Advertisement
ಉಡುಪಿ: ಯಾವುದೇ ಸರಕಾರಿ ವಿಶ್ವವಿದ್ಯಾನಿಲಯ ಇಲ್ಲದ ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕೆ, ಪಶು ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿ ಇದ್ದರೂ ಕೃಷಿಗೆ ಪೂರಕವಾದ ಪಶುಸಂಗೋಪನೆ, ಮೀನು ಗಾರಿಕೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವಲಂಬಿಸಿ ಕೊಂಡಿದ್ದಾರೆ. ಆದರೆ ಇವರಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಮಾಹಿತಿ ಪೂರೈಕೆಯಲ್ಲಿ ಕೊರತೆ ಇದೆ. ಇತ್ತೀಚೆಗಿನ ದಿನಗಳಲ್ಲಿ ದೇಸೀ ತಳಿಗಳ ಉಪಯುಕ್ತತೆ ಕುರಿತು ವಿಶೇಷ ಆಸಕ್ತಿ ಬೆಳೆಯುತ್ತಿದೆ. ಈ ಭಾಗದ ದೇಸೀ ತಳಿಗಳು ಕಣ್ಮರೆ ಯಾಗುವ ಸ್ಥಿತಿಯಲ್ಲಿವೆ. ಕರಾವಳಿಯ ಎಮ್ಮೆ, ಬನ್ನೂರು-ಮಂಡ್ಯ ಕುರಿ ತಳಿಗಳ ಮೇಲೆ ಸಂಶೋಧನೆ ನಡೆಸಲು ಸಾಕಷ್ಟು ಅವಕಾಶಗಳಿವೆ. ಇದಕ್ಕೆಲ್ಲಾ ಪಶು ಸಂಗೋಪನೆ ವಿಶ್ವವಿದ್ಯಾನಿಲಯವನ್ನು ಅವಿಭಜಿತ ಕನ್ನಡ ಜಿಲ್ಲೆಯಲ್ಲಿ ಒಂದಾದರೂ ಕಡೆ ಇರಬೇಕೆಂಬುದು ಜನರ ಆಗ್ರಹ.
Related Articles
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಮಾರು 35 ಎಕ್ರೆ, ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸುಮಾರು 100 ಎಕ್ರೆ ಭೂಮಿ ಇರುವುದರಿಂದ ಸರಕಾರಿ ಜಾಗವನ್ನು ಹುಡುಕುವ ಅಗತ್ಯವಿಲ್ಲ. ಇವೆರಡೂ ಕೃಷಿ, ಹೈನುಗಾರಿಕೆಗೆ ಪೂರಕವಾದ ಸಂಸ್ಥೆಗಳು. ಜಿಲ್ಲಾ ಕೇಂದ್ರಕ್ಕೆ ಸಮೀಪವೂ ಜಿಲ್ಲೆಯ ಮಧ್ಯ ಭಾಗದಲ್ಲಿಯೂ ಇರುವ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಿಂದಾಗಿ ಸುಲಭ ಸಂಪರ್ಕ ಸಾಧ್ಯ ಎನ್ನಲಾಗುತ್ತಿದೆ.
