Advertisement
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದ ಕರ್ನಾಟಕ ರಾಜ್ಯವಿಶ್ವವಿದ್ಯಾನಿಲಯಗಳ ವಿಧೇಯಕ-2017ರಲ್ಲಿ ಸಮಾನವಾದ, ಶೀಘ್ರವಾದ ಮತ್ತು ಪರಿಣಾಮಕಾರಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಕುಲಾಧಿಪತಿಯು ರಾಜ್ಯ ಸರ್ಕಾರದೊಡನೆ ಸಮಾಲೋಚಿಸಿ ಎಲ್ಲಾ ಅಧಿಕಾರಿಗಳನ್ನು ಚಲಾಯಿಸತಕ್ಕದ್ದು ಎಂಬುದನ್ನು ಒಳಗೊಂಡಿದೆ.
Related Articles
Advertisement
ಕುಲಪತಿಯಾಗಿ ನೇಮಕಗೊಂಡ ವರು ನಾಲ್ಕು ವರ್ಷ ಅವಧಿ ಇರಬೇಕು ಹಾಗೂ 67 ವರ್ಷ ತಲುಪಿದ ಬಳಿಕ ನಿವೃತ್ತರಾಗಬೇಕು. ಎರ ಡನೇ ಅವಧಿಗೆ ಮರುನೇಮಕಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ. ವಿಶ್ವವಿದ್ಯಾಲಯವು ಕಾರ್ಯನಿರ್ವಾಹಕ ಪರಿಷತ್ ಮೂಲಕ ತನ್ನ ಪ್ರತಿನಿಧಿಯನ್ನು ಸೂಚಿಸುತ್ತದೆ. ಈ ಪರಿಷತ್ತಿನಲ್ಲಿ ಸರ್ಕಾರದಿಂದ ನಾಮನಿರ್ದೇಶನಗೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ವ್ಯಕ್ತಿಯೂ ಸರ್ಕಾರದ ಪರವಾಗಿರುತ್ತಾನೆ. ಆಗ ಸರ್ಕಾರ ನಿರ್ಧರಿಸಿದವರೇ ಕುಲಪತಿ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಶೋಧನಾ ಸಮಿತಿಯಲ್ಲಿ ಕುಲಪತಿಗಳು, ಮಾಜಿ ಕುಲಪತಿಗಳು, ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ನಿರ್ದೇಶಕರ ದರ್ಜೆಗೆ ಕಡಿಮೆ ಇಲ್ಲದ ಪ್ರಸಿದಟಛಿ ಶಿಕ್ಷಣ ತಜ್ಞರು ಮಾತ್ರ ಇರುತ್ತಾರೆ ಎನ್ನುವ ಮೂಲಕ ಸರ್ಕಾರ ತನ್ನ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಕುಲಸಚಿವರ ನೇಮಕವೂ ಸರ್ಕಾರವೇ ಮಾಡುತ್ತದೆ: ವಿಧೇಯಕ ಅಂಗೀಕಾರವಾಗಿ ಕಾಯ್ದೆಯಾಗಿ ರೂಪುಗೊಂಡರೆ ಕುಲಸಚಿವರ ನೇಮಕವನ್ನೂ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ. ಪ್ರಸ್ತುತ ರಾಜ್ಯಪಾಲರು ಕುಲಸಚಿವರನ್ನು ನೇಮಕ ಮಾಡುತ್ತಾರೆ. ಆದರೆ ವಿಧೇಯಕದಲ್ಲಿ ಐಎಎಸ್ ಮತ್ತು ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿಗಳುಕುಲಸಚಿವರಾಗಬೇಕು ಎಂದು ಹೇಳುವ ಮೂಲಕ ಅದನ್ನು ಕೂಡ ಸರ್ಕಾರ ರಾಜ್ಯಪಾಲರ ಕೈಯಿಂದ ಕಸಿದುಕೊಳ್ಳಲು ಮುಂದಾಗಿದೆ. ವಿವಿಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಿಸಲು ಸರ್ಕಾರವೇ ಒಂದು ಸಾಮಾನ್ಯ ನೇಮಕಾತಿ ಮಂಡಳಿ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ವಿವಿಗಳಲ್ಲಿ ಕೈಗೊಳ್ಳುವ ಕಾಮಗಾರಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವರ ನೇತೃತ್ವದಲ್ಲಿ ಮೂಲ ಸೌಕರ್ಯ ಅಭಿವೃದಿಟಛಿ ಮಂಡಳಿ ರಚಿಸಲಾಗುತ್ತದೆ. ಒಂದು ಕೋಟಿ ರೂಪಾಯಿಗಿಂತ ಅಧಿಕ ಮೊತ್ತದ ಕಾಮಗಾರಿ ನಡೆಸಲು ಈ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಅಂದರೆ, ಅಲ್ಲೂ ಸರ್ಕಾರ ಮಧ್ಯಪ್ರವೇಶಿಸಿದಂತಾಗುತ್ತದೆ. ಜತೆಗೆ ವಿಶ್ವ ವಿ ದ್ಯಾಲಯದ ಯಾವುದೇ ಆದೇಶ, ಅಧಿಸೂಚನೆ, ನಿರ್ಣಯ ಅಥವಾ ಯಾವುದೇ ವ್ಯವಹಾರ ನಿಯಮಗಳ ಅನುಸಾರ ಇಲ್ಲ ಅಥವಾ ರಾಜ್ಯ ಸರ್ಕಾರದ ಕಾರ್ಯನೀತಿಗೆ ವಿರುದಟಛಿವಾಗಿದೆ ಎಂದಾದರೆ ಸರ್ಕಾರಿ ರಾಜ್ಯ ಪತ್ರದಲ್ಲಿ ಆದೇ ಶ ಪ್ರಕಟಿಸಿ ವಿಶ್ವವಿದ್ಯಾಲಯದ ತೀರ್ಮಾನವನ್ನುರದ್ದುಗೊಳಿ ಸಬಹುದಾದ ಅಧಿಕಾರವನ್ನು ಸರ್ಕಾರ ತಾನೇ ಇಟ್ಟುಕೊಳ್ಳಲು ಮುಂದಾಗಿದೆ. 3 ಹೊಸ ವಿವಿಗಳ ಸ್ಥಾಪನೆ
ಹೊಸ ಕಾಯ್ದೆ ಜಾರಿಯಾದರೆ 3 ಹೊಸ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಲಿವೆ. ಮಂಡ್ಯ ಸರ್ಕಾರಿ ಕಾಲೇಜು ಮೇಲ್ದರ್ಜೆಗೇರಿಸಿ ಏಕಾತ್ಮಕ ಸ್ವರೂಪದ ವಿಶ್ವವಿದ್ಯಾಲಯ ಸ್ಥಾಪನೆ, ಬೆಂಗಳೂರು ಮಹಾರಾಣಿ ಕಾಲೇಜು ವ್ಯಾಪ್ತಿಯಲ್ಲಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ವಿಭಜಿಸಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಮುಖಾಂಶಗಳು
– ಅಕಾಡೆಮಿಕ್ ಕೌನ್ಸಿಲ್‌ನಿಂದ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು ಹೊರಗೆ. ನಾಮನಿರ್ದೇಶನಕ್ಕೆ
ವಿದ್ಯಾರ್ಹತೆ ನಿಗದಿ
– ವಿಶ್ವವಿದ್ಯಾಲಯಗಳಲ್ಲಿ ಇನ್ನು ಮುಂದೆ ಸೆನೆಟ್, ಸಿಂಡಿಕೇಟ್ ಬದಲು ಕಾರ್ಯನಿರ್ವಾಹಕ ಪರಿಷತ್ತು ಸ್ಥಾಪನೆ – ಕುಲಪತಿ ಹುದ್ದೆ ಖಾಲಿಯಾದಾಗ ಬೇರೊಂದು ವಿವಿ ಕುಲಪತಿಯನ್ನು ಪ್ರಭಾರಿಯಾಗಿ ನೇಮಿಸುವುದು – ಒಂದು ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿಗೆ ಸಚಿವ ನೇತೃತ್ವದ ಮಂಡಳಿ ಒಪ್ಪಿಗೆ ಅಗತ್ಯ – ವಿವಿ ಆದೇಶ ನಿಯಮಬಾಹಿರ ಎಂದಾದಲ್ಲಿ ಸರ್ಕಾರಕ್ಕೆ ರಾಜ್ಯಪತ್ರದ ಮೂಲಕ ರದ್ದುಗೊಳಿಸುವ ಅಧಿಕಾರ