ಮುಂಬಯಿ: ವಿವಿಧ ನಗರಗಳ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಯಿಂದಾಗಿ ಹೆಚ್ಚಿನ ರೈಲುಗಳನ್ನು ಕೋವಿಡ್ ರೋಗಿಗಳಿಗೆ ಆಸ್ಪತ್ರೆ ಗಳಾಗಿ ಬಳಸಲಾಗುತ್ತಿದ್ದು, ನಂದೂÃ …ಬಾರ್ ಬಳಿಕ ಅಂತಹ ಮತ್ತೂಂದು ರೈಲು ನಾಗಪುರದಲ್ಲಿ ಬಳ ಸಲು ಸಿದ್ಧಗೊಂಡಿದೆ.
ನಾಗಪುರ ಮಹಾನಗರ ಪಾಲಿಕೆಯ ಆಯುಕ್ತರು ಕ್ವಾರಂಟೈನ್‌ಗಾಗಿ ಆಸ್ಪತ್ರೆ ರೈಲೊಂದಕ್ಕೆ ಬೇಡಿಕೆ ಇಟ್ಟಿದ್ದು, ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಹನ್ನೊಂದು ಕೋಚ್ ಪರಿವರ್ತಿತ ರೈಲು ಪ್ರಸ್ತುತ ಸಿದ್ಧವಾಗಿದೆ. ರಾಜ್ಯದ ಬೇಡಿಕೆಯಂತೆ ರೈಲ್ವೇ ಮಹಾರಾಷ್ಟ್ರದ ಅಜ್ನಿ ಪ್ರದೇಶದ ಒಳನಾಡಿನ ಕಂಟೈನರ್ ಡಿಪೋದಲ್ಲಿ ಪ್ರತ್ಯೇಕ ಬೋಗಿಗಳನ್ನು ಸಜ್ಜುಗೊಳಿಸುತ್ತಿದೆ. 11 ಬೋಗಿಗಳನ್ನು ಹೊಂದಿರುವ ರೈಲು ಏಕಕಾಲಕ್ಕೆ 176 ರೋಗಿಗಳಿಗೆ ಅವಕಾಶ ಕಲ್ಪಿಸುತ್ತದೆ. ರೈಲಿನಲ್ಲಿ ಆಮ್ಲಜನಕ ಸಿಲಿಂಡರ್‌ಗಳು ಮತ್ತು ಮೂಲ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ನಾಗಪುರ ಮಹಾನಗರ ಪಾಲಿಕೆ ಮತ್ತು ನಾಗಪುರ ವಿಭಾಗೀಯ ರೈಲ್ವೇ ವ್ಯವಸ್ಥಾಪಕರ ಕಚೇರಿ ನಡುವೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ.
ಈ ಹಿಂದೆ ನಂದೂರ್‌ಬಾರ್‌ನಲ್ಲಿ ಕೋವಿಡ್ ರೋಗಿಗಳಿಗಾಗಿ 21 ಕೋರ್ಚ್‌ಗಳ ರೈಲೊಂದನ್ನು ನಂದೂರ್‌ಬಾರ್ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3ರಲ್ಲಿ ಇರಿಸಲಾಗಿದೆ. ಪ್ರಸ್ತುತ ಕನಿಷ್ಠ 57 ರೋಗಿಗಳು ಈ ಸೌಲಭ್ಯವನ್ನು ಬಳಸುತ್ತಿದ್ದು, 322 ಹಾಸಿಗೆಗಳು ಇನ್ನೂ ಲಭ್ಯವಿವೆ. ಬಿಸಿಲ ತಾಪವನ್ನು ತಡೆಗಟ್ಟಲು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ವಸ್ತುಗಳಿಂದ ವಿಶಿಷ್ಟ ಮತ್ತು ಪರಿಣಾಮಕಾರಿ ತಂಪಾಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಗಪುರದಲ್ಲೂ ಇದೇ ರೀತಿಯ ವ್ಯವಸ್ಥೆ ಜಾರಿಗೆ ತರಲಾಗಿದೆ. ರೋಗಿ ಯನ್ನು ಸ್ಥಳಾಂತರಿಸಲು ಆ್ಯಂಬು ಲೆನ್ಸ್‌ಗಳಂತಹ ಮೂಲ ವ್ಯವಸ್ಥೆ ಗಳನ್ನು ರಾಜ್ಯವು ಅರೆವೈದ್ಯಕೀಯ ಸಿಬಂದಿಯೊಂದಿಗೆ ಲಭ್ಯ ವಾಗು
ವಂತೆ ಮಾಡಲಿದೆ.
ರೈಲಿಗೆ ನೀರು, ವಿದ್ಯುತ್ ಸಂಪರ್ಕ ಮತ್ತು ನಿರ್ವ ಹಣೆ ನೀಡಲಾಗು ವುದು. ತರಬೇತ ು ದಾರರಿಗೆ ಅಗತ್ಯ ವಾದ ವೈದ್ಯಕೀಯ ಮೂಲ ಸೌಕರ್ಯ ಗಳನ್ನು ಹೊಂದಿದ್ದು, ರೈಲ್ವೇಗಳು ಎಂಒಯುಗೆ ಅನುಗುಣವಾಗಿ ವೈದ್ಯ ಕೀಯ ಸಿಬಂದಿಗೆ ಸ್ಥಳ ಮತ್ತು ಉಪಯುಕ್ತತೆ ವಿಂಗಡಿಸಲು ಯೋಜಿಸುತ್ತಿವೆ. ಜತೆಗೆ ನೈರ್ಮಲ್ಯ ಮತ್ತು ಅಡುಗೆ ವ್ಯವಸ್ಥೆಯನ್ನು ನೋಡಿ ಕೊಳ್ಳುತ್ತವೆ ಎಂದು ಕೇಂದ್ರ ರೈಲ್ವೇ ವಕ್ತಾರರು ತಿಳಿಸಿ¨ªಾರೆ.
ರೈಲನ್ನು ಮತ್ತೆ ರೈಲ್ವೇಗೆ ಹಸ್ತಾಂತ ರಿ ಸುವಾಗ ಎಲ್ಲ ಬಯೋ ಮೆಡಿ ಕಲ್ ತ್ಯಾಜ್ಯ ತೊಟ್ಟಿಗಳನ್ನು ಸ್ವತ್ಛ ಗೊಳಿಸಿ ಖಾಲಿಯಾಗುವಂತೆ ನೋಡಿ ಕೊಳ್ಳ ಬೇಕು ಎಂದು ಅವರು ಹೇಳಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಾಲಕಾಲಕ್ಕೆ ಹೊರ ಡಿಸಿದ ಪ್ರೋಟೋಕಾಲ್ ಪ್ರಕಾರ ರೈಲನ್ನು ಸ್ವತ್ಛಗೊಳಿಸಿ ಸೋಂಕು ರಹಿ ತವಾಗುವಂತೆ ಮಾಡಿ, ಮುಂದಿನ ಆದೇಶದವರೆಗೆ ಲಾಕ್ ಮಾಡ ಲಾಗುತ್ತದೆ ಎಂದು ಕೇಂದ್ರ ರೈಲ್ವೇ ವಕ್ತಾರರು ಹೇಳಿದ್ದಾರೆ.