Advertisement

ಪ್ಯಾಪಿಲಾನ್‌ನಲ್ಲಿ ಕ್ರೌರ್ಯದ ಅನಾವರಣ

06:21 PM Mar 23, 2021 | Team Udayavani |

ಕೊಟ್ಟಿಗೆಹಾರ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ್‌ ಕೆಂಜಿಗೆ ಅವರು ಕನ್ನಡಕ್ಕೆ ಅನುವಾದಿಸಿರುವ ಪ್ಯಾಪಿಲಾನ್‌ ಕೃತಿಗಳು ವ್ಯವಸ್ಥೆಯ ಕ್ರೌರ್ಯವನ್ನು ಅತ್ಯಂತ ವಿಷಾದವಾಗಿ ಕಟ್ಟಿಕೊಡುತ್ತದೆ ಎಂದು ಹಿರಿಯ ಪರ್ತಕರ್ತ ಸ. ಗಿರಿಜಾ ಶಂಕರ್‌ ಹೇಳಿದರು.

Advertisement

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ “ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು’ ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ್‌ ಕೆಂಜಿಗೆ ಅವರ ಪ್ಯಾಪಿಲಾನ್‌ ಕೃತಿಗಳ ಬಗ್ಗೆ ಅವರು ಮಾತನಾಡಿದರು.

ಪ್ಯಾಪಿಲಾನ್‌ ಅತ್ಯಂತ ಅಮೂಲ್ಯವಾದ ಅನುವಾದಿತ ಕೃತಿಯಾಗಿದೆ. ಮನುಷ್ಯನನ್ನು ಮೃಗದಂತೆ ನಡೆಸಿಕೊಳ್ಳುತ್ತಿದ್ದ ಅಂದಿನ ಪೊಲೀಸ್‌ ವ್ಯವಸ್ಥೆ, ಆಡಳಿತದ ರೀತಿ, ನ್ಯಾಯಾಂಗ, ಕಾರಾಗೃಹಗಳು, ಹಿಂಸೆಯ ಪರಮಾವ ಧಿಗಳ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ ಎಂದರು. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್‌, ಕಾರ್ಯಕ್ರಮದ ಸಂಯೋಜಕ ನಂದೀಶ್‌ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಪ್ರಜ್ವಲ್‌, ಸ್ಯಾಮ್ಯುಯೆಲ್‌ ಹ್ಯಾರಿಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next