Advertisement

The Trial: 23 ವರ್ಷಗಳ ನಂತರ ಕಾಜೋಲ್ ಲಿಪ್ ಲಾಕ್ ಸೀನ್: ವಿಡಿಯೋ ವೈರಲ್

04:50 PM Jul 15, 2023 | Team Udayavani |

ಮುಂಬಯಿ: ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿನ ಇತ್ತೀಚಿನ ವೆಬ್ ಸರಣಿ ‘ದಿ ಟ್ರಯಲ್’ ಅನ್ನು ಘೋಷಿಸಿದ ದಿನದಿಂದಲೇ ಭಾರಿ ಸದ್ದು ಮಾಡುತ್ತಿದೆ. ಈ ಸರಣಿಯು ಖ್ಯಾತ ನಟಿ ಕಾಜೋಲ್ ಅವರ ಚೊಚ್ಚಲ OTT ಪ್ರವೇಶವಾಗಿದೆ. ಆಶ್ಚರ್ಯಕರ ನಡೆಯಲ್ಲಿ, ಕಾಜೋಲ್ 23 ವರ್ಷಗಳ ನಂತರ ತನ್ನ ನೋ ಕಿಸ್ಸಿಂಗ್ ನೀತಿಯನ್ನು ಮುರಿದು  ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ!.

Advertisement

ವಕೀಲೆ ನೊಯೋನಿಕಾ ಸೇನ್ ಗುಪ್ತಾ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ 48 ರ ಹರೆಯದ ಕಾಜೋಲ್ ತನ್ನ ಸಹ-ನಟರಾದ ಅಲಿ ಖಾನ್ ಮತ್ತು ಜಿಸ್ಶು ಸೇನ್ ಗುಪ್ತಾ ಅವರೊಂದಿಗೆ ಎರಡು ವಿಭಿನ್ನ ಸಂಚಿಕೆಗಳಲ್ಲಿ ತೆರೆಯ ಮೇಲಿನ ಚುಂಬನಗಳನ್ನು ಹಂಚಿಕೊಂಡಿದ್ದಾರೆ.

ಚುಂಬನದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಾಜೋಲ್ ಅವರ ದಿಟ್ಟ ನಿರ್ಧಾರಕ್ಕೆ ಆಘಾತವನ್ನೂ ಜತೆಯಲ್ಲಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಕಾಜೋಲ್ ಮತ್ತು ಆಕೆಯ ಸಹ-ನಟರ ನಡುವಿನ ಕೆಮೆಸ್ಟ್ರಿಯನ್ನು ಅನೇಕರು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next