Advertisement
ಚಂಡಮಾರುತ ಮುನ್ಸೂಚನೆ: ತಂತ್ರಜ್ಞಾನದ ಬೆಳವಣೆಗೆಯಿಂದ ಹಲವು ರೀತಿಯ ಅವಕಾಶಗಳು ಸೃಷ್ಟಿಯಾಗುತ್ತಿದೆ. ಸವಾಲುಗಳನ್ನು ಎದುರಿಸುವ ಮೂಲಕ ಹೊಸ ದಾರಿ ಕಂಡುಕೊಳ್ಳಬಹುದು. ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಈ ಹಿಂದಿಗಿಂತಲೂ ಹೆಚ್ಚು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ದೇಶ ಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿ ರುವ ಹಿರಿಮೆ ಇಸ್ರೋಗೆ ಇದೆ. ನಮ್ಮ ದೇಶದಲ್ಲಿ 45 ಉಪಗ್ರಹಗಳ ಉಡಾವಣೆ ಮಾಡಲಾಗಿದೆ. ಜೊತೆಗೆ 28 ದೇಶಗಳ 237 ಉಪಗ್ರಹಗಳನ್ನು ಹಾರಿಸಲು ಸಾಧ್ಯವಾಗಿದೆ.
Related Articles
Advertisement
ಕಳೆದ ಶತಮಾನದ ಮಹತ್ವದ ಸಂಶೋಧನೆಗಳಲ್ಲಿ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮ ಹಾಗೂ ಜಗದೀಶ ಚಂದ್ರ ಬೋಸ್ ಅವರ ಸಸ್ಯಶಾಸ್ತ್ರದ ಆವಿಷ್ಕಾರಗಳು ಜಗತ್ತಿನ ಗಮನ ಸೆಳೆದಿವೆ. ಈ ದಿಸೆಯಲ್ಲಿ ಜ್ಞಾನ ಮತ್ತು ಕೌಶಲ್ಯಾಧಾರಿತ ಯುವಶಕ್ತಿಯಿಂದ ಯಾವ ಸವಾಲನ್ನಾದರೂ ಎದುರಿಸಬಹುದು ಎಂದು ಹೇಳಿದರು.
ವಿಜ್ಞಾನ ಪ್ರಗತಿ ವಿರೋಧ ಅಲ್ಲ: ಲೇಖಕಿ ಡಾ.ಕೆ.ಎಸ್.ಚೈತ್ರಾ ಮಾತನಾಡಿ, ವಿಜ್ಞಾನ ಎಂದೂ ಪ್ರಗತಿ ವಿರೋಧ ಅಲ್ಲ. ಡೋಡೋ ಪಕ್ಷಿಗಳ ಉಳಿವು ಸೇರಿದಂತೆ ಹಲವಾರು ಜೀವ ಸಂಕುಲವನ್ನು ವೈಜ್ಞಾನಿಕ ನೆಲಗಟ್ಟಿನಲ್ಲಿ ಉಳಿಸಿರುವುದು ವಿಜ್ಞಾನ. ಆದರೆ ವಿಜ್ಞಾನದ ಬಗ್ಗೆ ಇರುವ ಅಂಧಶ್ರದ್ಧೆಯನ್ನು ದೂರಗೊಳಿ ಸಬೇಕಿದೆ. ಎಚ್. ನರಸಿಂಹಯ್ಯ ಅವರ ಹೇಳಿದಂತೆ ನಮ್ಮ ಹಣೆ ಮೇಲೆ ಪ್ರಶ್ನಾರ್ಥಕ ಚಿಹ್ನೆ ಹಾಕಿಕೊಂಡು ನಮಗೆ ಎದುರಾಗುವ ಆಗುಹೋಗುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡದಿದ್ದರೆ ವಿಜ್ಞಾನಕ್ಕೆ ಅರ್ಥವಿಲ್ಲ.
ಆದರೆ ಇಂದಿನ ಬಹಳಷ್ಟು ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಏಳುವ ಪ್ರಶ್ನೆಗಳಿಗೆ ಉತ್ತರಿಸುವ ಗಂಭೀರ ಪ್ರಯತ್ನ ಮಾಡದಿರು ವುದು ವಿಷಾದಕರ. ಮಾನವೀಯ ಸಂಬಂಧಗಳನ್ನು ಗಾಢಗೊಳಿಸುವಲ್ಲಿಯೂ ವಿಜ್ಞಾನದ ಪಾತ್ರವಿದ್ದು, ಜಗತ್ತಿನ ಏಳಿಗೆಗಾಗಿ ವಿಜ್ಞಾನ ಎನ್ನುವ ವಿವೇಚನೆ ಎಲ್ಲರಿಗೂ ಇರಬೇಕು ಎಂದರು.
ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರೌಢಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನವಿತರಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಸದಾಶಿವ ರಾಮಚಂದ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಅಥ್ಲೆಟ್ ಅರ್ಜುನ್ ದೇವಯ್ಯ ತೀತಮಾಡ, ಶಿಕ್ಷಣ ಸಂಯೋಜಕರಾದ ಪ್ರಹ್ಲಾದ್, ಜ್ಞಾನ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಬಿ.ಮಲ್ಲಿಕಾರ್ಜುನ ಭಾಗವಹಿಸಿದ್ದರು.