Advertisement
ಕಲ್ಮಾಡಿಯಲ್ಲಿ ಡಂಪಿಂಗ್ ಯಾರ್ಡ್?ಆದಿವುಡುಪಿಯಿಂದ ಮಲ್ಪೆಗೆ ಬರುವ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲೂ ಕಸ ರಾರಾಜಿಸುತ್ತಿದೆ. ಕಲ್ಮಾಡಿ ಚರ್ಚ್ ಸಮೀಪದ ಒಂದು ಕಡೆ ಡಂಪಿಂಗ್ ಯಾರ್ಡ್ ನಿರ್ಮಾಣಗೊಳ್ಳುತ್ತಿದೆ. ಈ ಭಾಗದಲ್ಲಿ ರಾತ್ರಿ ಸ್ವಲ್ಪ ಕತ್ತಲು ಇರುವುದರಿಂದ ಕಸ ಎಸೆಯುವವರಿಗೆ ವರದಾನವಾಗಿದೆ. ರಸ್ತೆಗಳು ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಈ ಭಾಗದಲ್ಲಿ ಸುರಿದ ಕಸದ ರಾಶಿಯನ್ನು ತೆರವುಗೊಳಿಸದೆ ಎರಡು ಮೂರು ತಿಂಗಳು ಕಳೆದು ಹೋಗಿದ್ದು, ಪರಿಹಾರವೇ ಕಂಡುಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಕೊಳೆತ ತ್ಯಾಜ್ಯಗಳನ್ನು ನಾಯಿಗಳು ಕಾಗೆಗಳು ಹೆಕ್ಕಿ, ಕುಕ್ಕಿ ತಿನ್ನುತ್ತಾ ಎಲ್ಲಡೆ ಎಸೆಯುವುದರಿಂದ ಪರಿಸರದಲ್ಲಿ ರೋಗ ಹರಡುವ ಭೀತಿ ಎದುರಾಗಿದೆ.
ಕಟ್ಟು ಕಟ್ಟು ಕಸಸಂಬಂಧಪಟ್ಟ ಆಡಳಿತ ಎರಡು ಮೂರು ದಿನಕ್ಕೆ ಕಸವನ್ನು ತೆರವುಗೊಳಿಸಿದರೂ ತೆರವುಗೊಳಿಸಿ ಮಾರನೇ ದಿನವೇ ಅಷ್ಟೆ ಎತ್ತರದಲ್ಲಿ ಕಸದ ರಾಶಿ ಪ್ರತ್ಯಕ್ಷವಾಗುವುದು ಆಡಳಿತಕ್ಕೆ ತಲೆನೋವಾಗಿದೆ. ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ದ ಕಠಿನ ಕ್ರಮ ಕೈಗೊಳ್ಳುವ ಆದೇಶಗಳು, ಜನಜಾಗೃತಿ ಮೂಡಿಸುವ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದರೂ ಜನ ತಮ್ಮ ಎಂದಿನ ಚಾಳಿಯನ್ನು ಬಿಡದೆ ಗೋಣಿ ಚೀಲದಲ್ಲಿ ತಂದು ಎಸೆದು ಹೋಗುವ ಜನರ ವರ್ತನೆಗೆ ಆಡಳಿತ ವ್ಯವಸ್ಥೆ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಈ ಕಾರಣದಿಂದಲೇ ತ್ಯಾಜ್ಯ ಮತ್ತೆ ಮತ್ತೆ ರಸ್ತೆ ಬದಿಯಲ್ಲಿ ರಾಶಿ ಬೀಳುತ್ತಿದೆ. ಪತ್ತೆ ಹಚ್ಚಲು ನಿರ್ಧಾರ
ಹಲವಾರು ಬಾರಿ ಇಲ್ಲಿನ ಕಸವನ್ನು ಸ್ಥಳೀಯರೇ ತೆರವು ಮಾಡಿದ್ದರು. ಆದರೆ ಮರುದಿನ ಮತ್ತೆ ಅಷ್ಟೆ ಕಸ ಬಂದು ಬೀಳುತ್ತಿತ್ತು. ನಗರದ ಸ್ವತ್ಛತೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು, ಬೇಕಾಬಿಟ್ಟಿಯಾಗಿ ಕಸ ಎಸೆಯುವ ಆನಾಗರಿಕರಾಗಿ ವರ್ತಿಸುವ ಇಂತವರನ್ನು ಮುಂದೆ ಕಾದು ಕುಳಿತು ಪತ್ತೆ ಹಚ್ಚಲು ಸ್ಥಳೀಯರು ಮುಂದಾಗಿದ್ದಾರೆ. ಕಸ ಎಸೆದವರಿಂದಲೇ ತೆರವುಗೊಳಿಸುತ್ತೇವೆ
ಹಲವಾರು ಬಾರಿ ಇಲ್ಲಿನ ಕಸವನ್ನು ಸ್ಥಳೀಯರೇ ಶ್ರಮದಾನದ ಮೂಲಕ ತೆರವು ಮಾಡಿದ್ದರು. ಆದರೆ ಮರುದಿನ ಮತ್ತೆ ಅಷ್ಟೆ ಕಸ ಬಂದು ಬೀಳುತ್ತಿತ್ತು. ನಗರದ ಸ್ವತ್ಛತೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು, ಬೇಕಾಬಿಟ್ಟಿಯಾಗಿ
ಕಸ ಎಸೆಯುವ ಅನಾಗರಿಕರಾಗಿ ವರ್ತಿಸುವ ಇಂತಹವರನ್ನು ಮುಂದೆ ರಾತ್ರಿ ಪೂರ್ತಿ ಕಾದು ಕುಳಿತು ಪತ್ತೆ ಹಚ್ಚಿ ಅವರಿಂದಲೇ ಕಸ ತೆಗಿಸಲು ಮುಂದಾಗಿದ್ದೇವೆ.
-ಸುಂದರ್ ಜೆ. ಕಲ್ಮಾಡಿ, ನಗರಸಭಾ ಸದಸ್ಯ ಸೂಕ್ತ ಕ್ರಮಕ್ಕೆ ನಿರ್ಧಾರ
ಕಸ ವಿಲೇವಾರಿಗೆ ಪಂಚಾಯತ್‌ನಿಂದ ಯಾವುದೇ ವ್ಯವಸ್ಥೆ ಇಲ್ಲ. ಹಿಂದೆ ನಗರಸಭೆಗೆ ಹೇಳಿ ವಿಲೇವಾರಿ ಮಾಡಲಾಗುತ್ತಿತ್ತು. ಇದೀಗ ಎರಡು ತಿಂಗಳಿನಿಂದ ಕಸ ಬಾಕಿ ಉಳಿದಿದೆ. ಪಂಚಾಯತ್ ಮುಖಾಂತರ ಸಿಬಂದಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಶ್ರಮದಾನದ ಮೂಲಕ ಕಸ ತೆರವು ಮಾಡಲು ನಿರ್ಧರಿಸಲಾಗಿದ್ದು, ಮುಂದೆ ಇಲ್ಲಿ ಕಸ ಎಸೆಯುವವರ ವಿರುದ್ದವೂ ಸೂಕ್ತ ಕ್ರಮ ತೆಗೆದುಕೊಳ್ಳುವ ತೀರ್ಮಾನವನ್ನು ಕೈಗೊಂಡಿದ್ದೇವೆ.
– ವಸಂತಿ, ಪಿಡಿಒ, ಅಂಬಲಪಾಡಿ ಗ್ರಾ.ಪಂ.