Advertisement

ಉಗ್ರ ದಮನದ ಹಾದಿಯಲ್ಲಿ ಭಾರತೀಯ ಸೇನೆಯ ಪಾರಮ್ಯ

01:07 AM Nov 26, 2020 | mahesh |

ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ನಮ್ಮ ಭದ್ರತಾಪಡೆಗಳ ತ್ವರಿತ ಹಾಗೂ ಸಕ್ಷಮ ಕಾರ್ಯಾಚರಣೆಗಳಿಂದಾಗಿ ಪಾಕಿಸ್ಥಾನದ ದುಷ್ಟ ಯೋಜನೆಗಳೆಲ್ಲ ವಿಫ‌ಲವಾಗುತ್ತಾ ಸಾಗಿವೆ. ಇತ್ತೀಚೆಗಷ್ಟೇ ಗಡಿ ಭದ್ರತಾ ಪಡೆಗಳ ಕಾರ್ಯಾಚರಣೆಗೆ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ನಾಲ್ವರು ಉಗ್ರರು ಧರೆಗುರುಳಿದ್ದರು. ಇದರ ಬೆನ್ನಲ್ಲೇ ಉಗ್ರರು ಭಾರತದೊಳಕ್ಕೆ ನುಸುಳುವುದಕ್ಕಾಗಿ ಕೊರೆದಿದ್ದ ರಹಸ್ಯ ಸುರಂಗ ಮಾರ್ಗವನ್ನೂ ಬಿಎಸ್‌ಎಫ್ ಪತ್ತೆ ಹಚ್ಚಿತ್ತು.

Advertisement

ಇಂಥ ಸುರಂಗಗಳನ್ನು ಕೊರೆಯುವುದಕ್ಕೆ ಉಗ್ರ ಸಂಘಟನೆಗಳಿಗೆ ಪಾಕಿಸ್ಥಾನಿ ಸೇನೆ ಸಹಕರಿಸುತ್ತಿದೆ. ಈ ಘಟನೆಯ ನಂತರ ನಮ್ಮ ಸೇನೆಯು ಜಮ್ಮುವಿನಿಂದ ಗುಜರಾತ್‌ವರೆಗಿನ 3,300 ಕಿ.ಮೀ. ಗಡಿ ರೇಖೆಯುದ್ದಕ್ಕೂ ಇಂಥ ರಹಸ್ಯ ಸುರಂಗಗಳನ್ನು ಪತ್ತೆಹಚ್ಚುವ ಆ್ಯಂಟಿ ಟನಲ್‌ ಡ್ರೈವ್‌ ಕಾರ್ಯಾಚರಣೆ
ಆರಂಭಿಸಿದೆ.

