Advertisement

ಅಪೂರ್ವ ನಾಣ್ಯ ಸಂಗ್ರಾಹಕ ಶಂಕರ ದೇವಾಂಗ

08:12 PM Jun 08, 2019 | mahesh |

ಕಾಸರಗೋಡು: ನಾಣ್ಯ ಸಂಗ್ರಹದಲ್ಲಿ ಬಿ.ಶಂಕರ ದೇವಾಂಗ ಸಾಧನೆ ಮಾಡಿದ್ದಾರೆ. ದೇಶದ ವಿವಿಧ ಬಗೆಯ ಇಲ್ಲವೇ ವಿವಿಧ ದೇಶಗಳ ನಾಣ್ಯ, ಕರೆನ್ಸಿಗಳ, ಸ್ಟಾಂಪ್‌ಗ್ಳ ಸಂಗ್ರಹ ಕಂಡಿದ್ದೇವೆ. ಆದರೆ, ಶಂಕರ ದೇವಾಂಗರ ಸಂಗ್ರಹ ಇದಕ್ಕಿಂತ ವಿಭಿನ್ನ. ನಿಜಕ್ಕೂ ಅದ್ಭುತವಾದುದು. ಒಂದೇ ನಾಣ್ಯದ ಇದುವರೆಗಿನ ಎಲ್ಲ ರೂಪಾಂತರಗಳನ್ನು ಶೇಖರಿಸಿ ಅವರು ಗಮನ ಸೆಳೆಯುತ್ತಿದ್ದಾರೆ. ಭಾರತ ಸರಕಾರವು ಈ ತನಕ ಹೊರ ತಂದಿರುವ ಒಂದು ರೂಪಾಯಿ ನಾಣ್ಯದ ಎಲ್ಲ ವೆರೈಟಿಯೂ ಇವರ ಬಳಿಯಲ್ಲಿದೆ.

Advertisement

ಧಾರ್ಮಿಕ ಕ್ಷೇತ್ರದಲ್ಲಿ ಅವಿರತ ಹಾಗೂ ಅವಿಶ್ರಾಂತ ಸೇವೆ ಅವರದ್ದು. 1967 ರಿಂದ 2017 ರ ವರೆಗೆ ಸತತ 51 ವರ್ಷಗಳ ಕಾಲ ಮಕರ ವಿಳಕ್‌R ಸಂದರ್ಭ ಶಬರಿಮಲೆ ಯಾತ್ರೆ ನಡೆಸಿರುವ ಅವರು ಕಾಸರಗೋಡಿನ ಅತೀ ಹಿರಿಯ, ಪ್ರಧಾನ ಗುರುಸ್ವಾಮಿಗಳಲ್ಲಿ ಒಬ್ಬರಾಗಿದ್ದಾರೆ. ಸಹಸ್ರಾರು ಮಂದಿ ಶಿಷ್ಯರಿಗೆ ಮುದ್ರೆ ಧರಿಸಿದ್ದಾರೆ.

1992 ರಲ್ಲಿ ಸನ್ನಿಧಾನಕ್ಕೆ ಕಾಸರಗೋಡಿನಿಂದ ಪಾದಯಾತ್ರೆಯನ್ನೂ ಮಾಡಿದ್ದಾರೆ. ನೀರ್ಚಾಲು ಸಮೀಪ ಮಾನ್ಯದಲ್ಲಿರುವ ಶ್ರೀ ಅಯ್ಯಪ್ಪ ಮಂದಿರದ ಪ್ರತಿಷ್ಠೆಯನ್ನು ಪ್ರಧಾನ ಗುರುಸ್ವಾಮಿಗಳಾಗಿದ್ದ ಶಂಕರ ದೇವಾಂಗ ಅವರೇ ನೆರವೇರಿಸಿದ್ದಾರೆ. 1966 ರಲ್ಲಿ ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘವನ್ನು ಸ್ಥಾಪಿಸಿದವರಲ್ಲಿ ದೇವಾಂಗರು ಪ್ರಮುಖರು.

ಕಾಸರಗೋಡು ಅಣಂಗೂರಿನ ಶ್ರೀ ಶಾರದಾಂಬಾ ಭಜನಾ ಮಂದಿರದ ಉಪಾಧ್ಯಕ್ಷ ಸಹಿತ ಪ್ರಮುಖ ಪದವಿಗಳನ್ನು ಅಲಂಕರಿಸಿದ್ದರು. ಕುಂಬಳೆ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಅಧ್ಯಕ್ಷ, ಕಾರ್ಯದರ್ಶಿ ಸಹಿತ ಹುದ್ದೆಗಳಲ್ಲಿ ಅನೇಕ ದಶಕಗಳ ಕಾಲ ದುಡಿದಿರುವ ಅವರು ಕ್ಷೇತ್ರಾಭಿವೃದ್ಧಿಗೆ ಸಲ್ಲಸಿದ ಸೇವೆ ಅನುಪಮ ಹಾಗೂ ಅವಿಸ್ಮರಣೀಯವಾದುದು. ನಿರಂತರ ಕಲಿಕೆ ಅವರ ವಿಶೇಷ ಗುಣ.

