Advertisement
ಈಗಾಗಲೆ ನವಮಂಗಳೂರು ಬಂದರು ಮಂಡಳಿ 12.5 ಎಕ್ರೆ ಭೂಮಿಯ ಏರ್ ಸರ್ವೆ ಪೂರ್ಣಗೊಂಡಿದೆ. ಸುಮಾರು 600 ಟ್ರಕ್ ನಿಲುಗಡೆಯ ವ್ಯವಸ್ಥೆ ಇರಲಿದೆ.
ಇದರಿಂದ ಹಲವಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗಾವಕಾಶ ಲಭಿಸಲಿದೆ. ಟ್ರಕ್ ಟರ್ಮಿನಲ್‌ಗೆ ಏರ್ ಸರ್ವೆ
ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಎನ್‌ಎಂಪಿಟಿ ಭೂಮಿ ನೀಡಲು ತಾತ್ವಿಕವಾಗಿ ಒಪ್ಪಿದ್ದು ಬೈಕಂಪಾಡಿ ಬಳಿ ಭೂಮಿಯ ಏರ್‌ಸರ್ವೆ ಮಾಡಲಾಗಿದೆ. ಇತ್ತೀಚೆಗೆ ರಾಜ್ಯ ಸರಕಾರದ ಕೈಗಾರಿಕಾ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ಕೈಗಾರಿಕಾ ಆಯುಕ್ತ ಕುಂಞನ್ ಕೃಷ್ಣ ಅವರು ಎನ್‌ಎಂಪಿಟಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಎನ್‌ಎಂಪಿಟಿ ಕೈಗೊಂಡ ಕಾರ್ಯದ ಬಗ್ಗೆ ಮಾಹಿತಿ ನೀಡಲಾಗಿದೆ.
Related Articles
Advertisement
ಸರಕಾರದಿಂದ ಸಹಕಾರಬೈಕಂಪಾಡಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಎನ್‌ಎಂಪಿಟಿ ಜಾಗ ಗುರುತಿಸಿದ್ದು ದೇವರಾಜ ಅರಸು ಟ್ರಕ್ ಟರ್ಮಿನಲ್ ಸಹಕಾರದಲ್ಲಿ ನಿರ್ಮಿಸುವ ಯೋಜನೆಯಿದೆ. ಈಗಾಗಲೇ ಈ ಬಗ್ಗೆ ಎನ್‌ಎಂಪಿಟಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಅಲ್ಲಿರುವ ಜಾಗದಲ್ಲಿ ಟ್ರಕ್ ಟರ್ಮಿನಲ್‌ನ್ನು ಅವರೇ ನಿರ್ವಹಣೆ ಮಾಡುವುದಿದ್ದರೆ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ.
- ಗೋಕುಲ್ ದಾಸ್ ನಾಯಕ್, ಜಂಟಿ ನಿರ್ದೇಶಕರು, ಸಣ್ಣ ಕೈಗಾರಿಕೆ ಇಲಾಖೆ ದ.ಕ. ಶೀಘ್ರ ಕ್ರಮಕ್ಕೆ ಆಗ್ರಹ
ದೇವರಾಜ ಅರಸು ಟ್ರಕ್ ಟರ್ಮಿನಲ್‌ಗೆ 12.5 ಎಕ್ರೆ ಪ್ರದೇಶದಲ್ಲಿ ನಿರ್ಮಾಣಕ್ಕೆ ಎನ್‌ಎಂಪಿಟಿಯು ಬೈಕಂಪಾಡಿ ಕೈಗಾರಿಕಾ ಪ್ರಾಂಗಣದ ಬಳಿ ಇರುವ ತನ್ನ ಜಾಗದಲ್ಲಿ ಏರ್‌ಸರ್ವೆ ಮಾಡಿದೆ. ಇದು ಆರಂಭಿಕ ಹಂತದಲ್ಲಿದೆ. ಸಣ್ಣ ಕೈಗಾರಿಕಾ ಸಂಘ ಬೈಕಂಪಾಡಿ ವತಿಯಿಂದ ನಾವು ಇದರ ನಿರ್ಮಾಣಕ್ಕೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ನೀಡಿದ್ದೇವೆ.ಇದಲ್ಲದೆ ಮಂಗಳೂರು ಬೆಂಗಳೂರು ಟ್ರಾನ್ಸ್‌ಫೋರ್ಟ್ ವ್ಯವಸ್ಥೆ ಬಲಪಡಿಸಲೂ ಮನವಿ ಮಾಡಿದ್ದೇವೆ.
-ಅಜಿತ್ ಕಾಮತ್, ಅಧ್ಯಕ್ಷರು ಸಣ್ಣ ಕೈಗಾರಿಕಾ ಸಂಘ