Advertisement
ಗುರುವಾರ ಬೆಳಗಿನ ಜಾವ ಕಾಲುವೆ ಒಡೆದಿದ್ದು ಕಾಲುವೆಯಲ್ಲಿ ಸುಮಾರು 4 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿತ್ತು. ಅಪಾರ ಪ್ರಮಾಣದ ನೀರು ನದಿಯ ಪಾಲಾಗಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ 1ತಿಂಗಳ ಹಿಂದೆ ಗಂಗಾವತಿ ತಾಲ್ಲೂಕಿನ ಕೇಸರಹಟ್ಟಿ ಹತ್ತಿರ ಕಾಲುವೆ ಒಡೆದು ಸುಮಾರು ವಾರ ಕಾಲ ಕಾಲುವೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಇದೀಗ ಪುನಃ ಗುರುವಾರ ಬೆಳಗಿನ ಜಾವ ಮುನಿರಾಬಾದ್ ಪವರ್ ಹೌಸ್ ಹತ್ತಿರ ಕಾಲುವೆಯ ಪಕ್ಕದಲ್ಲಿ ಬೆಳೆದಿರುವ ಗಿಡ ಮರಗಳ ಬೇರುಗಳಿಂದ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡು ಸಣ್ಣ ಪ್ರಮಾಣದ ನೀರು ಸೋರಿಕೆಯಾಗಿದ್ದು ಕಾಲುವೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ನದಿಯ ಪಾಲಾಗಿದೆ.
Related Articles
Advertisement
ತುಂಗಭದ್ರಾ ಎಡದಂಡೆ ಕಾಲುವೆ ಮುನಿರಾಬಾದ್ ಹತ್ತಿರ ಒಡೆದಿದ್ದು ಮರಗಳ ಬೇರು ಕಾಲುವೆಯ ಬುಡದಲ್ಲಿ ಹೋಗಿ ಸ್ವಲ್ಪ ಪ್ರಮಾಣದ ನೀರು ಸೋರಿಕೆಯಾಗಿ ಇದೀಗ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದು ಕೂಡಲೇ ಡ್ಯಾಂನಲ್ಲಿ ಕಾಲುವೆ ನೀರು ಹರಿಸುವುದನ್ನು ಬಂದ್ ಮಾಡಲಾಗಿದ್ದು ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಮಾಡಿ ಒಂದೆರಡು ದಿನದಲ್ಲಿ ಕಾಲುವೆಗೆ ನೀರು ಹರಿಸಲಾಗುತ್ತದೆ ಅಚ್ಚುಕಟ್ಟು ಪ್ರದೇಶದ ರೈತರು ಯಾವುದೇ ಆತಂಕಕ್ಕೆ ಒಳಗಾಗದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ (ಕಾಡಾ) ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಉದಯವಾಣಿ ಜತೆ ಮಾತನಾಡಿ ತಿಳಿಸಿದ್ದಾರೆ.