Advertisement
ದಕ್ಷಿಣ ಕರ್ನಾಟಕದ ಸಂಸ್ಥೆಗಳುಶಿವಮೊಗ್ಗ, ಹಾಸನ, ಬೆಂಗಳೂರು, ಪುತ್ತೂರು ಕೊçಲದ ಪಶುವೈದ್ಯಕೀಯ ಕಾಲೇಜು, ಬೆಂಗಳೂರಿನ ಹೈನುಗಾರಿಕ ವಿಜ್ಞಾನ ಕಾಲೇಜು, ಲಸಿಕೆ ತಯಾರಿಕೆ ಸಂಸ್ಥೆ, ನಾಲ್ಕು ಮೀನುಗಾರಿಕಾ ಸಂಸ್ಥೆಗಳಾದ ಮಂಗಳೂರಿನ ಮೀನುಗಾರಿಕಾ ಕಾಲೇಜು, ಬೆಂಗಳೂರು ಹೆಬ್ಟಾಳ, ಹೇಸರಘಟ್ಟ, ಅಂಕೋಲಾದ ಮೀನುಗಾರಿಕಾ ಸಂಶೋಧನ ಕೇಂದ್ರಗಳು, ತಿಪಟೂರು, ನಾಗಮಂಗಲ, ಮುಳುಬಾಗಿಲಿನ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ, ತಿಪಟೂರು, ಗುಂಡ್ಲುಪೇಟೆ, ಹಾಸನದ ಪಶುಸಂಗೋಪನ ಪಾಲಿಟೆಕ್ನಿಕ್, ಮಂಗಳೂರು ಮತ್ತು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ, ಕೊಡಗಿನ ವನ್ಯಜೀವಿ ಚಿಕಿತ್ಸಾ ಸಂಸ್ಥೆ, ಶಿವಮೊಗ್ಗದ ಮಲೆನಾಡು ತಳಿ ಅಭಿವೃದ್ಧಿ ಸಂಸ್ಥೆ, ಜಾನುವಾರು ನಿಗೂಢ ಕಾಯಿಲೆಗಳ ಸಂಶೋಧನ ಕೇಂದ್ರ, ಕೂಡಿಗೆಯ ವನ್ಯಜೀವಿ ಸಂಶೋಧನ ಕೇಂದ್ರ. ಉಡುಪಿ ಜಿಲ್ಲೆಯಲ್ಲಿ ಅಗತ್ಯವೇಕೆ?
ಬೀದರ್‌ನ ಏಕೈಕ ವಿ.ವಿ.; ಹೆಚ್ಚಿದ ರಾಜ್ಯದ ಒತ್ತಡ
ಉಡುಪಿ ಜಿಲ್ಲೆಯಲ್ಲಿ ಸರಕಾರಿ ವಿ.ವಿ.ಗಳೇ ಇಲ್ಲ
ಕರಾವಳಿಯ ಮೀನುಗಾರಿಕಾ ಚಟು ವಟಿಕೆಗಳನ್ನು ಬಲಪಡಿಸಲು ಪಶು ವೈದ್ಯಕೀಯ ವಿ.ವಿ. ಜತೆ ಸಂಲಗ್ನ ಗೊಳಿಸುವ ಅವಕಾಶ.
ಪ್ರಾಧ್ಯಾಪಕರು, ವೈದ್ಯರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೀದರ್‌ಗಿಂತ ಎಷ್ಟೋ ಪಟ್ಟು ಹೆಚ್ಚಿನ ಸೌಲಭ್ಯ ಹೊಂದಿದ ಕರಾವಳಿ ಪ್ರದೇಶ. ನಮ್ಮ ದೃಷ್ಟಿ ಇದ್ದದ್ದು ಮೀನುಗಾರಿಕಾ ವಿ.ವಿ. ಸ್ಥಾಪನೆ ಕುರಿತು. ಪಶುವೈದ್ಯಕೀಯ ಮತ್ತು ಮೀನುಗಾರಿಕಾ ವಿ.ವಿ.ಯ ಹೊಸ ಪ್ರಸ್ತಾವನೆಯನ್ನು ಚರ್ಚಿಸುತ್ತೇವೆ.
– ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವರು. ಬೀದರ್‌ನಲ್ಲಿರುವ ಒಂದೇ ವಿ.ವಿ. ಯಲ್ಲಿ ಪಶು ವೈದ್ಯಕೀಯ ಮತ್ತು ಮೀನು ಗಾರಿಕಾ ಎರಡೂ ವಿಷಯ ಗಳು ಇರುವು ದರಿಂದ ದಕ್ಷಿಣ ಕರ್ನಾಟಕದಲ್ಲಿ ಇಂತಹ ವಿ.ವಿ. ಪ್ರಸ್ತಾವನೆ ಯನ್ನು ಸಚಿವರ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತರು ತ್ತೇನೆ. ಉಡುಪಿ ಜಿಲ್ಲೆಗೆ ಇಂತಹ ಒಂದು ಸಂಸ್ಥೆಯ ಅಗತ್ಯವಿದೆ.
– ಕೆ. ರಘುಪತಿ ಭಟ್, ಶಾಸಕರು, ಉಡುಪಿ ಮಟಪಾಡಿ ಕುಮಾರಸ್ವಾಮಿ