Advertisement
ಬಳಿಕ ಮಾತನಾಡಿ, ಸರ್ಕಾರಿ ಜಾಗದಲ್ಲಿ ಅನಧಿ ಕೃತವಾಗಿ ನಿರ್ಮಾಣ ಮಾಡಿಕೊಂಡ ಬಡವರಿಗೆ ಸಕ್ರಮೀಕರಣಗೊಳಿಸುವ ಕಾರ್ಯ ಮಾಡಲಾ ಗುತ್ತಿದೆ. ತಾಲೂಕಿನಲ್ಲಿ 150 ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಈಗಾಗಲೇ ತಾಲೂಕಿನ ಪಾಂಡು ರಂಗಪುರದಲ್ಲಿ 27, ಇತರೆ ಹಳ್ಳಿಗಳಿಗೆ 51, ಬೊಮ್ಮವಾರದಲ್ಲಿ 3 ಜನರಿಗೆ ಸಾಗುವಳಿ ಚೀಟಿ, 57 ಜನರಿಗೆ ಹಕ್ಕುಪತ್ರ, ಬೈಚಾಪುರದಲ್ಲಿ 15 ಫಲಾನು ಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಇಡೀ ಗ್ರಾಪಂಗಳಲ್ಲಿ ನನಗೆ ಅಣ್ಣೇಶ್ವರ ಪಂಚಾಯಿತಿ ಮೆಚ್ಚಿನದಾಗಿದೆ ಎಂದರು.
Related Articles
Advertisement
ತಹಶೀಲ್ದಾರ್ ಕೇಶವಮೂರ್ತಿ ಮಾತನಾಡಿ, ಹಕ್ಕುಪತ್ರಗಳನ್ನು ಪಡೆದ ಅರ್ಹ ಫಲಾನುಭವಿಗಳಿಗೆ ಎಷ್ಟು ಜಮೀನು ಮಂಜೂರಾಗಿದೆಯೋ, ಅದನ್ನು ಆರ್‌ಟಿಸಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ದಾಖಲು ಮಾಡಿಕೊಳ್ಳುತ್ತಾರೆ. ಅರ್ಹ ಫಲಾನುಭವಿ ಗಳು ತಮ್ಮ ಕುಟುಂಬ ನಡೆಸಿಕೊಂಡು ಹೋಗಲು ಸರ್ಕಾರದ ಆದೇಶದಂತೆ ಹಕ್ಕುಪತ್ರಗಳನ್ನು ಬಡವರಿಗೆ ಹಂಚಲಾಗಿದೆ ಎಂದು ಹೇಳಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಮುನೇಗೌಡ, ಕುಂದಾಣ ಹೋಬಳಿ ಅಧ್ಯಕ್ಷ ಚಂದ್ರೇಗೌಡ, ವಿಶ್ವನಾಥಪುರ ಗ್ರಾಪಂ ಅಧ್ಯಕ್ಷ ರಾಮಮೂರ್ತಿ, ಸದಸ್ಯೆ ಲಕ್ಷಮ್ಮ, ಮುಂಖಡ ಮನಗೊಂಡನಹಳ್ಳಿ ಜಗದೀಶ್, ರಬ್ಬನಹಳ್ಳಿ ಪ್ರಭಾಕರ್ ಇದ್ದರು.