ನಟ ಜಗ್ಗೇಶ್ ಮೇಕಪ್ ಎಂಬ ಸಿನಿಮಾ ಮಾಡಿರೋದು ನಿಮಗೆ ಗೊತ್ತೇ ಇದೆ. ಆ ಸಿನಿಮಾದಲ್ಲಿ ನಟಿಸುವ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿ ಕೊಂಡಿ ದ್ದರು ಜಗ್ಗೇಶ್. ಆದರೆ, ಆ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಆ ಚಿತ್ರವನ್ನು ಜಗ್ಗೇಶ್ ಆ ಕಾಲಕ್ಕೆ ಅದ್ಧೂರಿ ಯಾಗಿಯೇ ನಿರ್ಮಿಸಿದ್ದರು. ಆದರೆ ಚಿತ್ರ ಹಿಟ್ ಆಗದ ಪರಿಣಾಮ ಅವತಿಗೆ 75ಲಕ್ಷ ರೂ.ನಷ್ಟವಾಯಿ ತಂತೆ. ಆ ನಷ್ಟ ಭರಿಸಲು ಜಗ್ಗೇಶ್ ತಮ್ಮ ಮನೆಯನ್ನು ಮಾರಿದರಂತೆ. ಆ ಮನೆ ಈಗ 35 ಕೋಟಿ ರೂ. ಬೆಲೆ ಬಾಳುತ್ತಂತೆ.
ಆ ಮನೆಯನ್ನುಕೊಂಡ ಅವರ ಸ್ನೇಹಿತನಿಗೆ ಈಗ 16 ಲಕ್ಷ ಬಾಡಿಗೆ ಬರುತ್ತಿದೆಯಂತೆ. ತಮ್ಮ ಪ್ರತಿಭೆಯನ್ನು ಹೊರ ರಾಜ್ಯಗಳಿಗೂ ಪಸರಿಸ ಬೇಕೆಂಬ ಉದ್ದೇಶದಿಂದ ಜಗ್ಗೇಶ್ ಈ ಸಿನಿಮಾ ನಿರ್ಮಿಸಿದರಂತೆ. ಈ ಚಿತ್ರದಲ್ಲಿ ಅವರ ದೊಡ್ಡಮ್ಮನ ಪಾತ್ರ ಸಖತ್ ಹಿಟ್ ಆಗಿತ್ತು. ಆದರೆ ಚಿತ್ರಮಂದಿರದಲ್ಲಿ ಮಾತ್ರ ಆ ಚಿತ್ರ ಓಡಲಿಲ್ಲ. ಜಗ್ಗೇಶ್ ಆ ಚಿತ್ರದಿಂದ ಕಳೆದು ಕೊಂಡದ್ದನ್ನು ಅದೇ ವರ್ಷ ಪಡೆದರಂತೆ. ಯಾರಧ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಕಾಸಿದ್ದವನೇ ಬಾಸ್ ಚಿತ್ರಗಳು ವಾಪಾಸ್ ಕೊಟ್ಟವಂತೆ.
ಬಿಲ್ಡಪ್ ಬಗ್ಗೆ ಬೇಸರ: ಇನ್ನು ಜಗ್ಗೇಶ್ ಬಿಲ್ಡಪ್ ಮೂಲಕ ಜನಪ್ರಿಯತೆ ಗಳಿಸಲು ಮುಂದಾಗಿರುವ ಕೆಲವರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಬಿಲ್ಡಪ್ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ಅವರು ಮಾಡಿರುವ ಟ್ವೀಟ್‌ಗಳು ಈ ರೀತಿ ಇವೆ… ಎಂಥ ಬಿಲ್ಡಪ್ ಕಾಲವಿದು! ಗನ್ ಮ್ಯಾನ್, ಬೌನ್ಸರ್ ಇದ್ದವನ ಒಪ್ಪಿ ಯುಗೆ ಯುಗೆ ಅಂತೆ! ಎಲ್ಲಾ ಇದ್ದು ಸಾಮಾನ್ಯನಂತೆ ಬದುಕುವವ ಎಲ್ಲು ಸಲ್ಲದ ಸಾಮಾನ್ಯನಂತೆ! ವೈ? ವಾಕರಿಕೆ ಬರುತ್ತಿದೆ ಇತ್ತೀಚಿನ ನಡಾವಳಿ ಕಂಡು! ತುಂಬಿದ ಕೊಡ ತುಳು ಕೋಲ್ಲಾ!
ಅರ್ಧ ತುಂಬಿದ ಕೊಡವೆ ಶಬ್ದ ಜಾಸ್ತಿ! ಬಿಲ್ಡಪ್‌ನಿಂದ ಅಳೆಯದಿರಿ ಸಾಧನೆ!ಎಲ್ಲ ಬಿಲ್ಡಪ್ ಕೊಟ್ಟು ಬೋರ್ ಆಗಿದೆ! ಎಂಥ ಕಾಲಘಟ್ಟ ಇಂದು! ರಾಜ್, ವಿಷ್ಣು, ಅಂಬಿ, ಪ್ರಭಾಕರ್, ಶಂಕರ್ ಜಮಾನ ಕಂಡವರು ನಾವು!ಇಂದು ಜಾಲ ತಾಣ ಕುಬೇರನ ಬಿಲ್ಡಪ್‌ಗ್ಳಿಗೆ ಜೈ ಅನ್ನಬೇಕೇಕಂತೆ! ಅಂದರೆ ಗ್ರೇಟ್ ಇಲ್ಲಾಂದ್ರೆ ಚಿತ್ರಾನ್ನವಂತೆ! ಕರ್ಮವೇ ಇದನ್ನ ಮೀರಿ ಬೆಳೆದ ಸಂತತಿ ನಾವು! ಇಂದು ಹುಟ್ಟು ಸಾವು ಬರಿ ಜಾಲತಾಣದಲ್ಲೆ ನಿರ್ಧಾರ ಮಾಡದಿರಿ… ಅದಮೀರಿ ಬೆಳೆದ ಸಂತತಿ ಯವರು ನಾವು! ನಾವು ನೋ ಬಿಲ್ಡಪ್!
ಬಿಲ್ಡಪ್ ಜಮಾನ ನೋಡಿ ಬೋರ್ ಆಗಿದೆ ಸಹೋದರಿ! ಕೊರೋನ ಮನುಜನ್ಮ ಜಾಲಾಡಿಸಿ ರುಬ್ಬಿದರು ಎಚ್ಚರ ಆಗುತ್ತಿಲ್ಲಾ ಮನುಜನ್ಮ! ಹೇಗೆ ಅರಿವಾಗುವುದೋ ಕ್ಷಣಿಕ ಸುಖಕದ ಮನುಜನಿಗೆ ನಾ ಕಾಣೆ ದೇವರಾಣೆ.. ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಎರಡು ಭಾಗಗಳಲ್ಲಿ ಚಿತ್ರ ತೆರೆಕಾಣಲಿದೆ.