Advertisement

ನೀರಿನ ಟ್ಯಾಂಕ್‌ ಸಮೀಪವೇ ಕಸದ ರಾಶಿ

12:53 AM Mar 20, 2020 | Sriram |

ಗೋಳಿಯಂಗಡಿ: ಮಡಾಮಕ್ಕಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾಂಡಿ ಮೂರು ಕೈ ಸಮೀಪದ ಹಲವಾರು ಮನೆಗಳಿಗೆ ನೀರು ಪೂರೈಕೆ ಮಾಡುವ ಓವರ್‌ ಹೆಡ್‌ ಟ್ಯಾಂಕ್‌ ಪಕ್ಕದಲ್ಲೇ ಕಸವನ್ನು ಡಂಪ್‌ ಮಾಡಲಾಗುತ್ತಿದೆ. ನೀರಿನ ಟ್ಯಾಂಕ್‌ ಪಕ್ಕದಲ್ಲೇ ಕಸದ ರಾಶಿ ಬಿದ್ದಿದೆ.

Advertisement

ಹೆಬ್ರಿ, ಸೋಮೇಶ್ವರ ಹಾಗೂ ಬೆಳ್ವೆ – ಗೋಳಿಯಂಗಡಿ ಪೇಟೆಗಳನ್ನು ಸಂಧಿಸುವ ಮಾಂಡಿ ಮೂರುಕೈ ಪ್ರದೇಶ ಪ್ರಮುಖ ಜಂಕ್ಷನ್‌ ಆಗಿದ್ದು, ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜಂಕ್ಷನ್‌ನಿಂದ ತುಸು ದೂರದಲ್ಲೇ ಸ್ವಲ್ಪ ಒಳ ಪ್ರದೇಶದಲ್ಲಿ ಈ ನೀರಿನ ಟ್ಯಾಂಕ್‌ ಇದೆ. ಅದರ ಸಮೀಪವೇ ಈ ಕಸವನ್ನು ಡಂಪ್‌ ಮಾಡಲಾಗಿದೆ.

ಪಂಚಾಯತ್‌ನವರ ಬಳಿ ಕೇಳಿದರೆ ಇದು ಪಂಚಾಯತ್‌ ವ್ಯಾಪ್ತಿಯವರು ಕಸ ಎಸೆಯುತ್ತಿರುವುದಲ್ಲ, ವಾಹನಗಳಲ್ಲಿ ಬೇರೆ ಬೇರೆ ಕಡೆಗಳಿಂದ ಬಂದಂತಹ ಜನರು ಬೆಳಗ್ಗೆ ಬೇಗ ಹಾಗೂ ರಾತ್ರಿ ವೇಳೆ ಇಲ್ಲಿಗೆ ಬಂದು ಕಸ ಎಸೆದು ಹೋಗುತ್ತಾರೆ ಎನ್ನುತ್ತಾರೆ.

ವಿಲೇವಾರಿ ಘಟಕವಿಲ್ಲ
ಮಡಾಮಕ್ಕಿ, ಅಲಾºಡಿ, ಗೋಳಿಯಂಗಡಿ ಪಂಚಾಯತ್‌ ವ್ಯಾಪ್ತಿಗಳಲ್ಲಿ ಎಲ್ಲಿಯೂ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಘಟಕಗಳು ಇಲ್ಲದಿರುವುದೇ ಇಂತಹ ಡಂಪಿಂಗ್‌ ಯಾರ್ಡ್‌ಗಳು ಅಲ್ಲಲ್ಲಿ ಸೃಷ್ಟಿಯಾಗಲು ಕಾರಣ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ತೆರವಿಗೆ ಆಗ್ರಹ
ಕೊರೊನಾ ಸೋಂಕು, ಹಕ್ಕಿ ಜ್ವರ ಮತ್ತಿತರ ಸಾಂಕ್ರಮಿಕ ರೋಗಗಳು ಎಲ್ಲೆಡೆ ಹಬ್ಬುತ್ತಿದ್ದು, ಕುಡಿಯುವ ನೀರಿನ ಟ್ಯಾಂಕ್‌ ಸಮೀಪವೇ ರಾಶಿ ಬಿದ್ದಿರುವ ಕಸದ ರಾಶಿಯನ್ನು ಕೂಡಲೇ ಸಂಬಂಧಪಟ್ಟ ಸ್ಥಳೀಯ ಪಂಚಾಯತ್‌ನವರು ತೆರವು ಮಾಡಬೇಕು ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next