Advertisement

ಕಾಡಿದ ಕಂಬಾರ-ಖರ್ಗೆ ಗೈರು

11:27 AM Mar 05, 2018 | Team Udayavani |

ಕಲಬುರಗಿ: ಉತ್ಸವನ್ನು ಉದ್ಘಾಟನೆ ಮಾಡಲು ಒಪ್ಪಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರ ಅವರು ಬರುತ್ತಾರೆ. ಒಂದು ಹಾಡು ಹಾಡುತ್ತಾರೆ ಎಂದು ಆಸೆ ಇಟ್ಟುಕೊಂಡಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಶೆ ಆಯಿತು. ಸಂಸದ ಮಲ್ಲಿಕಾರ್ಜನ ಖರ್ಗೆ, ಪ್ರಿಯಾಂಕ ಖರ್ಗೆ ಗೈರು ಕೂಡ ವೇದಿಕೆ ಭಣಗುಟ್ಟಿತ್ತು. ಇದ್ದುದ್ದರಲ್ಲಿ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್‌ ವೇದಿಕೆಯಲ್ಲಿದ್ದದ್ದು ಕೊಂಚ ಮೆರಗು ತಂದಿತು. ಚುರುಕಾದ ಮತ್ತು ಆಕರ್ಷಕ ಧನಿಯಲ್ಲಿ ಮೂಡಿ ಬಂದ ಕಾರ್ಯಕ್ರಮ ನಿರೂಪಣೆ ಹಲವು ಕೊರತೆಗಳಿಗೆ ಅಂಕದ ಪರೆದೆಯಾಯಿತು.

Advertisement

ಗೋಷ್ಠಿಗಳ ಕಾಡಿದ ಖಾಲಿ ಕುರ್ಚಿ: ಬಹುತೇಕ ಮಧ್ಯಾಹ್ನದ ಗೋಷ್ಠಿಗಳು, ಅನುಭಾವ ಕಾರ್ಯಕ್ರಮಕ್ಕೆ ಖಾಲಿ ಕುರ್ಚಿಗಳೇ ಮೂಕ ಪ್ರೇಕ್ಷಕರಾಗಿದ್ದವು. ಭರ್ಜರಿ ಊಟದ ಬಳಿಕ ಬಿಸಿಲು ಇದ್ದುದ್ದರಿಂದ ನೀರಿನ ಕೊರತೆ ಕಾಡಿತು. ಉದ್ಘಾಟನೆ ಸಮಾರಂಭದಲ್ಲಿ ಅಧಿಕೃತ ಉದ್ಘಾಟಕರ ಬದಲು ಅತಿಥಿ ಉದ್ಘಾಟಕರಾಗಿ ಉತ್ಸವ ಮಾನ ಕಾಪಾಡಿದ್ದ ಎಚ್‌.ಎಸ್‌. ಶಿವಪ್ರಕಾಶ ವೇದಿಕೆ ಕೊನೆಯಲ್ಲಿ ಕುಳಿತದ್ದು ಅಭಾಸಕ್ಕೆ ಕಾರಣವಾಯಿತು. ಅಲ್ಲದೆ, ಅವರು ಜರೂರ ಕೆಲಸದ ನಿಮಿತ್ತ ತಮ್ಮ ಮಾತು ಮುಗಿಯುತ್ತಿದ್ದಂತೆ ವೇದಿಕೆಯಿಂದ ಇಳಿದರು. ನಿರೂಪಕರು ಉದ್ಘಾಟಕರ ಮಾತಿನ ಮಧ್ಯೆ ಊಟಕ್ಕೆ ವ್ಯವಸ್ಥೆ ಇದೆ. ಹೋಗಬೇಡಿ ಎಂದು ಮನವಿ ಮಾಡಿದ್ದು ಜಾತ್ರೆ ಉದ್ಘಾಟನೆ ನೆನಪಿಗೆ ತಂತು. ನಾಮಕಾವಾಸ್ತೆ ಮಳಿಗೆಗಳು ನಿರ್ಮಾಣ ಮಾಡಲಾಗಿತ್ತು. ಅವು ಬಹುತೇಕ ಖಾಲಿ ಇದ್ದವು.

Advertisement

Udayavani is now on Telegram. Click here to join our channel and stay updated with the latest news.

Next