ್‌ನಂತಹ ಅಂಗಡಿಗಳನ್ನು ತೆರೆಯುತ್ತಾರೆ.
ಹೀಗೆ ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆ ಎರಡೂ ಬದಿಯಲ್ಲಿ ಸಾಲಾಗಿ ಇಂತಹ 50-60 ಅಂಗಡಿಗಳಿವೆ. ಆದರೆ ಈ ಅಂಗಡಿಗಳಿಗೆ ಪರವಾನಗಿ ಬೇಕಿಲ್ಲ, ಬಾಡಿಗೆ ಕಟ್ಟಬೇಕಿಲ್ಲ. 30-40 ಸಾವಿರದ ಪೆಟ್ಟಿಗೆಯೇ ಅವರ ಬಂಡವಾಳ ಆಮೇಲೆ ದುಡಿದಿದ್ದೆಲ್ಲ ಲಾಭ. ಆದರೆ ಸರ್ಕಾರಕ್ಕೆ ಇದರಿಂದ ಲಾಭವೇನೂ ಇಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಜಾಗದಲ್ಲಿ ಅಂಗಡಿತೆರೆಯೋ ಹಾಗಿಲ್ಲ.
ಸರ್ಕಾರದ ಅನುಮತಿ ಹಾಗೂ ನಿಯಮ ಪಾಲಿಸಬೇಕು. ಇಲ್ಲವೆಂದರೆ ಜಾಗ ತೆರವು ಮಾಡಬೇಕು ಎಂದು ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಲು ಆಗ್ರಹಿಸಿದೆ. ಪಿಡ ಬ್ಲ್ಯುಡಿ ಇಂಜಿನಿಯರ್ (ಎಇಇ) ಕೃಷ್ಣಪ್ಪ ಮಾತನಾಡಿ, ಈ ವಿಚಾರವಾಗಿ ಮೌಖೀಕ ದೂರು ಬಂದಿದೆ. ಸ್ಥಳೀಯ ಪುರಸಭೆ ಈ ಜಾಗದಲ್ಲಿ ಅಂಗಡಿ ಇರಿಸಲು ಅನುಮತಿ ನೀಡಿದ್ದಾರಾ ಅಥವಾ ಅಕ್ರಮ ನಡೆಯುತ್ತಿರುವ ಬಗ್ಗೆ ಬಂದ ದೂರು ಸತ್ಯಸತ್ಯತೆ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.