ಸರಕಾರಿ ಸೇವೆಯಲ್ಲಿರುವಾಗಲೇ ಸ್ನಾತಕೋತ್ತರ ಪದವಿಯನ್ನೂ ಕಾನೂನು ಪದವಿಯನ್ನೂ ಪೂರೈಸಿದ್ದರು. ನಿವೃತ್ತಿ ಬಳಿಕ ಕೆಲಕಾಲ ವಕೀಲರ ಪೋಷಾಕನ್ನೂ ಧರಿಸಿದ್ದರು.ಸದ್ಯ ಎರಡು ವರ್ಷಗಳಿಂದ ವಯೋಸಹಜ ಅಸ್ವಸ್ಥತೆಯಿಂದಾಗಿ ಮಂಗಳೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ವಿಶ್ರಾಂತ ಬದುಕು ಸಾಗಿಸುತ್ತಿದ್ದಾರೆ.

Advertisement

ನಿವೃತ್ತ ಹಿರಿಯ ದರ್ಜೆ ತಾಲೂಕು ತಹಶೀಲ್ದಾರ್‌
1950ರಲ್ಲಿ ಭಾರತದಲ್ಲಿ ಒಂದು ರೂಪಾಯಿಯ ನಾಣ್ಯ ಚಲಾವಣೆಗೆ ಬಂದಿತ್ತು. ಪ್ರಥಮ ನಾಣ್ಯದಿಂದ ತೊಡಗಿ 2018 ರಲ್ಲಿ ಅಚ್ಚಾದ ವರೆಗಿನ ಎಲ್ಲ 40 ರಷ್ಟು ಬಗೆಯ ಒಂದು ರೂ. ನಾಣ್ಯಗಳೂ ಶಂಕರ ದೇವಾಂಗರ ಸಂಗ್ರಹದಲ್ಲಿವೆ. ನಿಯಮಿತವಾಗಿ ಮುದ್ರಿಸುವವುಗಳಲ್ಲದೆ ವಿಶೇಷ ದಿನ, ಘಟನೆಗಳ ನೆನಪಿನ (ಉದಾ: ಕೃಷಿಕರ ದಿನ, ಕ್ವಿಟ್‌ ಇಂಡಿಯಾ ಸುವರ್ಣ ವರ್ಷ, ಅಂತಾರಾಷ್ಟ್ರೀಯ ಯುವ ವರ್ಷ, ನೆಹರೂ ಶತಮಾನ ವರ್ಷ, ಆರ್‌ಬಿಐ ವಜ್ರ ಮಹೋತ್ಸವ ಇತ್ಯಾದಿ) ಎಲ್ಲ ಕಾಯಿನ್‌ಗಳೂ ಈ 77 ರ ವ್ಯಕ್ತಿಯ ಕೈಯ್ಯಲ್ಲಿ ಭದ್ರ. ಕಾಸರಗೋಡಿನ ನಿವೃತ್ತ ಹಿರಿಯ ದರ್ಜೆ ತಾಲೂಕು ತಹಶೀಲ್ದಾರ್‌ ಆಗಿರುವ ಶಂಕರ ದೇವಾಂಗರು ತನ್ನ ಸುದೀರ್ಘ‌ ಕಾಲದ ಸೇವಾವ ಧಿಯಲ್ಲೇ ನಾಣ್ಯ ಸಂಗ್ರಹದ ಹವ್ಯಾಸ ಬೆಳೆಸಿದ್ದರು. ಸಿಕ್ಕ, ಸಿಕ್ಕ ನಾಣ್ಯಗಳನ್ನು ಸಂಗ್ರಹಿಸುವ ಬದಲು ದೇಶದ ಒಂದು ರೂ. ನಾಣ್ಯದಲ್ಲಿ ಮಾತ್ರ ಕೇಂದ್ರೀಕರಿಸಿ ಅದರ ಎಲ್ಲ ಬದಲಾವಣೆಗಳನ್ನು ಗಮನಿಸುತ್ತಾ ಸದ್ರಿ ಕಾಯಿನ್‌ನ ಸಕಲ ಮುದ್ರಣಗಳನ್ನೂ ಸಂಗ್ರಹಿಸತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next