Advertisement

ಶೃಂಗೇರಿ ಪಟ್ಟಣ ಸಂಪೂರ್ಣ ಸ್ತಬ್ಧ

05:19 PM Mar 27, 2020 | Suhan S |

ಶೃಂಗೇರಿ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕೋವಿಡ್ 19 ಪರಿಣಾಮ ಬಂದ್‌ ವಾತಾವರಣ ಮುಂದುವರಿದಿದ್ದು,ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ.

Advertisement

ಯುಗಾದಿ ಸಡಗರ ಮಾಯವಾಗಿದ್ದು,ಸರಳವಾಗಿ ಹಬ್ಬವನ್ನು ಆಚರಿಸಲಾಗಿದೆ. ಯುಗಾದಿ ಹಬ್ಬದಲ್ಲಿ ಮನೆ ಮನೆಗೆ ತೆರಳಿ ಅರ್ಚಕರು ಯುಗಾದಿ ಪಂಚಾಗ ಶ್ರವಣ ಈ ವರ್ಷ ನಡೆಯಲಿಲ್ಲ.

ಬೇಗಾರು ಗ್ರಾಮದಲ್ಲಿ ಕಾಲೋನಿ ಮನೆಗಳಿಗೆ ಹೊರಗಿನಿಂದ ಹಳ್ಳಿಗೆ ಯಾರೂ ಬರದಂತೆ ರಸ್ತೆಗೆ ಬೇಲಿ ಹಾಕಿನಿರ್ಬಂಧಿ ಸಲಾಗಿದೆ. ಬ್ಯಾಂಕ್‌, ಸಹಕಾರ ಸಂಘಗಳು ಮಧ್ಯಾಹ್ನ 2 ರವರೆಗೆ ಕಾರ್ಯ ನಿರ್ವಹಿಸಿದವು. ಆದರೆ ಗ್ರಾಹಕರ ಸಂಖ್ಯೆ ತೀವ್ರ ಕುಸಿದಿತ್ತು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಅಂಗಡಿ ಎದುರು ಗ್ರಾಹಕರು ದೂರ ನಿಲ್ಲುವಂತೆ ಬಾಕ್ಸ್‌ ನಿರ್ಮಿಸಿದ್ದಾರೆ. ಪಟ್ಟಣದ ದಿನಸಿ ಅಂಗಡಿಯೊಂದು ಮನೆಗೆ ದಿನಸಿ ವಸ್ತುಗಳನ್ನು ಪೂರೈಸಲು ಮೊಬೈಲ್‌ ನಂಬರ್‌ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next