Advertisement

ಮಾ. 15: “ತುಳು ಜ್ಞಾತಿ ಪದಕೋಶ’ಲೋಕಾರ್ಪಣೆ

01:00 AM Mar 13, 2019 | Harsha Rao |

ಉಳ್ಳಾಲ : ಸಂಶೋಧ ನಾಸಕ್ತರಿಗೆ ಹಾಗೂ ಅಧ್ಯಯನ ನಡೆಸುವವರಿಗೆ ಉಪಯುಕ್ತವಾಗಲಿ ರುವ ನಿಟ್ಟೆ ವಿವಿ ಪ್ರಾಯೋಜಿತ ತುಳು ಭಾಷಾ ನಿಘಂಟು “ತುಳು ಜ್ಞಾತಿ ಪದಕೋಶ’ ಮಾ. 15ರಂದು ಕೆ.ಎಸ್‌. ಹೆಗ್ಡೆ ಚಾರಿಟೆಬಲ್‌ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ. 

Advertisement

ನಿಟ್ಟೆ (ಪರಿಗಣಿತ) ವಿವಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿಟ್ಟೆ ವಿವಿ ಕುಲಪತಿ ಡಾ| ಸತೀಶ್‌ ಭಂಡಾರಿ ಮಾಹಿತಿ ನೀಡಿದರು. ನಿಟ್ಟೆ ವಿವಿ ತುಳುಭಾಷಾ ಪೀಠವು ಡಾ| ಪದ್ಮನಾಭ ಕೇಕುಣ್ಣಾಯ ಹಾಗೂ ಡಾ| ಸಾಯಿಗೀತಾ ಸಂಪಾದಕತ್ವದಲ್ಲಿ, ಡಾ| ವಾಮನ ನಂದಾವರ, ಬೆನೆಟ್‌ ಅಮ್ಮನ್ನ ಹಾಗೂ ತಾಂತ್ರಿಕ ಸಹಾಯಕ ಪ್ರದ್ಯೋತ್‌ ಹೆಗ್ಡೆ ಹಾಗೂ ವಿವಿಧ ಸಂಸ್ಥೆಗಳ ವಿದ್ವಾಂಸರ ಸಹಯೋಗದಲ್ಲಿ ಐದು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಹೊರತಂದಿರುವ “ತುಳು ಜ್ಞಾತಿ ಪದಕೋಶ’ ತುಳು ಭಾಷೆಯ ಅಭಿವೃದ್ಧಿಯಲ್ಲಿ ಮೈಲಿಗಲ್ಲು. ದ್ರಾವಿಡ ಭಾಷೆ ಗಳ ಈ ಜ್ಞಾತಿ ಪದಕೋಶದಲ್ಲಿ ತುಳು ಪದಗಳನ್ನು ಮುಖ್ಯ ಉಲ್ಲೇಖವಾಗಿ ನೀಡಲಾಗಿದ್ದು, ಅನುಕ್ರಮವಾಗಿ ಕನ್ನಡ, ಕೊಡವ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಯ ಜ್ಞಾತಿಪದಗಳನ್ನು ಕೊಡಲಾಗಿದೆ. ಹವ್ಯಕ, ಕನ್ನಡ, ಮೋಯ, ಮಲ ಯಾಳಂ, ಕೊರಗ ಮತ್ತು ಬ್ಯಾರಿ ಭಾಷೆಗಳ ಪದಗಳನ್ನು ಯಥಾರೀತಿ ಬಳಸಿಕೊಳ್ಳಲಾಗಿದೆ ಎಂದರು.

ಡಾ| ಹಂಪ ನಾಗರಾಜಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಪ್ರೊ| ಬಿ.ಎ. ವಿವೇಕ ರೈ, ಡಾ| ಎಸ್‌. ರಮಾ ನಂದ ಶೆಟ್ಟಿ, ಎ.ಸಿ. ಭಂಡಾರಿ, ನಿಟ್ಟೆ ವಿವಿ ಕುಲಾಧಿಪತಿ ಎನ್‌. ವಿನಯ ಹೆಗ್ಡೆ, ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.

ಜ್ಞಾತಿ ಪದಕೋಶದ ಸಂಪಾದಕರಲ್ಲಿ ಓರ್ವರಾದ ಡಾ| ಸಾಯಿಗೀತಾ ಮಾತನಾಡಿ, ಪದಕೋಶದಲ್ಲಿ 7,064 ಮುಖ್ಯ ಪದಗಳಿದ್ದು, 37,300ಕ್ಕಿಂತ ಹೆಚ್ಚು ಜ್ಞಾತಿಪದಗಳಿಗೆ ಅರ್ಥಗಳನ್ನು ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next