ಗಮನಾರ್ಹ ಸಂಗತಿಯೆಂದರೆ, ಜಮ್ಮು-ಕಾಶ್ಮೀರದಲ್ಲಿ ನಗ್ರೋಟಾ ವಲಯದಲ್ಲಿ ನಾಲ್ಕು ಪಾಕಿಸ್ಥಾನಿ ಉಗ್ರರು ಹತರಾದ ಅನಂತರ, ಜೈಶ್‌ ಉಗ್ರಸಂಘಟನೆಯ ನಾಯಕ ಮುಫ್ತಿ ರೌಫ್ ಅಸYರ್‌, ಉಗ್ರ ದಾಳಿಗಳಿಗೆ ಅಗತ್ಯವಾದ ಪರಿಕರಗಳನ್ನು ತಲುಪಿಸಲು ಕಷ್ಟವಾಗುತ್ತಿದೆ ಎಂದು ಕಾಶ್ಮೀರದಲ್ಲಿನ ಉಗ್ರರಿಗೆ ಸಂದೇಶ ಕಳುಹಿಸಿದ್ದಾನೆಂದು ವರದಿಯಾಗಿದೆ. ಜೈಶ್‌-ಎ ಮೊಹಮ್ಮದ್‌ನ ಮುಖ್ಯಸ್ಥ ಮಸೂದ್‌ ಅಜರ್‌ನ ಕಿರಿಯ ಸಹೋದರ ಈ ಮುಫ್ತಿ ಅಸರ್‌. ಭಾರತದ ವಿರುದ್ಧದ ಹಲವು ದುಷ್ಕೃತ್ಯಗಳಲ್ಲಿ ಈತನನ್ನು ಮಾಸ್ಟರ್‌ಮೈಂಡ್‌ ಎನ್ನಲಾಗುತ್ತದೆ. ಒಟ್ಟಿನಲ್ಲಿ ಕಣಿವೆ ಭಾಗದಲ್ಲಿ ಭಾರತೀಯ ಸೇನೆಯ ಉಗ್ರ ನಿಗ್ರಹ ಕಾರ್ಯತಂತ್ರಗಳು ಎಷ್ಟು ಸಫ‌ಲವಾಗುತ್ತಿವೆ ಎನ್ನುವುದಕ್ಕೆ ಆತನ ಈ
ಹೇಳಿಕೆಯೂ ಸಾಕ್ಷಿ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನದ ರದ್ದತಿ ಮತ್ತು ಆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿಸಿದ ಅನಂತರದಿಂದ, ಜಮ್ಮು-ಕಾಶ್ಮೀರ ಭಾಗದಲ್ಲಿ ಉಗ್ರರ ಹಾವಳಿ ಗಣನೀಯವಾಗಿ ತಗ್ಗುತ್ತಿದೆ. ಪಾಕ್‌ ಪರ ಕುತಂತ್ರ ನಡೆಸುವವರ ಸದ್ದಡಗಿಸಲಾಗುತ್ತಿದೆ. ಆದರೂ ಭಾರತ ದ್ವೇಷವನ್ನೇ ಕಣಕಣದಲ್ಲಿ ತುಂಬಿಕೊಂಡಿರುವ ಜೈಶ್‌ನಂಥ ಉಗ್ರ ಸಂಘಟನೆಗಳು ತಮ್ಮ ದುಷ್ಕೃತ್ಯವನ್ನು ನಿಲ್ಲಿಸುತ್ತವೆ ಅಥವಾ ಅವಕ್ಕೆ ಎಲ್ಲÉ ರೀತಿಯಿಂದಲೂ ಸಹಕರಿಸುತ್ತಿರುವ ಪಾಕ್‌ ಸೇನೆ ಸುಮ್ಮನಾಗುತ್ತದೆ ಎಂದು ಭಾವಿಸುವುದಕ್ಕೂ ಸಾಧ್ಯವಿಲ್ಲ.

ಗುಪ್ತಚರ ಮಾಹಿತಿಯ ಪ್ರಕಾರ ಗಡಿ ನಿಯಂತ್ರಣ ರೇಖೆಯ ಸನಿಹ ಲಷ್ಕರ್‌ ಹಾಗೂ ಜೈಶ್‌, ಖೈಬರ್‌ ಪಖು¤ನ್ವಾ ಪ್ರಾಂತ್ಯದಲ್ಲಿ ಹಿಜ್ಬುಲ್‌ ಉಗ್ರ ಸಂಘಟನೆ ತಮ್ಮ ಜೆಹಾದಿಗಳಿಗೆ ತರಬೇತಿ ನೀಡುತ್ತಿವೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆಯೂ ಉಗ್ರರ ಸದ್ದಡಗಿಸಲು ಸರ್ವಸನ್ನದ್ಧವಾಗಿ ನಿಂತಿದೆ. ಇನ್ನೊಂದೆಡೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಇಮ್ರಾನ್‌ ಸರಕಾರ ತನ್ನ ದೇಶವಾಸಿಗಳ ಗಮನವನ್ನು ಮತ್ತೆ ಕಾಶ್ಮೀರದ ವಿಚಾರದತ್ತ ಸೆಳೆಯಲು ಹರಸಾಹಸ ಪಡುತ್ತಿರುವುದೂ ಸ್ಪಷ್ಟವಾಗುತ್ತಿದೆ. ಹೀಗಾಗಿ, ಇಮ್ರಾನ್‌ ಸರಕಾರದ ದುರುಳ ಉದ್ದೇಶಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಖಂಡಿಸುವ, ಈ ವಿಚಾರದಲ್ಲಿ ವಿಶ್ವ ಸಮುದಾಯದ ಗಮನ ಸೆಳೆಯುವ ಪ್ರಯತ್ನಕ್ಕೂ ಭಾರತ ಸರಕಾರ ವೇಗ ನೀಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next