Advertisement

ಬಸವಣ್ಣನ ನೈಜ ಸಂದೇಶಗಳನ್ನು ಮಕ್ಕಳಿಗೆ ನೀಡುವ ಕೆಲಸ ಆಗಬೇಕು: ಜಯ ಮೃತ್ಯುಂಜಯ ಶ್ರೀ

11:44 AM May 31, 2022 | Team Udayavani |

ಹುಬ್ಬಳ್ಳಿ: ಜಗಜ್ಯೋತಿ ಬಸವಣ್ಣನವರ ಬಗ್ಗೆ ಪಠ್ಯಪುಸ್ತಕದಲ್ಲಿ ಪರಿಷ್ಕರಣೆ ಮಾಡಿರುವ ಸಾಲನ್ನು ನೋಡಿ ಎದೆಗೆ ಕಲ್ಲು ಹೊಡೆದಂತೆ ಆಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಚಾರದಲ್ಲಿ ಮೌನ ವಹಿಸಿದರೆ ಬಸವ ಭಕ್ತರಿಗೆ ನೋವಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯ ಪುಸ್ತಕ ರಚನೆಯಲ್ಲಿ ಕುವೆಂಪು ಹಾಗೂ ಬಸವಣ್ಣನರ ತತ್ವಕ್ಕೆ ಅಪಚಾರವಾಗುವಂತ ಕೆಲಸವಾಗಿದೆ. ಬಸವಣ್ಣನವರ ಮೂಲ ಉದ್ದೇಶದ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಸೈದ್ಧಾಂತಿಕ ವಿಚಾರಕ್ಕೆ ಕೈ ಹಾಕಬಾರದು. ಅವರ ನೈಜ ಸಂದೇಶಗಳನ್ನು ಮಕ್ಕಳಿಗೆ ನೀಡುವ ಕೆಲಸ ಆಗಬೇಕು ಎಂದಿದ್ದಾರೆ.

ಇದನ್ನೂ ಓದಿ:ಮುಳ್ಳಯ್ಯನಗಿರಿಗೆ ಜೀಪ್‌ನ ಟಾಪ್‌ನಲ್ಲಿ ಕುಳಿತು ಪ್ರಯಾಣ: ಪ್ರಕರಣ ದಾಖಲು

ಅಸಮಾನತೆ ವಿರುದ್ದ ಬಸವಣ್ಣ ಮನೆ ಬಿಟ್ಟಿದ್ದಾರೆ ಎಂಬುವುದು ಜಗಜ್ಜಾಹೀರಾಗಿದೆ. ಆದ್ರೆ ಪಠ್ಯಪುಸ್ತಕದಲ್ಲಿ ಸೇರಿಸಿದ್ದನ್ನು ನೋಡಿ ನಮಗೆ ಬಹಳ ಬೇಸರವಾಗಿದೆ. ಬೊಮ್ಮಾಯಿಯವೇ ನಿಮ್ಮ ತಂದೆಯವರು ಬಸವಣ್ಣನ ಭಕ್ತರಾಗಿದ್ದರು. ಅವರು ಹೇಗೆ ಬದುಕಿದ್ದರು ಎಂಬುವುದನ್ನು ಒಮ್ಮೆ ನೋಡಿ. ಈ ವಿಚಾರದಲ್ಲಿ ನೀವು ಮೌನ ವಹಿಸಿದರೆ ಬಸವ ಭಕ್ತರಿಗೆ ನೋವಾಗುತ್ತದೆ. ಅನೇಕ ಪೂಜ್ಯರ ಮಾರ್ಗದರ್ಶನ ನಿಮಗಿದೆ. ಪುಸ್ತಕ ಬಿಡುಗಡೆ ಆಗುವ ಮುಂಚೆ ಲೋಪದೋಷ ಸರಿಪಡಿಸಿ. ಬಸವಣ್ಣನವರ ತತ್ವ ಸಿದ್ದಾಂತಕ್ಕೆ ಧಕ್ಕೆ ತಂದರೆ ನಾವು ಸಹಿಸಿಕೊಳ್ಳುವುದಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next