Advertisement

ದೇವಸ್ಥಾನ ಹುಂಡಿ ಕಳ್ಳತನಕ್ಕೆ ವಿಫಲ ಯತ್ನ

01:02 PM Apr 07, 2017 | |

ಹರಿಹರ: ರಾಮನವಮಿ ದಿನ ಮತ್ತಷ್ಟು ದೇಣಿಗೆ ತುಂಬಿರುತ್ತದೆ ಎಂಬ ದುರಾಸೆಯಿಂದ ದೇವಸ್ಥಾನದ ಹುಂಡಿಗೆ ಕನ್ನ ಹಾಕಲು ಬಂದಿದ್ದ ಕಳ್ಳನೊಬ್ಬನನ್ನು ಪೊಲೀಸರು  ಸಿನಿಮೀಯ ರೀತಿಯಲ್ಲಿ ಸೆರೆಹಿಡಿದ ಘಟನೆ ನಗರದ ಹರ್ಲಾಪುರ ಬಡಾವಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ. 

Advertisement

ಹರ್ಲಾಪುರದ ನಗರಸಭೆ ಉದ್ಯಾನವನದಲ್ಲಿರುವ ಶ್ರೀ  ಆಂಜನೇಯ ದೇವಸ್ಥಾನದಲ್ಲಿ ರಾತ್ರಿ 12ರ ವೇಳೆಗೆ ವ್ಯಕ್ತಿಯೊಬ್ಬ ಬಾಗಿಲ ಬೀಗ ಮುರಿದು ನೋಡನೋಡುತ್ತಲೇ ದೇವಸ್ಥಾನದ ಒಳಗೆ ತೆರಳಿದ್ದು, ಸುತ್ತಲಿನ ಕೆಲ ನಿವಾಸಿಗಳ ಗಮನಕ್ಕೆ ಬಂದಿದೆ. ಕೂಡಲೆ ಅವರು ಪೊಲೀಸರಿಗೆ ಕರೆ ಮಾಡಿ, ದೂರದಿಂದ ಕಳ್ಳನ ಚಲನವಲ ಗಮನಿಸುತ್ತಿದ್ದರೆ. 

ತಾನು ತಂದಿದ್ದ ಹಾರೆ ಮತ್ತಿತರೆ ಸಲಕರಣೆಗಳಿಂದ ಆತ ಹುಂಡಿಯನ್ನು ತೆರೆಯಲು ಪ್ರಯತ್ನ ಮಾಡುತ್ತಿದ್ದಾಗ ಪೊಲೀಸ್‌ ವಾಹನ ಸ್ಥಳಕ್ಕೆ ಆಗಮಿಸಿದ್ದು, ಈ ಶಬ್ದ ಕೇಳಿದ ಆರೋಪಿ ದೇವಸ್ಥಾನ ಒಳಗೆ ಬಚ್ಚಿಟ್ಟುಕೊಂಡಿದ್ದಾನೆ. ದೇವಸ್ಥಾನ ಸುತ್ತುವರಿದ ಪೊಲೀಸರು ಹೊರಬರುವಂತೆ ಆತನನ್ನು ಕರೆದರೂ ಆತ ಹೊರಬರದಿದ್ದಾಗ ಪೊಲೀಸರೆ ಒಳಗೆ ತೆರಳಿ ಆರೋಪಿಯನ್ನು ಬಂಧಿಸಿದರು.

ಕೆಲ ಹೊತ್ತಿನವರೆಗೆ ನಡೆದ ಈ ಕಳ್ಳಾ-ಪೊಲೀಸ್‌ ಆಟವನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಸೆರೆಯಾಗಿರುವ ಆರೋಪಿತ ನಗರ ವಾಸಿ ಮೇಘರಾಜ್‌, ದೂರು ದಾಖಲಿಸಿಕೊಂಡಿರುವ ನಗರಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೀದಿ ದೀಪಕ್ಕೆ ಆಗ್ರಹ: ಸಮೀಪದ ವಿಜಯನಗರ ಬಡಾವಣೆಯ ಗಣೇಶ ದೇವಸ್ಥಾನದಲ್ಲೂ ಇತ್ತೀಚೆಗೆ ಕಳ್ಳತನ ನಡೆದಿತ್ತು.

ಕಳ್ಳರ ಗುಂಪೊಂದು ನಗರದಲ್ಲಿ  ಸಕ್ರೀಯವಾಗಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಉದ್ಯಾನವನದ ಪಕ್ಕದ ರಸ್ತೆಯಲ್ಲಿ ರಾತ್ರಿ ಬೆಳಕಿಲ್ಲದಾಗಿದೆ. ಬೀದಿ ದೀಪ ಹಾಕಲು ವಾರ್ಡ್‌ನ ನಗರಸಭಾ ಸದಸ್ಯರಿಗೆ ಹೇಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next