Advertisement

ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗುತ್ತಿದ್ದವನ ರಕ್ಷಣೆ

11:11 PM Aug 24, 2019 | Lakshmi GovindaRaj |

ಹೊಸನಗರ: ಅಬ್ಬಿ ಫಾಲ್ಸ್‌ ವೀಕ್ಷಣೆ ವೇಳೆ ಕಾಲು ಜಾರಿ ನೀರು ಪಾಲಾಗುತ್ತಿದ್ದ ಪ್ರವಾಸಿಗನೊಬ್ಬನನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ. ಬೆಂಗಳೂರು ನಗರ ನಿವಾಸಿ ನವೀನ್‌ (27) ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಪ್ರವಾಸಿಗ.

Advertisement

ಹೊಸನಗರ ತಾಲೂಕಿನ ಯಡೂರು- ಸುಳುಗೋಡು ಪಂಚಾಯತ್‌ ವ್ಯಾಪ್ತಿಯಲ್ಲಿ ಇರುವ ಅಬ್ಬಿ ಫಾಲ್ಸ್‌ ವೀಕ್ಷಣೆಗೆ ಶನಿವಾರ ಬೆಂಗಳೂರಿನಿಂದ ಪ್ರವಾಸಿಗರು ಆಗಮಿಸಿದ್ದರು. ಇವರಲ್ಲಿ ನಾಲ್ವರು ಕಾಲು ಜಾರಿ ಬಿದ್ದರು. ಮೂವರು ಅಪಾಯದಿಂದ ಪಾರಾದರೆ ಓರ್ವ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸುಮಾರು 15 ರಿಂದ 20 ಅಡಿ ಕೆಳಗಡೆ ಸಿಕ್ಕಿಕೊಂಡಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರು ಆಗಮಿಸಿ, ಹಗ್ಗ ಬಳಸಿ ಪ್ರವಾಸಿಗನನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

200 ಅಡಿ ಧುಮುಕುವ ಅಬ್ಬಿ: ಅಬ್ಬಿಫಾಲ್ಸ್‌ ಹಂತ, ಹಂತವಾಗಿ 200 ಅಡಿ ಮೇಲಿನಿಂದ ಧುಮ್ಮಿಕ್ಕುತ್ತದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಫಾಲ್ಸ್‌ಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಶನಿ ವಾರ ಕೂಡ ಪ್ರವಾಸಿಗರು ಜಲಪಾತ ವೀಕ್ಷ ಣೆಗೆ ಆಗಮಿಸಿದ್ದರು. ಆಗ ಅವಘಡ ಸಂಭವಿಸಿತು. ಸಮಯಪ್ರಜ್ಞೆಯಿಂದ ಸಾಹಸ ಮೆರೆದು ಪ್ರವಾಸಿಗನನ್ನು ರಕ್ಷಿಸಿದ ಯಡೂರು ಯುವಕರ ತಂಡದ ಕಾರ್ಯವನ್ನು ಪ್ರವಾಸಿಗರು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next