Advertisement

ಸತ್ಯ, ವಿಜ್ಞಾನ, ರೋಗಿಪರ ಧೈರ್ಯ ಅಗತ್ಯ

01:54 AM Nov 23, 2020 | mahesh |

ಉಡುಪಿ: ಅಧಿಕಾರದಲ್ಲಿರುವವರಿಗೆ ಸತ್ಯ ಹೇಳಲು, ವಿಜ್ಞಾನದ ಪ್ರತಿಪಾದ ಕರಾಗಲು, ರೋಗಿಗಳಿಗಾಗಿ ಪ್ರತಿಪಾದಿಸಲು ಸದಾ ಧೈರ್ಯ ಬೇಕು. ರೋಗಿಗಳಿಗಾಗಿ ಮಾಡಿದ ಶ್ರಮ ಉತ್ತಮ ಫ‌ಲಿತಾಂಶ ನೀಡದಿದ್ದರೂ ಅಗತ್ಯದ ಕೆಲಸಕ್ಕಾಗಿ ನಾವು ಶ್ರಮಿಸ  ಲೇಬೇಕು. ಈ ಪರಿಶ್ರಮ ಜಗತ್ತಿನ ಒಳಿತಿಗಾಗಿ ಎಂಬ ಅರಿವು ಇದ್ದಿರಬೇಕು ಎಂದು ನ್ಯಾಶನಲ್‌ ಬೋರ್ಡ್‌ ಆಫ್ ಮೆಡಿಕಲ್‌ ಎಕ್ಸಾಮಿನರ್ ಅಧ್ಯಕ್ಷ ಮತ್ತು ಸಿಇಒ ಡಾ| ಪೀಟರ್‌ ಜೆ. ಕತ್ಸುಪ್ರಾಕಿಸ್‌ ಕರೆ ನೀಡಿದರು.

Advertisement

ರವಿವಾರ ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ 28ನೇ ಇ ಘಟಿಕೋತ್ಸವದ ಮೂರನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪಾಠ ಕಲಿಸಿದ ಕೋವಿಡ್
ಕೊರೊನಾ ಕಾಲಘಟ್ಟದಲ್ಲಿ ವಿಜ್ಞಾನವೇ ವೈದ್ಯಕೀಯ ಪ್ರಯೋಗಕ್ಕೆ ಮೂಲ ಎನ್ನುವ ಪಾಠವನ್ನು ಕಲಿಯಲಾಗಿದೆ. ವೈದ್ಯಕೀಯ ಶಿಕ್ಷಣ ಪಡೆದ ಬಳಿಕವೂ ವೃತ್ತಿ ಜೀವನದುದ್ದಕ್ಕೂ ವಿದ್ಯಾರ್ಥಿಗಳಾಗಿ ಕಲಿಯುತ್ತಿ ರಬೇಕು ಎಂಬ ಸಂದೇಶವಿದೆ. ಇದು ಹೊರೆಯಲ್ಲ, ಬದಲಾಗಿ ಇದು ಅವಕಾಶ. ವೈದ್ಯಕೀಯ ಕ್ಷೇತ್ರದಲ್ಲಿ ಮಾನವ ಜನಾಂಗದ ಸುಧಾರಣೆಯಲ್ಲಿ ನಾವು ಪಾಲ್ಗೊಳ್ಳಲು ಸಿಕ್ಕಿದ ಅವಕಾಶವಿದು ಎಂದರು.

ಮಾಹೆ ಟ್ರಸ್ಟಿ ವಸಂತಿ ಆರ್‌. ಪೈ, ಸಹಕುಲಾಧಿಪತಿ ಡಾ| ಎಚ್‌. ಎಸ್‌.ಬಲ್ಲಾಳ್‌, ಸಹ ಕುಲಪತಿಗ ಳಾದ ಡಾ| ಪಿಎಲ್‌ಎನ್‌ಜಿ ರಾವ್‌, ಡಾ| ದಿಲೀಪ್‌ ಜಿ. ನಾಯ್ಕ, ಡಾ| ಸಿ.ಎಸ್‌. ತಮ್ಮಯ್ಯ, ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಮೌಲ್ಯಮಾಪನ ಕುಲಸಚಿವ ಡಾ| ವಿನೋದ ಥಾಮಸ್‌, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ| ಗೀತಾ ಮಯ್ಯ, ಉಪಕುಲಸಚಿವರಾದ ಡಾ| ಗುರು ಪ್ರಸಾದ್‌, ಡಾ| ಪ್ರೀತಮ್‌ ಕುಮಾರ್‌ ಉಪಸ್ಥಿತ ರಿದ್ದರು. ಐಕಾಸ್‌ ನಿರ್ದೇಶಕ ಡಾ| ರಾಧಾಕೃಷ್ಣ ಎಸ್‌. ಐತಾಳ ಅವರು ವಂದಿಸಿದರು.

ಅತೀ ದೊಡ್ಡ ಖಾಸಗಿ ವಿ.ವಿ.ಯಾಗಲು ಯತ್ನ
ದೇಶದ ಅತೀ ದೊಡ್ಡ ಖಾಸಗಿ ವಿ.ವಿ.ಯಾಗಲು ನಮ್ಮ ನಿರಂತರ ಪ್ರಯತ್ನ ನಡೆಯುತ್ತಿದೆ. ಭಾರತದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು ವಿಶ್ವಾಸಾರ್ಹತೆಯನ್ನು ಸುಧಾರಿಸಲು ನಾವು ಗುಣ ಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next