Advertisement
ಜೆ.ಸಿ.ನಗರದಲ್ಲಿ ನಡೆಯುತ್ತಿದ್ದ ಮಳೆ ನೀರುಗಾಲುವೆ ತಡೆಗೋಡೆ ಕಾಮಗಾರಿಯನ್ನು ಉಪಗುತ್ತಿಗೆ ನೀಡಲಾಗಿತ್ತು. ಆದರೂ ಸಹ ಗುತ್ತಿಗೆ ಪಡೆದ ಸಂಸ್ಥೆಯ ಎಂಜಿನಿಯರ್ ಸ್ಥಳದಲ್ಲಿ ಇರಬೇಕಿತ್ತು. ಅವರು ಸ್ಥಳದಲ್ಲಿದ್ದು ಕಾರ್ಮಿಕರಿಗೆ ಸೂಚನೆ ನೀಡಬೇಕು. ಸ್ಥಳದಲ್ಲಿ ಯಾರೂ ಘಟನೆ ನಡೆದ ದಿನ ಸ್ಥಳದಲ್ಲಿ ಯಾರು ಇರಲಿಲ್ಲ. ಈ ಅಜಾಗರೂಕತೆಯಿಂದಾಗಿಯೇ ದುರಂತ ಸಂಭವಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.
ಶಾಂತಕುಮಾರ್ ಸುಳಿವು ದೊರೆಯದ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಮೇಯರ್ ಜಿ.ಪದ್ಮಾವತಿ ಅವರು 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ, ನೀರಿನಲ್ಲಿ ಕೊಚ್ಚಿ ಹೋಗಿರುವ ಶಾಂತ ಕುಮಾರ್ ಪಾಲಿಕೆಯ ನೌಕರನಲ್ಲ. ನಿರ್ಮಾಣ ಗುತ್ತಿಗೆ ಪಡೆದ ಸಂಸ್ಥೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಅದರಂತೆ ಆ ಸಂಸ್ಥೆಯೇ ಆತನ ಕುಟುಂಬಕ್ಕೆ ಪರಿಹಾರ ನೀಡಬೇಕಾಗುತ್ತದೆ. ನೈಸರ್ಗಿಕ ವಿಪತ್ತಿನಿಂದ ಕೊಚ್ಚಿ ಹೋಗಿರುವುದರಿಂದ ಬಿಬಿಎಂಪಿ ನಿಯಮಾವಳಿಗಳ ಪ್ರಕಾರ 1 ರಿಂದ 2 ಲಕ್ಷ ಪರಿಹಾರ ನೀಡುವ ಅಧಿಕಾರ ಮೇಯರ್‌ಗಿದೆ. ಆದರೆ, ಮೇಯರ್ ಅವರು 10 ಲಕ್ಷ ಪರಿಹಾರ ಘೋಷಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾಗದಿರುವುದೂ ಸಂಶಯ ಮೂಡಿಸಿದೆ.